ಅಭಿಮಾನಿಗಳು ಯುವಿ ‘ಕಾಲೆಳೆಯಲು’ ಕಾರಣವೇನು.?

0
779
Loading...

ಭಾರತ ತಂಡದ ಸ್ಪೋಟಕ ಅಲ್ ರೌಂಡರ್ ಯುವರಾಜ್ ಸಿಂಗ್ ಅವರಿಗೆ ಕೆಲ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಕಾಲೆಳೆದಿದ್ದಾರೆ. ಅಷ್ಟಕ್ಕೂ ಅಭಿಮಾನಿಗಳು ಯುವರಾಜ್ ಸಿಂಗ್ ಅವರ ಕಾಲೆಳೆಯಲು ಪ್ರಮುಖ ಕಾರಣವೇನು ಎಂಬ ಪ್ರಶ್ನೆಗೆ ಉತ್ತರ ಅವರು ಮಾಡಿರುವ ಒಂದು ಟ್ವೀಟ್‍ಗೆ. 2011 ರ ವಿಶ್ವಕಪ್ ಟ್ರೋಫಿಯನ್ನು ಭಾರತಕ್ಕೆ ತಂದುಕೊಡುವಲ್ಲಿ ಯುವರಾಜ್ ಸಿಂಗ್ ಅವರದ್ದು ಪ್ರಮುಖ ಪಾತ್ರವಿದೆ. ಯುವರಾಜ್ ಸಿಂಗ್ ಅವರ ಆಟದ ವೈಖರಿಗೆ ಮನಸೊಲದವರೇ ಇಲ್ಲ.

2011 ರ ವಿಶ್ವಕಪ್ ನಂತರ ಯುವಿ ಹೆಚ್ಚಾಗಿ ಟೀಂ ಇಂಡಿಯಾದಲ್ಲಿ ಕಾಣಿಸಿಕೊಳ್ಳಲಿಲ್ಲ. ಯುವಿ ಅವರು ವಿಶ್ವಕಪ್ ನಂತರ ಯಾವ ಪಂದ್ಯಗಳಲ್ಲೂ ಉತ್ತಮ ಪ್ರದರ್ಶನ ನೀಡಲಿಲ್ಲ, ಹಾಗಾಗಿ ಅವರಿಗೆ ಟೀಂ ಇಂಡಿಯಾದಲ್ಲಿ ಹೆಚ್ಚಾಗಿ ಸ್ಥಾನ ಸಿಗಲಿಲ್ಲ. ಜೊತೆಗೆ ಇತ್ತೀಚಿಗೆ ಕೆನಾಡದಲ್ಲಿ ನಡೆದ ಗ್ಲೋಬಲ್ ಟಿ-ಟ್ವೆಂಟಿ ಲೀಗ್‍ನಲ್ಲೂ ಕೂಡ ಉತ್ತಮ ಪ್ರದರ್ಶನ ನೀಡಿಲ್ಲ. ಭಾರತ ತಂಡದಲ್ಲಿ ನಾಲ್ಕನೇ ಕ್ರಮಾಂಕದ ಕುರಿತು ಟರ್ಬನೇಟರ್ ಹರ್ಭಜನ್ ಸಿಂಗ್ ಅವರು ಟೀಂ ಇಂಡಿಯಾದ ನಂಬರ್ 04 ನೆ ಸ್ಲಾಟ್‍ಗೆ ಸೂರ್ಯ ಕುಮಾರ್ ಯಾದವ್ ಅವರ ಹೆಸರನ್ನು ಸೂಚಿಸಿದರು ಇದಕ್ಕೆ ತಮಾಷೆಯಾಗಿ ಉತ್ತರಿಸಿದ ಯುವಿ ಕೊಹ್ಲಿ ತಂಡ ಬಲಿಷ್ಟವಾಗಿದೆ.

ಹೀಗಾಗಿ ನಾಲ್ಕನೇ ಕ್ರಮಾಂಕದ ಬ್ಯಾಟ್ಸಮನ್ ಅವಶ್ಯಕತೆಯಿಲ್ಲ ಎಂದು ತಮ್ಮ ಅಭಿಪ್ರಾಯವನ್ನು ಟ್ವೀಟ್ ಮಾಡುವ ಮೂಲಕ ತಿಳಿಸಿದರು. ಇದನ್ನು ಗಮನಿಸಿದ ಯುವಿ ಅಭಿಮಾನಿಗಳು ಹಾಗೂ ಕೆಲ ನೆಟ್ಟಿಗರು ಯುವರಾಜ್ ಅವರಿಗೆ ನಿಮ್ಮ ಆಟದ ಬಗ್ಗೆ ಗಮನ ಹರಿಸುವುದು ಉತ್ತಮ, ಆಟಕ್ಕೆ ಗುಡ್‍ಬೈ ಹೇಳಿದ್ದಾಯಿತು, ಅದರೂ ಇನ್ನು ಯಾಕೆ ತಂದೆಯಂತೆ ಕಣ್ಣೀರು ಎಂದರೆ, ಇನ್ನು ಹಲವರು ನಿಮ್ಮ ತಂದೆ ಯೋಗರಾಜ್ ಸಿಂಗ್ ರೀತಿ ನೀನು ಆಗಬೇಡ ಎಂದು ಹೇಳುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಯುವಿ ಕಾಲೆಳೆದಿದ್ದಾರೆ.

Loading...

LEAVE A REPLY

Please enter your comment!
Please enter your name here