ತನ್ನ ಹೊಸ ಕಾರಿಗೆ ಸಗಣಿ ಬಳಿದ ಮಹಿಳೆ: ಸಮಾಜಿಕ ಮಾಧ್ಯಮಗಳಲ್ಲಿ ಸಖತ್‍ ವೈರಲ್‍

0
123

ಸಾಮಾನ್ಯವಾಗಿ ನಾವೆಲ್ಲಾ ಹೊಸ ಕಾರನ್ನು ಖರೀದಿಸಿದರೆ, ಸ್ಟಿಕ್ಕರ್‍ ಹಾಕಿಸಿಕೊಳ್ಳುವುದು ಸರ್ವೇ ಸಾಮಾನ್ಯ. ಅಲ್ಲದೇ, ಅದಕ್ಕೆ ಬೇಕಾದ ಎಕ್ಟ್ರಾ ಫಿಟಿಂಗ್‍ಗಳನ್ನು ಹಾಕಿಸಿ ಮತ್ತಷ್ಟು ಡಿಸೈನ್‍ ಮಾಡಿಸಿಕೊಳ್ಳುತ್ತೇವೆ. ಆದರೆ ಗುಜರಾತ್‍ ನಲ್ಲಿ ಒಬ್ಬ ಮಹಿಳೆ ತಮ್ಮ ಹೊಸ ಕಾರಿಗೆ ಸಂಪೂರ್ಣವಾಗಿ ಸಗಣಿಯನ್ನು ಬಳಿದು ಅಲಂಕಾರ ಮಾಡಿದ್ದಾರೆ.
ಇದು ಇಡೀ ದೇಶದಲ್ಲಿ ದೊಡ್ಡ ಮಟ್ಟದಲ್ಲಿ ವೈರಲ್‍ ಆಗಿದೆ. ಬೇಸಿಗೆ ವೇಳೆ ಕಾರಿನಲ್ಲಿ ಪ್ರಯಾಣ ಮಾಡುವಾಗ ಧಗೆಯೂ ಹೆಚ್ಚಾಗುತ್ತದೆ. ಆಗ ಸಹಜವಾಗಿ ಕಾರಿನಲ್ಲಿರುವ ಎಸಿಯನ್ನು ಆನ್‍ ಮಾಡುತ್ತೇವೆ ಅಥವಾ ಕಾರನ್ನು ಮರದ ನೆರಳನಲ್ಲಿ ನಿಲ್ಲಿಸುತ್ತೇವೆ.
ಆದರೆ ಗುಜರಾತ್‍ ನ ಅಹಮದಾಬಾದ್ ನಲ್ಲಿ ಸಜೆಲ್‍ಶಾ ಎಂಬ ಮಹಿಳೆ ತಮ್ಮ ಟಯೋಟಾ ಈಟಿಯೋಸ್‍ ಹೊಸ ಕಾರಿಗೆ ಸಂಪೂರ್ಣವಾಗಿ ಸಗಣಿ ಬಳಿದು ಅಲಂಕಾರ ಮಾಡಿದ್ದಾರೆ. ಅಲ್ಲದೇ, ರಂಗೋಲಿಯಲ್ಲೂ ಚಿತ್ರ ಬಿಡಿಸಿ ಅಲಂಕಾರ ಮಾಡಿದ್ದಾರೆ. ಹೀಗೆ ಸಗಣಿಯನ್ನು ಬಳಿಯುವುದರಿಂದ ಕಾರನ್ನು ಕೂಲ್‍ ಆಗಿ ಇಡಬಹುದು ಎನ್ನುತ್ತಾರೆ ಶಾ.
ಬೇಸಿಗೆಯಲ್ಲಿ ಕಾರು ತಂಪಾಗಿದ್ದರೆ, ಚಳಿಗಾಲದಲ್ಲಿ ಬೆಚ್ಚಗಿರುತ್ತದೆ ಎಂಬುದು ಸಜೆಲ್‍ ಶಾ ಅವರ ಪ್ರತಿಪಾದನೆ. ಅಲ್ಲದೇ, ಕಾರಿಗೆ ತಗಲುವ ತರಚಿನ ಗುರುತು ಕೂಡ ಕಾಣುವುದಿಲ್ಲ ಎಂಬುದು ಅವರ ವಾದ. ಕಾರು ಖರೀದಿಸಿದ ದಿನದಿಂದ ಇಂದಿನವರೆಗೂ ಎಸಿಯನ್ನು ಹಾಕಿಲ್ಲ ಎಂದು ಹೇಳುತ್ತಾರೆ.
ಕಾರಿಗೆ ಸಗಣಿಯಿಂದ ಅಲಂಕಾರ ಮಾಡಿದ ನಂತರ ಕಾರಿನಲ್ಲಿ ಎಸಿ ಹಾಕುವ ಸಂಭವವೇ ಬಂದಿಲ್ಲ ಎನ್ನುತ್ತಾರೆ. ಅಹಮದಾಬಾದ್‍ ನಲ್ಲಿ ಇತ್ತೀಚೆಗೆ 40 ಡಿಗ್ರಿಯವರೆಗೆ ತಾಪಮಾನ ಏರಿಕೆಯಾಗಿದ್ದು, ಬಹುತೇಕರು ಕಾರಿನಲ್ಲಿ ಎಸಿಯನ್ನು ಬಳಕೆ ಮಾಡುತ್ತಾರೆ. ಇದು ಆರೋಗ್ಯದ ದೃಷ್ಟಿಯಿಂದಲೂ ಉತ್ತಮವಲ್ಲ. ಹಾಗಾಗಿ ಸಗಣಿ ಮೊರೆ ಹೋಗಿರುವುದಾಗಿ ಹೇಳುತ್ತಾರೆ. ಅಲ್ಲದೇ, ಇವರ ಕಾರ್ಯಕ್ಕೆ ಸಾಕಷ್ಟು ಮೆಚ್ಚುಗೆಯೂ ವ್ಯಕ್ತವಾಗಿದ್ದು, ಇವರ ಕಾರಿನ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್‍ ಆಗಿದೆ.

LEAVE A REPLY

Please enter your comment!
Please enter your name here