ಯಡ್ಡಿ ಸಂಪುಟದಲ್ಲಿ ಲಿಂಗಾಯತರಿಗೆ ಸಿಂಹಪಾಲು, ದಲಿತರ ಕಡೆಗಣನೆ..!

0
241

ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟ ವಿಸ್ತರಣೆಯಾಗಿದ್ದು, ನೂತನ ಸಂಪುಟದಲ್ಲಿ ಜಾತಿವಾರು ಲೆಕ್ಕಾಚಾರದಲ್ಲಿ ಲಿಂಗಾಯತರಿಗೆ ಸಿಂಹಪಾಲು ದೊರೆತಿದೆ. ಅಚ್ಚರಿ ಎಂದರೆ ಮುಖ್ಯಮಂತ್ರಿ ಸಹಿತ ಸಂಪುಟದಲ್ಲಿ ಶೇಕಡಾ 44ರಷ್ಟು ಪ್ರಾತಿನಿಧ್ಯ ಲಿಂಗಾಯತರಿಗೆ ದೊರೆತಿದೆ. ಸದ್ಯ 17 ಶಾಸಕರಿಗೆ ಸಂಪುಟದಲ್ಲಿ ಸ್ಥಾನ ನೀಡಿದ್ದು, ಅದರಲ್ಲಿ ಏಳು ಲಿಂಗಾಯತ ಶಾಸಕರಿಗೆ ಸಚಿವ ಸ್ಥಾನ ಒಲಿದಿದೆ.

ಇನ್ನು ಯಡಿಯೂರಪ್ಪನವರ ಸಂಪುಟದಲ್ಲಿ ದಲಿತ ಸಮುದಾಯವನ್ನು ಕಡೆಗಣಿಸಲಾಗಿದೆ. 17 ಸಚಿವ ಸ್ಥಾನಗಳಲ್ಲಿ ಕೇವಲ ಒಂದು ಸ್ಥಾನವನ್ನು ಮಾತ್ರ ದಲಿತ ಸಮುದಾಯಕ್ಕೆ ನೀಡಲಾಗಿದೆ. ದಲಿತ ಸಮುದಾಯದ ಎಡಗೈ ನಾಯಕ ಗೋವಿಂದ ಕಾರಜೋಳ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ. ಆದರೆ ಬಲಗೈ ಸಮುದಾಯದ ಯಾವುದೇ ಶಾಸಕನಿಗೂ ಸಚಿವ ಸ್ಥಾನ ನೀಡಿಲ್ಲ.

ಬಿ.ಎಸ್. ಯಡಿಯೂರಪ್ಪನವರ ನೂತನ ಸಚಿವ ಸಂಪುಟ ಜಾತಿವಾರು

ಗೋವಿಂದ್ ಕಾರಜೋಳ- ದಲಿತ
ಡಾ. ಅಶ್ವಥ್ ನಾರಾಯಣ್- ಬ್ರಾಹ್ಮಣ
ಲಕ್ಷ್ಮಣ್ ಸವದಿ-ಲಿಂಗಾಯತ
ಕೆ.ಎಸ್. ಈಶ್ವರಪ್ಪ- ಕುರುಬ
ಜಗದೀಶ್ ಶೆಟ್ಟರ್- ಲಿಂಗಾಯತ
ಆರ್. ಅಶೋಕ್- ಒಕ್ಕಲಿಗ
ಬಿ.ಶ್ರೀರಾಮುಲು- ನಾಯಕ
ಸುರೇಶ್ ಕುಮಾರ್- ಬ್ರಾಹ್ಮಣ
ವಿ.ಸೋಮಣ್ಣ- ಲಿಂಗಾಯತ
ಸಿ.ಟಿ.ರವಿ- ಒಕ್ಕಲಿಗ
ಬಸವರಾಜ್ ಬೊಮ್ಮಾಯಿ- ಲಿಂಗಾಯತ
ಕೋಟಾ ಶ್ರೀನಿವಾಸ್ ಪೂಜಾರಿ- ಈಡಿಗ
ಜೆ.ಸಿ.ಮಾಧುಸ್ವಾಮಿ- ಲಿಂಗಾಯತ
ಸಿ.ಸಿ.ಪಾಟೀಲ್- ಲಿಂಗಾಯತ
ಹೆಚ್.ನಾಗೇಶ್- ದಲಿತ (ಪಕ್ಷೇತರ)
ಪ್ರಭು ಚೌಹಾಣ್- ಲಂಬಾಣಿ
ಶಶಿಕಲಾ ಜೊಲ್ಲೆ- ಲಿಂಗಾಯತ

LEAVE A REPLY

Please enter your comment!
Please enter your name here