ಯೋಗಿ ಆದಿತ್ಯನಾಥ್ ಸರ್ಕಾರ ಉತ್ತರ ಪ್ರದೇಶದಲ್ಲಿ ಪರಿಸರ ಕ್ರಾಂತಿಯೊಂದನ್ನು ಮಾಡಿದೆ. ‘ಕ್ವಿಟ್ ಇಂಡಿಯಾ’ ಚಳವಳಿಯ 77ನೇ ವಾರ್ಷಿಕೋತ್ಸವದಂದು ನಿಗದಿತ ಕಾಲಾವಧಿಯಲ್ಲಿ 66 ಸಾವಿರ ಸಸ್ಯಗಳನ್ನು ಏಕಕಾಲದಲ್ಲಿ ವಿತರಿಸುವ ಮೂಲಕ ಉತ್ತರ ಪ್ರದೇಶ ಸರ್ಕಾರ ಗಿನ್ನಿಸ್ ವಿಶ್ವ ದಾಖಲೆ ಮಾಡಿದೆ.
ಇನ್ನು ಗಂಗಾ-ಯಮುನಾ ನದಿ ದಡದಲ್ಲಿ ಸಸಿಗಳನ್ನು ವಿತರಿಸುವ ಮೂಲಕ ಉತ್ತರ ಪ್ರದೇಶ ಸರ್ಕಾರ ಒಂದೇ ಬಾರಿಗೆ ನಾಲ್ಕು ದಾಖಲೆಗಳನ್ನು ಮಾಡಿದೆ. ಬೆಳಿಗ್ಗೆ 9 ರಿಂದ 10 ರವರೆಗೆ ಏಕಕಾಲದಲ್ಲಿ ಐದು ಕೋಟಿ ಗಿಡಗಳನ್ನು ನೆಡಲಾಗಿದೆ. ಒಂದು ಲಕ್ಷಕ್ಕೂ ಹೆಚ್ಚು ಸಸಿಗಳನ್ನು ವಿತರಿಸಲಾಗಿದೆ ಮತ್ತು 22 ಕೋಟಿ ಸಸಿಗಳನ್ನು ನೆಡಲಾಗಿದೆ. ಆ ಮೂಲಕ ವಿಶ್ವದಾಖಲೆ ಮಾಡಲಾಗಿದೆ.

ಇನ್ನು ಮುಂದಿನ ವರ್ಷ ವನ್ ಮಹೋತ್ಸವದಂದು 25 ಕೋಟಿ ಗಿಡಗಳನ್ನು ನೆಡುತ್ತೇವೆ ಎಂದು ಯೋಗಿ ಆದಿತ್ಯನಾಥ್ ಘೋಷಿಸಿದ್ದಾರೆ. ಇನ್ನು ಯುಪಿ ಸರ್ಕಾರದ ಸಾಧನೆಗೆ ಗಿನ್ನಿಸ್ ಅಧಿಕಾರಿಗಳು ಪ್ರಮಾಣ ಪತ್ರವನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ರ ಕೈಗೆ ಹಸ್ತಾಂತರಿಸಿದ್ದಾರೆ.