ಮುಗಿಸಲು ಹೋದವರ ಮುಗಿಸಿದ ಯಡಿಯೂರಪ್ಪ

0
176

“ಈಗ ಅವರಿಗೆ ತುಂಬ ವಯಸ್ಸಾಗಿದೆ ಓಡಾಡಿ ಕೆಲಸ ಮಾಡೋ ಸಾಮರ್ಥ್ಯ ಇಲ್ಲ‌” ಎಂದು ಹೈಕಮಾಂಡ್ ಹತ್ತಿರ ಚಾಡಿ ಹೇಳಿದ ಮಾತುಗಳನ್ನು ಹೈಕಮಾಂಡ್ ನಂಬಿದ ಕಾರಣದಿಂದ ಮುಖ್ಯ ಮಂತ್ರಿ ಯಡಿಯೂರಪ್ಪ ಅವರ 76 ರ ಹರೆಯ ಅಡ್ಡಿಯಾಗಿತ್ತು.
ಮುಖ್ಯ ಮಂತ್ರಿ ಆದರೂ ಕ್ಯಾಬಿನೆಟ್ ವಿಸ್ತರಿಸಲು ಅವಕಾಶ ಕೊಡದೇ ಸತಾಯಿಸಲಾಯಿತು.

ಕಳೆದ ಬಾರಿ ಮುಖ್ಯ ಮಂತ್ರಿಯಾಗಿ ಅನುಭವಿಸಿದ ಜೈಲು ಶಿಕ್ಷೆ, ಯಮಯಾತನೆ, ಹಿತ ಶತ್ರುಗಳ ಕಾಟ ಸರಿಯಾಗಿ ನೆನಪಿನಲ್ಲಿ ಇಟ್ಟುಕೊಂಡು ಕೆಜೆಪಿ ಬಾಗಿಲು ಹಾಕಿ ಬಿಜೆಪಿ ಸೇರಿದ್ದರು.

ಕಳೆದ ಬಾರಿ ಮತ್ತು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಅಭೂತಪೂರ್ವ ಗೆಲುವಿಗೆ ಮೋದಿ ಅವರ ಪ್ರಭಾವದೊಂದಿಗೆ ಯಡಿಯೂರಪ್ಪ ಅವರ ಬಲವೂ ಇದೆ‌ ಎಂದು ಹೈಕಮಾಂಡ್ ಗೆ ಗೊತ್ತಿದೆ.

ಆದರೆ ದುರಾದೃಷ್ಟ ವಿಧಾನಸಭಾ ಚುನಾವಣೆಯಲ್ಲಿ‌ ಅವರ ಸಂಖ್ಯೆ104 ದಾಟಲಿಲ್ಲ. ಅದಕ್ಕೆ ಪಕ್ಷದ ಕೆಲವು ನಿಲುವುಗಳೇ‌ ಕಾರಣ.

ನಂತರದ ಆಪರೇಶನ್ ವಿಫಲವಾಗಲು ಒಳಗಿನ ಜಾತಿವಾದಿಗಳೇ ಕಾರಣರಾದಾಗ ಯಡಿಯೂರಪ್ಪ ಕಂಗಾಲಾಗಿ ಹೋದರು.

ಸಮ್ಮಿಶ್ರ ಸರಕಾರದ ಅತೃಪ್ತ ನಾಯಕರ ಭರವಸೆ ಮೇಲೆ ಈ ಬಾರಿ ಆಪರೇಶನ್ ಭಿನ್ನವಾಗಿ ಮಾಡಿದರು.
ಅಲ್ಲಿ ಯಾವ ಕೈಗಳು ಕೆಲಸ ಮಾಡಿದವು ಎನ್ನುವುದಕ್ಕಿಂತ ಮುಖ್ಯವಾಗಿ ಸರಕಾರ ಬೀಳಿಸಲೇಬೇಕಾದ ವಾತಾವರಣ ನಿರ್ಮಾಣವಾಯಿತು.

ಅತಿಯಾದ ಕುಟುಂಬ ಮತ್ತು ಜಾತಿ ರಾಜಕಾರಣ ಕಾಂಗ್ರೆಸ್ ನಾಯಕರಿಗೆ ಅಸಹನೀಯ ಅನಿಸಿತು.
ಸಮ್ಮಿಶ್ರ ಸರಕಾರದ ನಾಯಕರಿಗಷ್ಟೇ ಅಲ್ಲ ಅಧಿಕಾರ ಅನುಭವಿಸುವ ಅವಕಾಶ ಸ್ವಪಕ್ಷದವರಿಗೂ ಇಲ್ಲದಂತಾಯಿತು.

ಅತೃಪ್ತ ಜನ ಯಡಿಯೂರಪ್ಪ ಅವರಿಗೆ ಬೆನ್ನು ಹತ್ತಿ‌ ಆಪರೇಶನ್ ಮಾಡಿಸಿಕೊಳ್ಳಲು ಮುಂದಾದರು.
ಅಷ್ಟರಲ್ಲಿ ಬಿಜೆಪಿಯ ಇನ್ನೊಂದು ಬಿ ಗುಂಪು ಯಡಿಯೂರಪ್ಪ ಅವರಿಗೆ ಕಿರುಕುಳ ಮುಂದುವರೆಸಿತು.‌

ಯಡಿಯೂರಪ್ಪ ಅಪಾರ ಸಹನೆಯಿಂದ ಅದನ್ನೆಲ್ಲ‌ ನುಂಗಿಕೊಂಡು ಮುಖ್ಯ ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಕ್ಯಾಬಿನೆಟ್ ವಿಸ್ತರಣೆ ಸಮಯದಲ್ಲಿ ಮತ್ತದೇ ಬಿ ಗುಂಪು ಸಂಪುಟ ವಿಸ್ತರಣೆಗೆ ತಡೆಯೊಡ್ಡಿತು.

ಅದಕ್ಕೂ ಎದೆಗುಂದದೆ ಸಹಿಸಿಕೊಂಡರು.

ವಿಧಿಯ ವಿಚಿತ್ರ ಲೀಲೆ ಎಂಬಂತೆ ಶುರುವಾದ ಭೀಕರ ಪ್ರವಾಹ ಯಡಿಯೂರಪ್ಪ ಅವರ ಆತ್ಮವಿಶ್ವಾಸ ಮತ್ತು ತಾಕತ್ತನ್ನು ಹೈಕಮಾಂಡ್ ಮುಂದೆ ಸಾಬೀತು ಮಾಡುವ ಅವಕಾಶ ಕಲ್ಪಿಸಿಕೊಟ್ಟಿತು.

ಎಪ್ಪತ್ತಾರರ‌ ಹರೆಯದ ಮುಖ್ಯ ಮಂತ್ರಿಗಳು ಪ್ರವಾಹ ನಿರ್ವಹಣೆಯ ಏಕಾಂಗಿ ಪ್ರದರ್ಶನ ಮಾಡಿದರು. ಯಡಿಯೂರಪ್ಪ ಅವರ ವಯಸ್ಸು ಮುಂದೆ ಮಾಡಿ ಅಧಿಕಾರ ಕಿತ್ತಿ ಕೊಳ್ಳುವ ಸಂಚು ಮಾಡಿದವರಿಗೆ‌ ತಿರುಗು ಬಾಣವಾಯಿತು.

ಈಗ ಹೈಕಮಾಂಡ್ ಹೈ ಅಲರ್ಟ್ ಆಗಿದೆ.
ವಯಸ್ಸಿನ ನೆಪ ಹೇಳೋ ಹಾಗಿಲ್ಲ ಎಂಬ ಅರಿವು ಮೂಡಿದೆ.‌
ಪ್ರವಾಹ ನಿರ್ವಹಣೆಯ ಜವಾಬ್ದಾರಿಯನ್ನು ಏಕಾಂಗಿಯಾಗಿ ಸಂಕಟದಿಂದ ಅನುಭವಿಸಿದರು.

ವಯಸ್ಸಿನ ವಿಚಾರ ಬದಿಗಿರಿಸಿ ಇತರ ಹುಳುಕು ಹುಡುಕಿ ಅಧಿಕಾರ ಕಸಿದುಕೊಳ್ಳುವ ಸಾಧ್ಯತೆಗಳ ಎಚ್ಚರಿಕೆಯೂ ಯಡಿಯೂರಪ್ಪ‌ ಅವರಿಗೆ‌ ಇದೆ.
ಅವರ ಆಪ್ತರನ್ನು ದೂರ ಸರಿಸುವ ಹುನ್ನಾರ ಮಾಡಿ ಕೆಣಕುವ ಪ್ರಯತ್ನ ಮಾಡಬಹುದೆಂಬ ಸಣ್ಣ ಗುಮಾನಿ ಇದೆ.

ಈ ಎಲ್ಲ ಸಾಧ್ಯ ಅಸಾಧ್ಯಗಳ ಮಧ್ಯೆ ದಿಟ್ಟತನದಿಂದ ಆಡಳಿತ ನಡೆಸುವ ಸಹನೆ ಮತ್ತು ಜಾಣತನ ಯಡಿಯೂರಪ್ಪ ಅವರಿಗೆ ಒಲಿದಿದೆ.
ಎಲ್ಲ ಒಳ ಹೊಡೆತಗಳ ಸಹಿಸುವ ಸಾಮರ್ಥ್ಯ ಇರುವ ಯಡಿಯೂರಪ್ಪ ಅವರನ್ನು ಅವರ ಪಾಡಿಗೆ ಅವರನ್ನು ಹೈಕಮಾಂಡ್ ಬಿಡುವುದು ಒಳಿತು.

ಸಂಪುಟ ವಿಸ್ತರಣೆ ಅಲ್ಲಲ್ಲಾ… ಸಂಪುಟ ರಚನೆಯ ನಂತರ ಭುಗಿಲೇಳುವ ಸಮಸ್ಯೆಗಳನ್ನು ಕಾದು ನೋಡಬೇಕು.
ರಾಜಕೀಯ ಪಗಡೆಯಾಟದಲ್ಲಿ ಎಲ್ಲ ಸಾಧ್ಯತೆಗಳ ಅಲ್ಲಗಳೆಯುವಂತೆ ಇಲ್ಲ.
ಸಂಕಷ್ಟ,ಸಂಕಟ ಅನುಭವಿಸುತ್ತ ಅಧಿಕಾರ ಉಳಿಸಿಕೊಳ್ಳುವ ಸರ್ಕಸ್ ಮಾಡಬೇಕು.

ಸಿದ್ದು_ಯಾಪಲಪರವಿ

LEAVE A REPLY

Please enter your comment!
Please enter your name here