‘ದೇವೇಗೌಡರ ಕುಟುಂಬವನ್ನು ಮುಗಿಸಲು ಯಡ್ಡಿಯಿಂದ ಸಾಧ್ಯವಿಲ್ಲ’ ರೇವಣ್ಣ ಗುಡುಗು…!

0
7382

ಎಚ್‌.ಡಿ.ದೇವೇಗೌಡರ ಕುಟುಂಬವನ್ನು ಮುಗಿಸಲು ಸಿಎಂ ಯಡಿಯೂರಪ್ಪ ಸಂಚು ರೂಪಿಸಿದ್ದಾರೆ. ಆದರೆ ಯಡಿಯೂರಪ್ಪ ಅವರಿಂದ ದೇವೇಗೌಡರ ಕುಟುಂಬವನ್ನು ಮುಟ್ಟಲು ಸಾಧ್ಯವಿಲ್ಲ. ಆ ದೇವರು ಮತ್ತು ಜನರಿಂದ ಮಾತ್ರ ಇದು ಸಾಧ್ಯ. ಆದರೆ ಆ ದೈವ ಮತ್ತು ರಾಜ್ಯದ ಜನತೆ ನಮ್ಮ ಜೊತೆಗಿದ್ದಾರೆ ಎಂದು ರೇವಣ್ಣ ಗುಡುಗಿದ್ದಾರೆ.

ಹಾಸನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಎಚ್.ಡಿ. ರೇವಣ್ಣ, ಸಿಎಂ ಬಿ.ಎಸ್.ಯಡಿಯೂರಪ್ಪ ದ್ವೇಷದ ರಾಜಕೀಯ ಮಾಡುವುದಿಲ್ಲ ಎನ್ನುತ್ತಾರೆ. ಆದರೆ ಅಧಿಕಾರ ಸ್ವೀಕರಿಸಿದ ದಿನವೇ ಕಚೇರಿಯ ಫೈಲ್‌ಗಳನ್ನು ತೆಗೆಸುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಇನ್ನು ಸರಿಯಾಗಿ ಚುನಾವಣೆ ನಡೆಸಿದ್ದರೆ ನಾನೇ ಕೆಎಂಎಫ್ ಅಧ್ಯಕ್ಷನಾಗುತ್ತಿದ್ದೆ, ಆದರೆ ಅಲ್ಲಿಯೂ ದ್ವೇಷ ಸಾಧಿಸಿದರು. ನಾನು ಕಳೆದ ೧೫ ವರ್ಷಗಳಿಂದ ಕೆಎಂಎಫ್ ಅಧ್ಯಕ್ಷನಾಗಿದ್ದೇನೆ, ಸಾಕಷ್ಟು ಕೆಲಸ ಮಾಡಿದ್ದೇನೆ, ಈಗ ಬಾಲಚಂದ್ರ ಜಾರಕಿಹೊಳಿ ಅಧ್ಯಕ್ಷರಾದರು ನನಗೇನು ತೊಂದರೆ ಇಲ್ಲ. ಇನ್ನು ಹಾಸನ ಹಾಲು ಒಕ್ಕೂಟದಿಂದ ಚಿಕ್ಕಮಗಳೂರನ್ನು ಬೇರ್ಪಡಿಸುವ ಕೆಲಸಕ್ಕೆ ಯಡಿಯೂರಪ್ಪ ಮುಂದಾಗಿದ್ದಾರೆ. ಹಾಗೇ ಮಾಡಿದರು ನಮಗೇನು ಚಿಂತೆಯಿಲ್ಲ. ಕಳೆದ ೧೪ ತಿಂಗಳಲ್ಲಿ ನಮ್ಮ ಜಿಲ್ಲೆಗೆ ಬೇಕಾದ್ದೆಲ್ಲವನ್ನು ನಾವು ಮಾಡಿದ್ದೇವೆ ಎಂದರು.

LEAVE A REPLY

Please enter your comment!
Please enter your name here