ಚಂದನವನದಲ್ಲಿ ಬ್ಯಾಕ್ ಟು ಬ್ಯಾಕ್ ಮೂವಿ ಸ್ ನೀಡಿ ಮನಸೂರೆಗೊಂಡ ನಟ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ. ಅವರ ಹೆಸರು ಮೂವಿಗಳ ಪ್ಲಸ್ ಜೊತೆ ಹೆಚ್ಚು ಕೇಳಿ ಬಂದಿದ್ದು ಕೊಡಗಿನ ಬೆಡಗಿ ನಟಿ ರಶ್ಮಿಕಾ ಮಂದಣ್ಣರವರೊಂದಿಗೆ ರಿಲೇಷನ್ ಶಿಷ್ ಜೊತೆ.
ಈ ಕುರಿತು ಸಂದೇಹದ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಖುದ್ದು ರಕ್ಷಿತ್ ಮಾತನಾಡಿದ್ದಾರೆ. ಇತ್ತೀಚೆಗೆ ರಕ್ಷಿತ್ ತಮ್ಮ ರಿಲೀಸ್ ಮೂವಿ ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಪ್ರಮೋಶನ್ನಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಈ ಚಿತ್ರ ಒಟ್ಟು 5 ಭಾಷೆಯಲ್ಲಿ ಅಂದರೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗುತ್ತಿದ್ದು, ತಮಿಳು ಭಾಷೆಯ ಚಿತ್ರವನ್ನು ಪ್ರಮೋಟ್ ಮಾಡಲು ಚೆನ್ನೈಗೆ ತೆರಳಿ ಸಂದರ್ಶನ ಸಹ ನೀಡಿದ್ದರು.
ಇದೇ ವೇಳೆ ಚೆನ್ನೈನ ಪ್ರತಿಕೆಯೊಂದು ರಕ್ಷಿತ್ ಅವರ ಸಂದರ್ಶನ ನಡೆಸಿತ್ತಿದ್ದ ವೇಳೆ ಸಂದರ್ಶಕ, ರಕ್ಷಿತ್ಗೆ ಸಾಂತಾ ಕ್ಲಾಸ್ ಆಗಲು ತಿಳಿಸಿದ್ದರು. ಈ ಸಂದರ್ಭದಲ್ಲಿ ಸಂದರ್ಶಕ ರಶ್ಮಿಕಾ ಅವರ ಹೆಸರು ಹೇಳಿದಾಗ, ರಕ್ಷಿತ್ ಅವರಿಗೆ ಶುಭ ಹಾರೈಸಿದರು.
ಅಲ್ಲದೇ ಮುಂದುವರೆದು ನಟಿ ರಶ್ಮಿಕಾ ಬಗ್ಗೆ ಮಾತನಾಡಿದ ರಕ್ಷಿತ್, ಅವರು ಯಾವಾಗಲೂ ದೊಡ್ಡದಾಗಿ ಕನಸು ಕಾಣುತ್ತಾರೆ. ನನಗೆ ರಶ್ಮಿಕಾರ ಹಿಂದಿನ ಜೀವನದ ಬಗ್ಗೆ ಸಂಪೂರ್ಣವಾಗಿ ತಿಳಿದಿದೆ. ಅವರಿಗೆ ಈ ಕನಸುಗಳು ಎಲ್ಲಿಂದ ಬರುತ್ತದೆ ಎಂಬುದು ನನಗೆ ತಿಳಿದಿದೆ. ಸಾಂತಾ ಅವರ ಎಲ್ಲ ಕನಸನ್ನು ನನಸು ಮಾಡಲಿ ಎಂದು ಬಯಸುತ್ತೇನೆ ಎಂದು ತಿಳಿಸಿದರು.
ಇನ್ನು ನಟ ರಕ್ಷಿತ್ ಶೆಟ್ಟಿ ಅವನೇ ಶ್ರೀಮನ್ನಾರಾಯಣ 5 ಭಾಷೆಯಲ್ಲಿ ಬಿಡುಗಡೆಯಾಗಲಿದ್ದು, ಇದೇ ಮೊದಲ ಬಾರಿಗೆ ನಟ ರಕ್ಷಿತ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ವಿಭಿನ್ನವಾಗಿ ಅಭಿನಯಿಸಿದ್ದಾರೆ. ಇವರಿಗೆ ಜೋಡಿಯಾಗಿ ನಟಿ ಶಾನ್ವಿ ಶ್ರೀವಾಸ್ತವ್ ನಟಿಸಿದ್ದಾರೆ. ಈ ಸಿನಿಮಾವನ್ನು ಸಚಿನ್ ರವಿ ನಿರ್ದೇಶನ ಮಾಡಿದ್ದು, ಕಳೆದ 3 ವರ್ಷಗಳಿಂದ ಈ ಮೂವಿಗಾಗಿ ಸಖತ್ ತಯಾರಿ ನಡೆಸಿದ್ದಾರೆ.
ಕನ್ನಡದಲ್ಲಿ ಈ ಚಿತ್ರ ಡಿಸೆಂಬರ್ 27ರಂದು ಬಿಡುಗಡೆಯಾಗಲಿದೆ. 2020, ಜನವರಿ 1ರಂದು ತೆಲುಗು ಭಾಷೆಯಲ್ಲಿ, ಜನವರಿ 3ರಂದು ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಹಾಗೂ ಜನವರಿ 16ರಂದು ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗಲಿದ್ದು ಜನರಲ್ಲಿ ಸಖತ್ ಕ್ರೇಜ್ ಮೂಡಿಸಿದೆ.