ಯುವತಿಯ ಮೃತದೇಹ ಪತ್ತೆ : ಬೆಚ್ಚಿ ಬೀಳಿಸುವಂತಹ ಸತ್ಯ!

0
1262

ಹಾಸನದ ಹೋಟೆಲ್ ಒಂದರ ಹಿಂಭಾಗದಲ್ಲಿ ಯುವತಿಯೊಬ್ಬಳ ಮೃತದೇಹ ಪತ್ತೆಯಾಗಿದ್ದು ಹಲವು ಅನುಮಾನಗಳಿಗೆ ಕಾರಣವಾದೆ. ಮೃತಪಟ್ಟ ಯುವತಿಯನ್ನು 23 ವರ್ಷದ ಭವಿತಾ ಎಂದು ಗುರುತಿಸಲಾಗಿದ್ದು ಹಾಸನ ಜಿಲ್ಲೆಯ ಅರಕಲಗೂಡು ಮೂಲದ ಯುವತಿ ಎಂದು ಹೇಳಲಾಗುತ್ತಿದೆ.

ಈಕೆ ಕಳೆದೆರಡು ವಾರಗಳಿಂದ ನಗರದ ಸರಾಯು ಹೋಟಲ್‍ನ ರೋಮ್‍ನಲ್ಲಿ ವಾಸವಾಗಿದ್ದು,ರವಿವಾರ ಬೆಳಿಗ್ಗೆ ಅದೇ ಹೋಟೆಲ್ ಹಿಂಬದಿ ಆಕೆಯ ಶವ ಪತ್ತೆಯಾಗಿದೆ. ಶವವನ್ನು ನೋಡಿದ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದು,ಯುವತಿ ಮೃತಪಟ್ಟಿರುವುದು ಹೇಗೆ ಎಂಬುದು ನಿಗೂಡವಾಗಿದೆ. ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೋ ಅಥವಾ ಕೊಲೆಯೋ ಎಂದು ಪೊಲೀಸರು ತನಿಕೆ ಕೈಗೊಂಡಿದ್ದಾಗ ಆಕೆಯ ಪೋಷಕರು ಕೆಲವು ಅನುಮಾನಗಳನ್ನು ವ್ಯಕ್ತಪಡಿಸಿ ದೂರು ನೀಡಿದ್ದಾರೆ.

ಯುವತಿಯ ದೇಹದ ಕೆಲವು ಭಾಗಗಳಲ್ಲಿ ಹಚ್ಚೆ ಹಾಕಿಸಿಕೊಂಡಿದ್ದು,ಅದರಲ್ಲಿ ಪುನೀತ್ ಎಂಬವನ ಹೆಸರನ್ನು ಹಾಕಿಸಿಕೊಂಡಿದ್ದಾಳೆ.ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿದ್ದಾರೆ. ಭವಿತಾಳ ಮೈ ಮೇಲೆ ಯಾವುದೇ ಗಾಯದ ಗುರುತಿಲ್ಲ ಆದುದ್ದರಿಂದ ಹೋಟೆಲ್‍ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲು ಸಾದ್ಯವಿಲ್ಲ. ಹೋಟೆಲ್ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು,ಯುವತಿ ರೂಮ್ ಗೆ ಯಾರು ಪ್ರವೇಶಮಾಡಿದ್ದಾರೆ ಎಂದು ಮಾಹಿತಿ ಸಂಗ್ರಹಿಸಿದ್ದಾರೆ.

ಮೃತ ಭವಿತಾ 18ನೇ ವಯಸ್ಸಿನಲ್ಲೇ ಪ್ರೀತಿ ವಿಚಾರವಾಗಿ ಜಗಳವಾಡಿಕೊಂಡು ಮನೆ ಬಿಟ್ಟು ಬಂದಿದ್ದಳು ಎನ್ನಲಾಗುತ್ತಿದ್ದು, ಆಕೆಯ ತಂದೆ ಈ ಕುರಿತು ದೂರು ನೀಡಿದ್ದಾರಂತೆ. ಬಳಿಕ ಪೊಲೀಸರು ಆಕೆಯನ್ನು ಪತ್ತೆ ಹಚ್ಚಿ ಪೋಷಕರಿಗೆ ತಿಳಿಸಿದ್ದರು ಆದರೆ ಭವಿತಾ ಮನೆಗೆ ತೆರಳಲು ನಿರಾಕರಿಸಿದ್ದಳು, ಅಂದಿನಿಂದ ಪೋಷಕರು ಕೂಡ ಆಕೆಯನ್ನು ಸಂಪರ್ಕಿಸಿರಲಿಲ್ಲ ಎನ್ನಲಾಗಿದೆ.

Stock HD video clip footage of flashing lights / sirens on top of a police vehicle

ಕಳೆದ 12 ದಿನಗಳಿಂದ ಹೋಟೆಲ್‍ನಲ್ಲಿದ್ದ ಭವಿತಾಳ ರೂಮಿಗೆ ಶನಿವಾರ ರಾತ್ರಿ ಪುನೀತ್ ಬಂದಿದ್ದಾನೆ. ಇದೇ ವೇಳೆ ಅವರಿಬ್ಬರು ಪ್ರೀತಿ ವಿಚಾರಕ್ಕೆ ಗಲಾಟೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ರವಿವಾರ ಬೆಳಿಗ್ಗೆ ಹೋಟೆಲ್ ಹಿಂಭಾಗ ಶವವಾಗಿ ಪತ್ತೆಯಾಗಿದ್ದಾಳೆ. ಪ್ರಕರಣ ಸಂಬಂಧಿಸಿದಂತೆ ಪೊಲೀಸರು ಪುನೀತ್‍ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here