ಆತ ವಿಶ್ವದ ದೊಡ್ಡ ಶ್ರೀಮಂತ ಆದ್ರೂ ಪ್ರತಿರಾತ್ರಿ ಪತ್ನಿಯೊಂದಿಗೆ ಪಾತ್ರೆ ತೊಳೆಯುತ್ತಾರೆ…ಅದಕ್ಕೆ ಬಲವಾದ ಕಾರಣ ಇದೆ..!

0
3186

ಶ್ರೀಮಂತ ಅಂದ್ರೆ ಮುಗಿಯಿತು, ಆತನಿಗೆ ಕೈಗೊಬ್ಬ, ಕಾಲಿಗೊಬ್ಬ ಆಳು. ಆತ ಚಿಟಿಕೆ ಹೊಡೆದರೆ ಸಾಕು ಎಲ್ಲವೂ ಅವರ ಕಾಲೆದುರು ಬಂದು ಬೀಳುತ್ತದೆ ಎನ್ನುವುದು ಎಲ್ಲರ ಊಹೆ. ಆದರೆ ಆ ವ್ಯಕ್ತಿ ಆ ಶ್ರೀಮಂತ ಎಂಬ ಪಟ್ಟ ಗಳಿಸಲು ಎಷ್ಟು ಶ್ರಮ ಪಟ್ಟಿರುತ್ತಾನೆ ಎಂಬುದು ಆತನಿಗೇ ಗೊತ್ತು. ಬಿಲ್‍ಗೇಟ್ಸ್, ಪ್ರಪಂಚದ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನ ಗಳಿಸಿರುವ ಮೈಕ್ರೋಸಾಫ್ಟ್ ಸಂಸ್ಥೆಯ ಒಡೆಯ. ದುಡ್ಡಿಗೆ ಯಾವ ಬರವೂ ಇಲ್ಲ. ಪ್ರತಿ ಕೆಲಸಕ್ಕೆ ಆಳುಕಾಳು ಇರುತ್ತಾರೆ. ಇಷ್ಟಾದರೂ ಅವರು ಪ್ರತಿದಿನ ರಾತ್ರಿ ಊಟ ಮುಗಿಸಿ ಪತ್ನಿ ಮಿಲಿಂದಾ ಗೇಟ್ಸ್ ಜೊತೆ ಪಾತ್ರೆ ತೊಳೆದೇ ಮಲಗುವುದಂತೆ. ಇದು ಇಂದು ನಿನ್ನೆಯ ಅಭ್ಯಾಸವಲ್ಲ.

 

ಮಿಲಿಂದಾ ಮೊದಲ ಮಗುವಿಗೆ ಜನ್ಮ ನೀಡಿದಾಗಿನಿಂದ ನಡೆದುಕೊಂಡು ಬಂದ ಸಂಪ್ರದಾಯ. ಮಿಲಿಂದಾ ಹಾಗೂ ಬಿಲ್‍ಗೇಟ್ಸ್ ಇಬ್ಬರದ್ದೂ ಪ್ರೇಮವಿವಾಹ. ಈಗ ಇಬ್ಬರಿಗೆ ಮೂವರು ಮಕ್ಕಳು. ಇವರಿಬ್ಬರ ವೈವಾಹಿಕ ಜೀವನಕ್ಕೆ ಈಗ 25 ವರ್ಷಗಳು ತುಂಬಿವೆ. ಒಂದು ದೊಡ್ಡ ಸಾಫ್ಟ್‍ವೇರ್ ಕಂಪನಿಯ ಓನರ್ ಆಗಿರುವುದರಿಂದ ಹೆಚ್ಚಿನ ಜವಾಬ್ದಾರಿ ಅವರ ಹೆಗಲ ಮೇಲಿರುತ್ತದೆ. ಇದರ ನಡುವೆ ಮನೆಯವರೊಂದಿಗೆ ಕಾಲ ಕಳೆಯಲು ಕೂಡಾ ಅವರಿಗೆ ಸಮಯ ಇರುವುದಿಲ್ಲ.

 

ಮಿಲಿಂದಾ ಮೊದಲ ಭಾರಿ ಗರ್ಭಿಣಿಯಾದಾಗ ಪತಿಯನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದರಂತೆ, ಅವರೊಂದಿಗೆ ಹೆಚ್ಚು ಸಮಯ ಕಾಲ ಕಳೆಯಲು ಸಾಧ್ಯವಾಗುತ್ತಿರಲಿಲ್ಲ. ಈ ವಿಷಯವನ್ನು ಪತಿ ಬಳಿ ಹೇಳಿಕೊಂಡಿದ್ದಾರೆ. ಇನ್ನು ಪತ್ನಿಗೆ ಸಮಯ ನೀಡಲು ಸಾಧ್ಯವಾಗದಿರುವುದಕ್ಕೆ ಬಿಲ್‍ಗೇಟ್ಸ್ ಅವರಿಗೆ ಕೂಡಾ ಬೇಸರ ಇತ್ತಂತೆ. ಅದೇ ದಿನ ಇಬ್ಬರೂ ಒಂದು ಒಪ್ಪಂದಕ್ಕೆ ಬಂದಿದ್ದಾರೆ. ಅಂದಿನಿಂದ ಇಲ್ಲಿಯವರೆಗೂ ಪ್ರತಿರಾತ್ರಿ ಊಟ ಆದ ನಂತರ ಇಬ್ಬರೂ ಜೊತೆ ಸೇರಿ ಪಾತ್ರೆಗಳನ್ನು ತೊಳೆಯುತ್ತಾರಂತೆ.

 

ಆ ಸಮಯದಲ್ಲಿ ಕಷ್ಟಸುಖಗಳನ್ನು ಹಂಚಿಕೊಳ್ಳುತ್ತಾರಂತೆ. ಅವರ ವೈವಾಹಿಕ ಜೀವನ ಇಂದಿನವರೆಗೂ ಗಟ್ಟಿಯಾಗಿರಲು ಇದೂ ಕೂಡಾ ಒಂದು ಕಾರಣವಂತೆ. ಈ ವಿಷಯವನ್ನು ಮಿಲಿಂದಾ ಗೇಟ್ಸ್, ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಹೆಚ್ಚು ಹೆಚ್ಚು ಹಣ ಸೇರುತ್ತಿದ್ದಂತೆ ದುರಹಂಕಾರದಿಂದ ಮೆರೆಯುವ ಜನರ ನಡುವೆ ಬಿಲ್‍ಗೇಟ್ಸ್ ನಿಜಕ್ಕೂ ವಿಭಿನ್ನ. ‘ತುಂಬಿದ ಕೊಡ ತುಳುಕುವುದಿಲ್ಲ’ ಎಂದು ಹೇಳುವುದು ಇದಕ್ಕೆ ಅಲ್ಲವೇ…?

-RKS

LEAVE A REPLY

Please enter your comment!
Please enter your name here