ಯಡ್ಡಿ ಸಂಪುಟ ಬಿಕ್ಕಟ್ಟು, ಯಾರಿಗೆ ಯಾವ ಖಾತೆ ಗೊತ್ತಾ..?!

0
1166

ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿರುವ 17 ನೂತನ ಸಚಿವರಿಗೆ ಇಂದು ಖಾತೆ ಹಂಚಿಕೆ ಮಾಡಲಿದ್ದಾರೆ. ಪ್ರಭಾವಿ ಖಾತೆಗಳಿಗಾಗಿ ಅನೇಕ ನಾಯಕರು ಲಾಬಿ ನಡೆಸಿದ್ದು, ಖಾತೆ ಹಂಚಿಕೆಯ ಬಿಕ್ಕಟ್ಟು ಸೃಷ್ಟಿಯಾಗಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ದೆಹಲಿಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿಯಾಗಿ ಸುದಿರ್ಘ ಚರ್ಚೆ ನಡೆಸಿದ್ದಾರೆ. ರಾಜ್ಯ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆ ಅಮಿತ್ ಶಾ ನಿಗಾ ವಹಿಸಿದ್ದು, ಯಾರಿಗೆ ಯಾವ ಯಾವ ಇಲಾಖೆ ಹಂಚಿಕೆ ಮಾಡಬೇಕು ಎಂದು ಫೈನಲ್ ಮಾಡಿದ್ದಾರೆ.

ಸಂಭಾವನೀಯ ಖಾತೆ ಪಟ್ಟಿ

ಸಿಎಂ ಬಿ.ಎಸ್. ಯಡಿಯೂರಪ್ಪ- ಹಣಕಾಸು, ಜಲಸಂಪನ್ಮೂಲ, ಇಂಧನ, ಗುಪ್ತದಳ, ವಾರ್ತಾ, ಐಟಿಬಿಟಿ, ಗಣಿ ಹಾಗೂ ಭೂ ವಿಜ್ಞಾನ
ಸುರೇಶ್ ಕುಮಾರ್-ಪ್ರಾಥಮಿಕ, ಪ್ರೌಢ ಶಿಕ್ಷಣ/ನಗರಾಭಿವೃದ್ಧಿ
ಬಸವರಾಜ್ ಬೊಮ್ಮಾಯಿ-ಗ್ರಾಮೀಣಾಭಿವೃದ್ಧಿ/ಬೃಹತ್ ಕೈಗಾರಿಕೆ
ಜೆ.ಸಿ. ಮಾಧುಸ್ವಾಮಿ -ಕಾನೂನು ಮತ್ತು ಸಂಸದೀಯ/ಕೃಷಿ
ಈಶ್ವರಪ್ಪ-ಲೋಕಪಯೋಗಿ
ಜಗದೀಶ್ ಶೆಟ್ಟರ್ -ಕಂದಾಯ

ವಿ.ಸೋಮಣ್ಣ-ವಸತಿ/ನಗರಾಭಿವೃದ್ಧಿ
ಡಾ.ಅಶ್ವಥ್ ನಾರಾಯನ್ -ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ಆರ್. ಅಶೋಕ್-ಬೆಂಗಳೂರು ಅಭಿವೃದ್ಧಿ/ಗೃಹ
ಶ್ರೀರಾಮುಲು-ಸಮಾಜ ಕಲ್ಯಾಣ/ಸಾರಿಗೆ
ಸಿ.ಟಿ. ರವಿ -ಉನ್ನತ ಶಿಕ್ಷಣ/ಅರಣ್ಯ

ಲಕ್ಷ್ಮಣ್ ಸವದ-ಸಹಕಾರ/ಸಕ್ಕರೆ
ಶಶಿಕಲಾ ಜೊಲ್ಲೆ-ಮಹಿಳಾ ಮತ್ತು ಮಕ್ಕಳ ಕಲ್ಯಾಣ
ಕೋಟ ಶ್ರೀನಿವಾಸ್ ಪೂಜಾರಿ- ಮೀನುಗಾರಿಕೆ/ಮುಜರಾಯಿ/ಬಂದರು
ಪ್ರಭು ಚೌಹಾಣ್ -ಯುವಜನ ಸೇವೆ ಮತ್ತು ಕ್ರೀಡೆ/ಕೌಶಲ್ಯಾಭಿವೃದ್ಧಿ
ನಾಗೇಶ್-ಸಣ್ಣ ಕೈಗಾರಿಕೆ/ಸಣ್ಣ ನೀರಾವರಿ/ಕಾರ್ಮಿಕ
ಸಿ.ಸಿ.ಪಾಟೀಲ್ -ಕನ್ನಡ ಮತ್ತು ಸಂಸ್ಕೃತಿ/ತೋಟಗಾರಿಕೆ
ಗೋವಿಂದ ಕಾರಜೋಳ-ಸಮಾಜ ಕಲ್ಯಾಣ/ಗೃಹ

LEAVE A REPLY

Please enter your comment!
Please enter your name here