ಬಿಸಿಸಿಐ ವಿರುದ್ಧ ಕೆಂಡಕಾರಿದ ಯುವರಾಜ್ ಸಿಂಗ್..!

0
1026

ಮಾಜಿ ಕ್ರಿಕೆಟರ್ ಯುವರಾಜ್ ಸಿಂಗ್ ತಮ್ಮ ನಿವೃತ್ತಿಗೆ ಸಂಬಂಧಿಸಿದಂತೆ ಬಿಸಿಸಿಐ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಟೀಂ ಇಂಡಿಯಾದ ಮ್ಯಾನೇಜ್ಮೆಂಟ್ ವಿರುದ್ಧವೂ ಯುವರಾಜ್ ಸಿಂಗ್ ಪ್ರಶ್ನೆ ಮಾಡಿದ್ದಾರೆ.ತಂಡದಿಂದ ಹೊರ ಹಾಕಲು ಮ್ಯಾನೇಜ್ಮೆಂಟ್ ಸದಸ್ಯರು ಕಾರಣ ಹುಡುಕುತ್ತಿದ್ದರು ಎಂದು ಯುವರಾಜ್ ಹೇಳಿದ್ದಾರೆ. ಇದೇ ಕಾರಣಕ್ಕೆ ಯೋ ಯೋ ಪರೀಕ್ಷೆಯನ್ನು ಅನಿವಾರ್ಯ ಮಾಡಿದ್ರು ಎಂದಿದ್ದಾರೆ.

2019ರ ವಿಶ್ವಕಪ್ ಆಡಲು ಬಯಸಿದ್ದೆ ಎಂದು ಸಂದರ್ಶನವೊಂದರಲ್ಲಿ ಮಾತನಾಡಿದ ಯುವರಾಜ್ ಸಿಂಗ್ ಹೇಳಿದ್ದಾರೆ. ವೃತ್ತಿ ಜೀವನದ ಕೊನೆಯಲ್ಲಿ ವೀರೇಂದ್ರ ಸೆಹ್ವಾಗ್ ಹಾಗೂ ಜಹೀರ್ ಖಾನ್ ಜೊತೆ ಕೂಡ ಬಿಸಿಸಿಐ ಸರಿಯಾಗಿ ಮಾತನಾಡಿರಲಿಲ್ಲವೆಂದು ಯುವರಾಜ್ ಸಿಂಗ್ ಹೇಳಿದ್ದಾರೆ.ಯುವರಾಜ್ ಸಿಂಗ್ 2017ರಲ್ಲಿ ಇಂಗ್ಲೆಂಡ್ ವಿರುದ್ಧ ಕೊನೆ ಬಾರಿ ಟಿ-20 ಪಂದ್ಯವನ್ನು ಆಡಿದ್ದರು.

LEAVE A REPLY

Please enter your comment!
Please enter your name here