ಲಂಕಾಧಿಪತಿ ವಿಶ್ವದ ಮೊದಲ ವಿಮಾನ ಚಾಲಕ!ಸಂಶೋಧನೆಗೆ ಲಂಕಾ ಚಾಲನೆ .

0
163

ರಾಮಾಯಣ ಭಾರತದ ಪ್ರತಿಯೊಬ್ಬರ ಮನದಲ್ಲಿ ಉಳಿದಿರುವ, ತಲೆಮಾರುಗಳಿಂದ ಮಾತಿನಲ್ಲಿ ಪರಿಚಿತವಿರುವ ಸುಮಾರು 5000 ವರ್ಷಗಳ ಪುರಾಣದ ಕಥೆ. ರಾಮಾಯಣ ರಾಮ ಹಾಗೂ ಧರ್ಮದ ಬಗೆಗಿರುವ ಅದ್ಭುತ ಗ್ರಂಥ ರಾಮಾಯಣದಲ್ಲಿ ರಾಮನಂತೆ ಜನರ ಮನದಲ್ಲಿ ಲಂಕಾಧಿಪತಿ ರಾವಣನು ಉಳಿಯುವನು , ಶ್ರೀಲಂಕಾ ಸರ್ಕಾರ ರಾವಣನನ್ನು ಪ್ರಪಂಚದ ಮೊದಲ ವಿಮಾನ ಚಾಲಕನೆಂದು ಘೋಷಣೆ ಮಾಡಿದ್ದು . ಈ ಬಗ್ಗೆ ಅಧ್ಯಯನ ನಡೆಸುವುದಾಗಿ ತಿಳಿಸಿದೆ.
ಈ ಕುರಿತು ಸಂಶೋಧನೆಯನ್ನು ನಡೆಸಬೇಕಾಗಿ ನಾಗರಿಕ ವಿಮಾನಯಾನ ಸಂಸ್ಥೆಯ ಶಶಿ ದಾನತುಂಗೆ ಮನವಿ ಮಾಡಿದ್ದರು ಮುಂಬರುವ ದಿನಗಳಲ್ಲಿ ಅತಿ ಶೀಘ್ರದಲ್ಲಿ ಜಗತ್ತಿಗೆ ರಾವಣನ ಬಗೆಗೆ ತಿಳಿಸುತ್ತೇವೆ ಎಂದು ತಿಳಿಸಿದ್ದಾರೆ.
ರಾವಣನು ತನ್ನ ಪುಷ್ಪಕ ವಿಮಾನದಲ್ಲಿ ಸೀತೆಯನ್ನು ಅಪಹರಣ ಮಾಡಿದ ಎಂದು ರಾಮಾಯಣ ತಿಳಿಸುತ್ತದೆ . ಹಾಗೆಯೇ ರಾವಣನು ಪುಷ್ಪಕ ವಿಮಾನವನ್ನು ಕುಬೇರನಿಂದ ಕಸಿದುಕೊಂಡಿದ್ದ ಎಂದು ತಿಳಿದುಬರುತ್ತದೆ. ಶ್ರೀಲಂಕಾ ಮತ್ತು ಭಾರತದ ಸಂಬಂಧ ಗತಕಾಲದಿಂದಲೂ ಇದೆ ಇದರ ಬಗೆಗೆ ಭಾರತದಿಂದ ಯಾವುದೇ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗಿಲ್ಲವಾದರೂ ಭಾರತೀಯರಲ್ಲಿ ಇದರ ಬಗೆಗೆ ನಿರೀಕ್ಷೆ ಗರಿಗೆದರಿದೆ..
ರಾಮಾಯಣವನ್ನು ಸುಳ್ಳು ಕತೆಯೆಂದು ವಾದಿಸುವವರು ಬಾಯಿ ಮುಚ್ಚಿಕೊಳ್ಳುವಂತೆ ನಾಸಾ ನೀಡಿದ್ದ ಸಮುದ್ರದಾಳದಲ್ಲಿ ಪತ್ತೆಯಾದ ಸೇತುವೆ ಆಕಾರದ ಫೋಟೋ ಮಾಡಿತ್ತು. ಇದರಿಂದ ಲಂಕೆಗೆ ರಾಮ ಹಾಗೂ ಕಪಿವೀರರು ಸೇತುವೆ ಕಟ್ಟಿದ್ದು ನಿಜ ಎಂದು ಸಾಬೀತಾಗಿತ್ತು.
ಆದರೆ ಶ್ರೀಲಂಕಾ ಗತಕಾಲದ ಚರಿತ್ರೆಯ ಪುಟಗಳಿಗೆ ಇಳಿಯುವ ಪ್ರಯತ್ನದಲ್ಲಿದೆ, ರಾಮನು ಭಾರತದಲ್ಲಿ ಹೇಗೆ ದೈವ, ಪುರುಷೋತ್ತಮನೊ, ಆದರ್ಶ ವ್ಯಕ್ತಿಯು ಅದೇ ರೀತಿ ರಾವಣನನ್ನು ಆರಾಧಿಸುವ ಜನರು ಲಂಕಾದಲ್ಲಿ ಇದ್ದಾರೆ ಶ್ರೀಲಂಕಾದ ಸರ್ಕಾರವು ಈ ಶೋಧನೆಯಲ್ಲಿ ಯಶಸ್ವಿಯಾಗಲಿ ಎಂಬುದು ಜನರ ಆಶಯವಾಗಿದೆ.

LEAVE A REPLY

Please enter your comment!
Please enter your name here