ಮತ್ತೊಂದು ಸಿಹಿ ಸುದ್ಧಿ ಕೊಟ್ಟ ಯಶ್ ದಂಪತಿಗಳು!

0
132

ಇದೀಗ ಅಭಿಮಾನಿ ದೇವರುಗಳಿಗೆ ಸಿಹಿಯಾದ ಸುದ್ಧಿಯೊಂದನ್ನು ಚಂದನವನದ ರಾಕಿಂಗ್ ಜೋಡಿಗಳಾದ ಯಶ್ ಹಾಗೂ ರಾಧಿಕಾ ಪಂಡಿತ್ ಅವರಿಂದ  ಹೊರ ಬಂದಿದೆ. ತಮಗೆಲ್ಲರಿಗೂ ತಿಳಿದಿರುವ ಹಾಗೆ ಮೊದಲಿನಿಂದಲೂ ಈ ರಾಕಿಂಗ್ ಜೋಡಿಗಳು  ತಮ್ಮ ಪ್ರೀತಿ ವಿಚಾರ, ಮದುವೆ ವಿಚಾರ ಹಾಗೂ ಮಕ್ಕಳ ವಿಚಾರವವನ್ನು ಯಾವುದಾದರು ಒಂದು ವಿಭಿನ್ನ ರೀತಿಯಲ್ಲಿ ಅಭಿಮಾನಿಗಳಿಗೆ  ತಿಳಿಸಿ‌ ಅಭಿಮಾನಿಗಳ ಜೊತೆ ತಾವೂ ಸಹ ಸಂತೋಷ ಪಟ್ಟಿದ್ದಾರೆ. ಇದೀಗ ಮತ್ತೊಮ್ಮೆ ಇದೇ ರೀತಿ ಮಾಡಿದ್ದು, ಮತ್ತೊಂದು ವಿಶೇಷ ವಿಚಾರವನ್ನು ರಾಧಿಕಾ ಪಂಡಿತ್ ಅವರು ಹಂಚಿಕೊಳ್ಳಲಿದ್ದಾರೆ.

ಆ ವಿಶೇಷ ವಿಚಾರವೇನೆಂದರೆ  ತಮ್ಮ ವಂಶದ ಕುಡಿ  ಎರಡನೇ ಮಗನ ನಾಮಕರಣದ ಕಾರ್ಯಕ್ರದ ವಿಶೇಷ ವಿಚಾರವನ್ನು ಇದೀಗ ಹಂಚಿಕೊಂಡಿದ್ದು, ಮೊನ್ನೆಯಷ್ಟೇ ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಬ್ಬದಂದು ತಮ್ಮ ಎರಡು ಮಕ್ಕಳಿಗೆ ರಾಧಾ ಕೃಷ್ಣರಂತೆ ಅಲಂಕರಿಸಿ ಜನ್ಮಾಷ್ಟಮಿಯ ಶುಭಾಶಯಗಳನ್ನು ತಿಳಿಸಿದ್ದರು.‌  ಇದರಿಂದ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಖುಷಿಯೂ ಆಗಿತ್ತು. ಇದಾದ ಬಳಿಕ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ  ಯಶ್  ಅಭಿಮಾನಿಯೊಬ್ಬರು ಜೂನಿಯರ್ ಯಶ್ ಅವರ ಚಿತ್ರಕ್ಕೆ ಗಣಪನ ರೀತಿಯಲ್ಲಿ ಫೋಟೋ ಎಡಿಟ್ ಮಾಡಿರುವುದನ್ನು ಸ್ವತಃ  ಯಶ್ ಅವರೇ ಹಂಚಿಕೊಂಡು ತಮ್ಮ ಅಭಿಮಾನಿಗಳಿಗೆ ಗಣೇಶ ಚತುರ್ಥಿಯ ಶುಭಾಶಯವನ್ನು ತಿಳಿಸಿದ್ದರು. ಈ ಪೋಸ್ಟ್ ದೊಡ್ಡ ರೀತಿಯಲ್ಲಿ ಸದ್ಧು ಮಾಡಿತ್ತು.  ಇದೀಗ  ಯಶ್ ಅವರ ಧರ್ಮ ಪತ್ನಿ ರಾಧಿಕಾ ಪಂಡಿತ್ ಅವರು ತಮ್ಮ ಎರಡನೇ ಮಗುವಿನ ನಾಮಕರಣದ ಕುರಿತು ಕೆಲವು ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ  ಹಂಚಿಕೊಂಡಿದ್ದಾರೆ.

ಇನ್ನು ಯಶ್ ದಂಪತಿಗಳಿಗೆ ಮೊದಲ ಮಗು ಜನಿಸಿದ ಮೇಲೆ ಯಾವ ಹೆಸರಿಡುತ್ತಾರೆ ಎಂದು ಅಭಿಮಾನಿಗಳು ಕಾಯ್ದು ಕುಳಿತ್ತಿದ್ದರು. ಅಲ್ಲದೇ ಯಶ್ ದಂಪತಿಗಳಿಗೆ ಹೆಸರುಗಳನ್ನು ಸೂಚಿಸುತ್ತಿದ್ದರು ಕೂಡ.  ಅಂತೆಯೇ ತಮ್ಮ ಮೊದಲ ಮಗುವಿನ ನಾಮಕರಣದ ಕಾರ್ಯಕ್ರಮವನ್ನು ಬಹಳ  ವಿಶೇಷ ಹಾಗೂ ವಿಭಿನ್ನ ರೀತಿಯಲ್ಲಿ ಆಚರಿಸಿ ಐರಾ ಎಂಬ ಹೆಸರನ್ನು ಇಟ್ಟಿದ್ದರು. ಈ ಹೆಸರು ಬಹಳ ವಿಭಿನ್ನವಾಗಿದ್ದು, ಯಶ್ ಅವರ ಹೆಸರಿನ ಮೊದಲೆರೆಡು ಅಕ್ಷರವನ್ನು ಉಲ್ಟಾ ಮಾಡಿ ರಾಧಿಕಾ ಅವರ ಹೆಸರಿನ ಮೊದಲೆರೆಡು ಅಕ್ಷರವನ್ನು ಸೀದಾ ಮಾಡಿ ಐರಾ ಎಂದಿಟ್ಟು ಕುತೂಹಲ ಮೂಡಿಸಿದ್ದರು.

ಇನ್ನು ಈಗಲೂ ಕೂಡ ತಮ್ಮ ಎರಡನೇ ಮಗುವಿಗೆ ಬಹಳ ವಿಭಿನ್ಮ ರೀತಿಯಲ್ಲಿ ನಾಮಕರಣ ಮ‍ಾಡಲಿದ್ದು, ಸದ್ಯದಲ್ಲಿಯೇ ನಾಮಕರಣದ ಸಂಭ್ರಮ ನೆರವೇರಲಿದೆ. ಈ ಕುರಿತು ಮಾಹಿತಿಯನ್ನು ನೀಡಿರುವ ರಾಧಿಕಾ ಪಂಡಿತ್ ಅವರು ತಮ್ಮ ವಂಶೋದ್ದಾರಕನ  ಫೋಟೋವನ್ಬು ಹಂಚಿಕೊಂಡಿದ್ದು “ಬೆಳ್ಳಂಬೆಳಗ್ಗೆ ಸಂತೋಷದ ವಿಚಾರ. ಬಹಳಷ್ಟು ಜನರು ಕೇಳಿದ ಪ್ರಶ್ನೆಗೆ ಇಲ್ಲಿದೆ ಉತ್ತರ. ಆದಷ್ಟು ಬೇಗ ಜೂನಿಯರ್ ಯಶ್ ಗೆ ನಾಮಕರಣ ನೆರವೇರಲಿದೆ. ನಿಮ್ಮೆಲ್ಲರಿಗೂ ತಿಳಿಸುವೆ’ ಎಂದು ಬರೆದು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಸದ್ಯದಲ್ಲಿಯೇ  ನಾಮಕರಣ ಕಾರ್ಯಕ್ರಮ ಸರಳವಾಗಿ ನೆರವೇರಲಿದ್ದು “ಆರ್ಯ” ಎಂಬ ಹೆಸರನ್ನು ಇಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

LEAVE A REPLY

Please enter your comment!
Please enter your name here