ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರದ ಸಂಪುಟ ವಿಸ್ತರಣೆಗೆ ಕಾಲ ಕೂಡಿಬಂದಿದೆ. ಸದ್ಯ ನೆರೆಪೀಡಿತ ಪ್ರದೇಶಗಳ ವೀಕ್ಷಣೆಯಲ್ಲಿರುವ ಯಡಿಯೂರಪ್ಪ ಗುರುವಾರ ಇಡೀ ದಿನ ಸಂಭಾವ್ಯ ಸಚಿವರ ಪಟ್ಟಿ ಮತ್ತೆ ಪರಿಶೀಲಿಸಲಿದ್ದು, ಆಗಸ್ಟ್ 15ರ ನಂತರ ಅಂತಿಮ ಪಟ್ಟಿಯೊಂದಿಗೆ ದೆಹಲಿಗೆ ತೆರಳಲಿದ್ದಾರೆ ಎನ್ನಲಾಗಿದೆ. ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಒಪ್ಪಿಗೆ ದೊರೆತ ನಂತರ ಆಗಸ್ಟ್ 18 ಅಥವಾ 19ರಂದು ರಾಜಭವನದಲ್ಲಿ ನೂತನ ಸಚಿವರ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ ಎನ್ನಲಾಗಿದೆ.

ಇನ್ನು ಮೈತ್ರಿ ಸರ್ಕಾರ ಉರುಳಿಸಲು ನೆರವಾದ ಅನರ್ಹ ಶಾಸಕರಿಗೆ ಮೊದಲ ಹಂತದಲ್ಲೇ ಸಚಿವ ಸ್ಥಾನ ನೀಡಬೇಕೆಂದಿದ್ದ ಯಡಿಯೂರಪ್ಪ ಅವರ ನಿರ್ಧಾರಕ್ಕೆ ಬ್ರೇಕ್ ಬಿದ್ದಿದೆ. ಹೀಗಾಗಿ ಅನರ್ಹರನ್ನು ಹೊರಗಿಟ್ಟು ಸಚಿವ ಸಂಪುಟ ವಿಸ್ತರಣೆ ಮಾಡಬೇಕಾದ ಅನಿವಾರ್ಯತೆ ಒದಗಿ ಬಂದಿದೆ. ಸಾಕಷ್ಟು ಅಳೆದು ತೂಗಿ ಯಡಿಯೂರಪ್ಪ ಮಂತ್ರಿಮಂಡಳ ಪಟ್ಟಿಯನ್ನು ತಯಾರಿಸಿದ್ದಾರೆ. ಸದ್ಯದ ಮಾಹಿತಿಯ ಪ್ರಕಾರ ಸಂಭಾವ್ಯ ಸಚಿವರು ಪಟ್ಟಿ ಹೀಗಿದೆ.
- ಗೋವಿಂದ ಕಾರಜೋಳ: ಲೋಕೋಪಯೋಗಿ
- ಈಶ್ವರಪ್ಪ: ಗೃಹ ಇಲಾಖೆ
- ಆರ್.ಅಶೋಕ್: ಸಾರಿಗೆ
- ಜಗದೀಶ ಶೆಟ್ಟರ್: ಕಂದಾಯ
- ವಿ. ಸೋಮಣ್ಣ: ನಗರಾಭಿವೃದ್ಧಿ
- ಜೆ.ಸಿ. ಮಾಧುಸ್ವಾಮಿ: ಕಾನೂನು & ಸಂಸದೀಯ ವ್ಯವಹಾರ
- ಬಿ. ಶ್ರೀರಾಮುಲು: ಸಮಾಜ ಕಲ್ಯಾಣ
- ಉಮೇಶ್ ಕತ್ತಿ: ಕೃಷಿ
- ಡಾ.ಅಶ್ವತ್ಥ್ ನಾರಾಯಣ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ
- ಶಶಿಕಲಾ ಜೊಲ್ಲೆ: ಮಹಿಳಾ ಮತ್ತು ಮಕ್ಕಳ ಕಲ್ಯಾಣ
- ರೇಣುಕಾಚಾರ್ಯ: ಪೌರಾಡಳಿತ ಖಾತೆ
- ಬಾಲಚಂದ್ರ ಜಾರಕಿಹೊಳಿ: ಕಾರ್ಮಿಕ ಇಲಾಖೆ
- ಶಿವನಗೌಡ ನಾಯಕ್: ಸಣ್ಣ ಕೈಗಾರಿಕೆ ಖಾತೆ
- ಅಂಗಾರ: ಸಣ್ಣ ನೀರಾವರಿ
- ಬೋಪಯ್ಯ: ಉನ್ನತ ಶಿಕ್ಷಣ
- ಕೋಟಾ ಶ್ರೀನಿವಾಸ ಪೂಜಾರಿ: ಮುಜರಾಯಿ ಮತ್ತು ಯೋಜನೆ