ಇತ್ತೀಚಿಗೆ ನಮ್ಮ ಸೋಷಿಯಲ್ ಮೀಡಿಯಾ ಪ್ರಭಾವದಿಂದಾಗಿ ಹಲವರು ರಾತ್ರಿ ಬೆಳಗಾಗೋದೊರಳಗೆ ತಮ್ಮ ವಿಚಿತ್ರ ವರ್ತನೆಯಿಂದ ಇಂಟರ್ನೆಟ್ ಸ್ಟಾರ್ ಗಳಾಗಿ ಬಿಡುತ್ತಾರೆ. ಇದಕ್ಕೆ ಪ್ರಮುಖ ಕಾರಣ ನಮ್ಮ ಇಂದಿನ ಸಮಾಜ ಎಂಬೋಣ. ಇಲ್ಲಿರುವ ನಿಜವಾದ ಪ್ರತಿಭಾವಂತರನ್ನು ಗುರುತಿಸಿದರೂ ನಾವುಗಳು ಅವರ ಬೆಂಬಲಕ್ಕೆ ನಿಲ್ಲದೇ ಜನರನ್ನು ಸೆಳೆಯುವು ಚಿತ್ರ- ವಿಚಿತ್ರವಾಗಿ ವರ್ತಿಸುವವರನ್ನು ಪ್ರೋತ್ಸಾಹಿಸಿ ಅವರನ್ನು ರಾತ್ರೋರಾತ್ರಿ ಸ್ಟಾರ್ ಗಳನ್ನಾಗಿ ಮಾಡುತ್ತಿದ್ದೇವೆ. ಇದು ದುರ್ದೈವದ ವಿಚಾರ ಎನ್ನೋಣ.
ಹೀಗೆ ರಾತ್ರೋರಾತ್ರಿ ಸ್ಟಾರ್ ಆಗಿದ್ದವರಿಗೆ ಆರ್. ಜೆ ಹಿಗ್ಗಾಮುಗ್ಗಾ ಝಾಢಿಸಿದ್ದಾಳೆ. ಹೌದು, ಮೂಲತಃ ಕಾಶ್ಮೀರ ಮೂಲದ ಯುಟ್ಯೂಬರ್ ಆಗಿದ ದೀಪಕ್ ಕಲಾಲ್ ಎಂಬಾತ ತಾವು ಮಾಡುವ ವಿಚಿತ್ರ ವಿಡಿಯೋಗಳಿಂದಾಗಿ ಹೆಸರು ಮಾಡಿದ್ದಾರೆ. ಅಲ್ಲದೇ ರಾಖಿ ಸಾವಂತ್ ನಕಲಿ ಗಂಡನಾಗಿಯೂ ಕೂಡ ಕೆಲಕಾಲ ಸುದ್ದಿಯಲ್ಲಿದ್ದರು. ಇನ್ನು ಕೆಲ ದಿನಗಳ ಹಿಂದಷ್ಟೇ ದೆಹಲಿ ಮೆಟ್ರೋದಲ್ಲಿದೀಪಕ್ ಕಲಾಲ್ ರ ಅನುಮತಿಯಿಲ್ಲದೆ ಅವರ ಜೊತೆ ಸೆಲ್ಫಿ ತೆಗೆಯಲು ಯುವತಿಯೊಬ್ಬರು ಯತ್ನಿಸಿದಾಗ ಯುವತಿ ಮೇಲೆ ಮುಗಿಬಿದ್ದು ಗಲಾಟೆ ಮಾಡಿಕೊಂಡಿದ್ದ ಈತನನ್ನು ನಾವು ನೆನಪಿಸಿಕೊಳ್ಳಬೇಕು ಕೂಡ.
ಈ ವಿಚಾರವನ್ನೇ ಇಟ್ಟುಕೊಂಡು ರೇಡಿಯೋ ಮಿರ್ಚಿ ದೀಪಕ್ ಕಲಾಲ್ ರನ್ನು ತಮ್ಮ ಟಾಕ್ ಶೋಗಾಗಿ ಸ್ಟುಡಿಯೋಗೆ ಕರೆಸಿಕೊಂಡು ಇಂಟರ್ವ್ಯೂ ಮಾಡಲು ಮುಂದಾಗಿತ್ತು. ರೇಡಿಯೋ ಮಿರ್ಚಿ ಮಹಿಳಾ ಆರ್. ಜೆ ಮುಂದೆ ತಮ್ಮ ಸ್ಟೈಲ್ ನಲ್ಲೇ ಮಾತನ್ನಾರಂಭಿಸಿದ ದೀಪಕ್ ಕಲಾಲ್ ಮಹಿಳೆಯರ ಬಗ್ಗೆ ಅಸಭ್ಯವಾಗಿ ಮಾತನಾಡಿದ್ದಾರೆ. ಮಹಿಳೆಯರು ಗಂಡು ಮಕ್ಕಳ ಕೆಲಸಗಾರರಾಗಿ ಇರಲು ಲಾಯಕ್ಕೂ ಎಂದು ಹೇಳಿದಾಗ ಆ ಮಹಿಳಾ ಆರ್ ಜೆ ತಾಳ್ಮೆ ಕಳೆದುಕೊಂಡು ದೀಪಕ್ ಕಲಾಲ್ ರನ್ನು ತರಾಟೆಗೆ ತೆಗೆದುಕೊಂಡು ತಮ್ಮ ಶೋ ನಿಂದ ಕೂಡಲೇ ಹೊರದಬ್ಬಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು ಆರ್ ಜೆ ನಡೆಗೆ ನೆಟ್ಟಿಗರು ಭೇಷ್ ಎಂದಿದ್ದಾರೆ.