ಪ್ರವಾಹ ಸಂತ್ರಸ್ತರ ನೆರವಿಗೆ ನಿಂತ ನಿಖಿಲ್ ಕುಮಾರಸ್ವಾಮಿ ನೇತೃತ್ವದ ಯುವ ಜನತಾದಳ…!

0
223

ಉತ್ತರ ಕರ್ನಾಟಕದಲ್ಲಿ ಉಂಟಾಗಿರುವ ಭೀಕರ ಪ್ರವಾಹ ಪರಿಸ್ಥಿತಿಯಲ್ಲಿ ಅಲ್ಲಿಯ ಜನರಿಗೆ ಸಹಾಯ ಹಸ್ತ ಚಾಚಲು ನಿಖಿಲ್ ಕುಮಾರಸ್ವಾಮಿ ನೇತೃತ್ವದ ಯುವ ಜನತಾದಳ ಸಜ್ಜಾಗಿದೆ.

ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಅತಿಯಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮತ್ತು ನೆರೆ ರಾಜ್ಯದ ನದಿಗಳಿಂದ ಹರಿಸುತ್ತಿರುವ ನೀರಿನ ಮಟ್ಟ ಹೆಚ್ಚಾಗಿ ಉತ್ತರ ಭಾಗದ ಸುಮಾರು 15 ಜಿಲ್ಲೆಗಳಲ್ಲಿ ನೆರೆಹಾವಳಿ ತೀವ್ರವಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಹೀಗಾಗಿ ಯುವ ಜನತಾದಳದ ರಾಜ್ಯಾಧ್ಯಕ್ಷರಾದ ಶ್ರೀ ನಿಖಿಲ್ ಕುಮಾರಸ್ವಾಮಿ ರವರ ಆದೇಶದ ಮೇರೆಗೆ ನೆರೆ ಸಂತ್ರಸ್ತರಿಗೆ ನೆರವಾಗಲು ಜೆಡಿಎಸ್ ತೀರ್ಮಾನಿಸಿದೆ.

ಇನ್ನು ಖುದ್ದು ನಿಖಿಲ್ ಕುಮಾರಸ್ವಾಮಿ ಅವರ ಕೂಡಾ ಸಂತ್ರಸ್ತರ ನೆರವಿಗೆ ನಿಂತಿದ್ದಾರೆ. ದಿನಾಂಕ 12-8-2019ರಂದು ಬೆಳಗ್ಗೆ 10 ಗಂಟೆಗೆ ಹುಬ್ಬಳ್ಳಿ ಇಂದ ಪ್ರಾರಂಭವಾಗಿ, ಧಾರವಾಡ, ಗದಗ, ಬೆಳಗಾಂ, ಬಾಗಲಕೋಟ, ಯಾದಗಿರಿ ಜಿಲ್ಲೆ ಗಳ ನಿರಾಶ್ರಿತರ ಕೇಂದ್ರಗಳಿಗೆ 2 ದಿನ ಶ್ರೀ ನಿಖಿಲ್ ಕುಮಾರಸ್ವಾಮಿ ರವರು ಭೇಟಿ ನೀಡಲಿದ್ದಾರೆ.

ಇನ್ನು ಸಂತ್ರಸ್ಥರಿಗೆ ಮೂಲಭೂತವಾಗಿ ಬೇಕಾಗಿರುವ ಅವಶ್ಯಕ ವಸ್ತುಗಳಾದ
1) ಬೆಡ್ ಶೀಟ್ – ಬ್ಲಾ0ಕೇಟ್
2) ಚಾಪೆಗಳು
3) ಒಳ ಉಡುಪುಗಳು (ಮಹಿಳೆಯರಿಗೆ)
4) ಸೀರೆ, ನೈಟಿಗಳು
5) ಟವಲ್ಗಳು, ಬನಿಯನ್, ಒಳ ಉಡುಪು, ಪಂಚೆ, ಲುಂಗಿಗಳು
6) ಅಕ್ಕಿ
7) ಬ್ರಶ್, ಪೇಸ್ಟ್, ಸೋಪುಗಳು
8) ಕುಡಿಯುವ ನೀರು
9) ಬಿಸ್ಕತ್
*ನೆರವು ನೀಡಬಯಸುವವರು ಇವುಗಳನ್ನು ದಿನಾಂಕ 11-08-19 ಭಾನುವಾರ ಮಧ್ಯಾಹ್ನ 3 ಗಂಟೆ ಒಳಗಾಗಿ j.p. bhavana ಪಕ್ಷದ ಕಚೇರಿಗೆ ತಲುಪಿಸ ಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ
Chandrashekar
9900217840
Sharangowda
9448159957
Narshimurthy
9741981777
Shahid
8197912465
Prathap
9845856978 ಸಂಪರ್ಕಿಸಲು ಸೂಚಿಸಲಾಗಿದೆ.

LEAVE A REPLY

Please enter your comment!
Please enter your name here