ಆಗಸ್ಟ್​ 21ಕ್ಕೆ Xiaomi-Mi9 ಮೊಬೈಲ್ ಮಾರುಕಟ್ಟೆಗೆ

0
118

ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ನಂಬರ್ 1 ಸ್ಥಾನದಲ್ಲಿರೋ ಚೀನಾ ಮೂಲದ ಮೊಬೈಲ್​ ಕಂಪನಿ Xiaomi ವಿನೂತನ, ವಿಶಿಷ್ಟ ಫೀಚರ್​​ಗಳನ್ನು ಹೊಂದಿರುವ ಮೊಬೈಲ್​ಗಳನ್ನು ಪರಿಚಯಿಸುತ್ತಲೇ ಬಂದಿದ್ದು, ಗ್ರಾಹಕ ಸ್ನೇಹಿಯಾಗಿ ಮಾರುಕಟ್ಟೆಯಲ್ಲಿ ರಾಜ್ಯಭಾರ ಮಾಡ್ತಿದೆ.

ಇದೀಗ ಈ ಸಂಸ್ಥೆ Xiaomi-Mi9 ಅನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಅತ್ತುತ್ತಮ ಕ್ಯಾಮರಾ, ಬ್ಯಾಟರಿ ಬ್ಯಾಕ್​ಅಪ್​, ಆಕರ್ಷಕ ಡಿಸ್ಪ್ಲೆಯನ್ನು ಹೊಂದಿದೆ. 6.13 ಇಂಚು ಡಿಸ್ಪ್ಲೇ ಹೊಂದಿರು ಈ ಮೊಬೈಲ್ ಸಖತ್ ಸ್ಟೈಲಿಶ್​​ ಆಗಿದೆ. ಕ್ಯಾಮರಾ ಮತ್ತು ಬ್ಯಾಟರಿ ವಿಚಾರಕ್ಕೆ ಬಂದ್ರೆ ಈ ಮೊಬೈಲ್​ ಟ್ರಿಪಲ್​ ರಿಯರ್​ ಸೆನ್ಸಾರ್​ ಹೊಂದಿದ್ದು ,48MP+12MP+16MP ಲೆನ್ಸಸ್​​ ಹೊಂದಿದೆ. ಹಾಗೂ 20MP ಫ್ರಂಟ್​​ ಕ್ಯಾಮರವನ್ನು ಇದೆ.

ಉತ್ತಮವಾದ ಬ್ಯಾಟರಿ ಬ್ಯಾಕ್​ಅಪ್​ ಹೊಂದಿದ್ದು 3,300mAh ಇದೆ. ಕಡಿಮೆ ಅವಧಿಯಲ್ಲಿ ಬ್ಯಾಟರಿ ಚಾರ್ಜ್​​ ಮಾಡ್ಬಹುದು. ಮೊಬೈಲ್​ನಲ್ಲಿ 128GB ಇನ್​ಬಿಲ್ಟ್​​ ಸ್ಟೋರೆಜ್​ ಇದೆ. 6GB RAM ಹೊಂದಿದೆ. ಡೀಪ್​ ಗ್ರೇ, ಕಡುನೀಲಿ ಕಲರ್​​ಗಳಲ್ಲಿ ಲಭ್ಯವಾಗಲಿದೆ. ಭಾರತದಲ್ಲಿ ಈ ಮೊಬೈಲ್​ಗೆ ಆರಂಭಿಕ ದರ 31,790 ರೂ. ಆಗಸ್ಟ್​ 21ಕ್ಕೆ ಭಾರತದ ಮಾರುಕಟ್ಟೆಗೆ ಲಗ್ಗೆ ಇಡಲಿದೆ.

LEAVE A REPLY

Please enter your comment!
Please enter your name here