ಯಡಿಯೂರಪ್ಪನವರ ಸೋದರಳಿಯ ಪೊಲೀಸ್ ಅಧಿಕಾರಿಗಳಿಗೆ ಧಮ್ಕಿ…!

0
386

ಚಾಮುಂಡಿ ಬೆಟ್ಟದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಸೋದರಳಿಯ ಪೊಲೀಸ್ ಅಧಿಕಾರಿಗಳಿಗೆ ಧಮ್ಕಿ ಹಾಕಿದ ಪ್ರಸಂಗ ನಡೆದಿದೆ. ಮುಖ್ಯಮಂತ್ರಿಗಳು ನಾಡ ಅಧಿದೇವತೆ ಚಾಮುಂಡೇಶ್ವರಿ ದೇವಿ ದರ್ಶನ ಪಡೆಯಲು ಆಗಮಿಸಿದಾಗ ಭದ್ರತೆ ದೃಷ್ಟಿಯಿಂದ ದೇವಾಲಯದೊಳಗೆ ಯಾರನ್ನೂ ಬಿಟ್ಟಿರಲಿಲ್ಲ.

ದೇಗುಲದೊಳಗೆ ಮುಖ್ಯಮಂತ್ರಿಗಳ ಜೊತೆ ಸಚಿವರಾದ ಆರ್.ಅಶೋಕ್, ಸೋಮಣ್ಣ, ಶಾಸಕರಾದ ರಾಮದಾಸ್, ನಾಗೇಂದ್ರ ಹಾಗೂ ಕೆಲವು ಅಧಿಕಾರಿಗಳು ಹೋದರು.

ಇದೇ ಸಮಯದಲ್ಲಿ ಯಡಿಯೂರಪ್ಪ ಅವರ ತಂಗಿಯ ಮಗ ರಾಜೇಶ್ ಮತ್ತಿತರರು ದೇವಾಲಯ ಪ್ರವೇಶಿಸಲು ಹೋದಾಗ ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಅಧಿಕಾರಿಗಳು ಅವರುಗಳನ್ನು ತಡೆದರು.

ಇದರಿಂದ ಕುಪಿತಗೊಂಡ ರಾಜೇಶ್ ಪೊಲೀಸ್ ಅಧಿಕಾರಿಗಳ ವಿರುದ್ಧ ಹರಿಹಾಯ್ದು ನಾನು ಸಿಎಂ ಅಳಿಯ ನನ್ನನ್ನೇ ತಡೆಯುತ್ತೀರ ಎಂದು ಧಮ್ಕಿ ಹಾಕಿದ್ದಾರೆ. ಆ ನಂತರ ರಾಜೇಶ್ ಅವರನ್ನು ಚಾಮುಂಡೇಶ್ವರಿ ದೇವಾಲಯದೊಳಗೆ ಕಳುಹಿಸಲಾಯಿತು.

LEAVE A REPLY

Please enter your comment!
Please enter your name here