ಸಂಪುಟ ವಿಸ್ತರಣೆಯಲ್ಲಿ ಕರಾವಳಿಗೆ ಕೈ ಕೊಟ್ಟ ಯಡಿಯೂರಪ್ಪ..!

0
301

ಬಿ.ಎಸ್. ಯಡಿಯೂರಪ್ಪ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರ ಇಂದು ಸಂಪುಟ ವಿಸ್ತರಣೆ ಮಾಡಿದೆ. ಯಡಿಯೂರಪ್ಪ ಸಿಎಂ ಆಗಿ 25 ದಿನಗಳ ಬಳಿಕ ಸಂಪುಟ ವಿಸ್ತರಣೆ ನಡೆದಿದ್ದು, ಕೇಸರಿ ಪಾಳಯದಲ್ಲಿ ಹೊಸ ಕಿಚ್ಚು ಹೊತ್ತಿಸಿದೆ. ಸಂಪುಟದ ಹೊಸ 17 ಶಾಸಕರು ಇಂದು ಪ್ರಮಾಣವಚನ ಸ್ವೀಕರಿಸಿದ್ದು, ಸಚಿವ ಸ್ಥಾನದ ಪಟ್ಟಿಯನ್ನು ಪೂರ್ಣವಾಗಿ ಬಿಜೆಪಿ ರಾಷ್ಟ್ರೀಯ ನಾಯಕರೇ ಅಂತಿಮಗೊಳಿಸಿದ್ದಾರೆ ಎನ್ನಲಾಗಿದೆ. ಆದರು ಸಂಪುಟದಲ್ಲಿ ಯಡಿಯೂರಪ್ಪನವರ ಕೈ ಮೇಲಾಗಿದೆ ಎನ್ನಲಾಗಿದೆ.

ಆದರೆ ಯಡಿಯೂರಪ್ಪನವರು ಸಂಪುಟ ವಿಸ್ತರಣೆಯಲ್ಲಿ ಕರಾವಳಿ ಕರ್ನಾಟಕವನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದ್ದಾರೆ ಎಂಬ ಕೂಗು ಕೇಳಿ ಬರುತ್ತಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕರಾವಳಿ ಕರ್ನಾಟಕದ ಮೂರು ಜಿಲ್ಲೆಗಳಲ್ಲಿಯೂ ಬಿಜೆಪಿ ಅತ್ಯಧಿಕ ಸ್ಥಾನಗಳನ್ನು ಗಳಿಸಿದ್ದರು, ಸಂಪುಟ ವಿಸ್ತರಣೆಯಲ್ಲಿ ಕರಾವಳಿ ಭಾಗಕ್ಕೆ ಆದ್ಯತೆ ನೀಡಿಲ್ಲ. ಅಚ್ಚರಿ ಎಂದರೆ ಕರಾವಳಿ ಭಾಗದ ಯಾವುದೇ ಶಾಸಕನಿಗೂ ಸಂಪುಟದಲ್ಲಿ ಸ್ಥಾನ ನೀಡದೆ, ಎಂಎಲ್‍ಸಿ ಆಗಿರುವ ಕೋಟಾ ಶ್ರೀನಿವಾಸ್ ಪೂಜಾರಿ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ. ಈ ಮೂಲಕ ಕೈ ಹಿಡಿದ ಕರಾವಳಿಗರನ್ನು ಯಡಿಯೂರಪ್ಪ ಕೈ ಬಿಟ್ಟಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.

ಬಿ.ಎಸ್. ಯಡಿಯೂರಪ್ಪನವರ ನೂತನ ಸಚಿವ ಸಂಪುಟ
ಗೋವಿಂದ್ ಕಾರಜೋಳ
ಡಾ. ಅಶ್ವಥ್ ನಾರಾಯಣ್
ಲಕ್ಷ್ಮಣ್ ಸವದಿ
ಕೆ.ಎಸ್. ಈಶ್ವರಪ್ಪ
ಜಗದೀಶ್ ಶೆಟ್ಟರ್
ಆರ್. ಅಶೋಕ್
ಬಿ.ಶ್ರೀರಾಮುಲು
ಸುರೇಶ್ ಕುಮಾರ್
ವಿ.ಸೋಮಣ್ಣ
ಸಿ.ಟಿ.ರವಿ
ಬಸವರಾಜ್ ಬೊಮ್ಮಾಯಿ
ಕೋಟಾ ಶ್ರೀನಿವಾಸ್ ಪೂಜಾರಿ
ಜೆ.ಸಿ.ಮಾಧುಸ್ವಾಮಿ
ಸಿ.ಸಿ.ಪಾಟೀಲ್
ಹೆಚ್.ನಾಗೇಶ್
ಪ್ರಭು ಚೌಹಾಣ್
ಶಶಿಕಲಾ ಜೊಲ್ಲೆ

LEAVE A REPLY

Please enter your comment!
Please enter your name here