ಮೊಬೈಲ್ ನಲ್ಲಿ ಮಾತನಾಡ್ತಾ ಮಗುವನ್ನೇ ಮರೆತ ಮಹಿಳೆ…!

0
346

ಜನರು ಮೊಬೈಲ್ ನಲ್ಲಿ ಎಷ್ಟು ಬ್ಯುಸಿಯಿರ್ತಾರೆಂದ್ರೆ ಏನೂ ಮಾಡ್ತಿದ್ದೇವೆ ಎಂಬುದನ್ನೇ ಮರೆತುಬಿಡ್ತಾರೆ. ಮೊಬೈಲ್ ನಲ್ಲಿ ಮಾತನಾಡ್ತಾ ಬ್ಯಾಗ್, ವಸ್ತುಗಳನ್ನು ಮೆಟ್ರೋ, ಬಸ್ ನಲ್ಲಿ ಬಿಟ್ಟು ಹೋಗುವವರನ್ನು ನಾವು ನೋಡಿದ್ದೇವೆ. ಆದ್ರೆ ಒಬ್ಬ ತಾಯಿ, ಎಷ್ಟು ಮೊಬೈಲ್ ನಲ್ಲಿ ಬ್ಯುಸಿಯಿದ್ರೂ ಮಗುವನ್ನು ಮರೆಯಲು ಹೇಗೆ ಸಾಧ್ಯ? ಆದ್ರೆ ಇಂಥ ಘಟನೆ ನಡೆದಿದೆ.

ಮೊಬೈಲ್ ನಲ್ಲಿ ಮಾತನಾಡ್ತಿದ್ದ ಮಹಿಳೆ ಮಗುವನ್ನು ಆಟೋದಲ್ಲಿ ಬಿಟ್ಟು ತಾನು ಮಾತ್ರ ಕೆಳಗಿಳಿದಿದ್ದಾಳೆ. ಮಾತನಾಡೋದ್ರಲ್ಲಿ ವ್ಯಸ್ತವಾಗಿದ್ದ ಮಹಿಳೆ ಮಗುವನ್ನು ಸಂಪೂರ್ಣವಾಗಿ ಮರೆತುಬಿಟ್ಟಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಹಿಳೆ ಫೋನ್ ನಲ್ಲಿ ಮಾತನಾಡ್ತಾ ಮುಂದೆ ಹೋಗ್ತಿದ್ದಾಳೆ. ಆಕೆ ಹಿಂದೆ ಮಗುವನ್ನೆತ್ತಿಕೊಂಡು ಬರುವ ವ್ಯಕ್ತಿ ಕೂಗ್ತಿದ್ದಾನೆ. ನಂತ್ರ ಮಹಿಳೆ ಹತ್ತಿರ ಬರುವ ವ್ಯಕ್ತಿ, ಈ ಮಗು ನಿಮ್ಮದಾ ಎಂದು ಪ್ರಶ್ನೆ ಮಾಡ್ತಾನೆ. ಇದಕ್ಕೆ ಯಸ್ ಎನ್ನುವ ಮಹಿಳೆ ಮಗುವನ್ನು ಎತ್ತಿಕೊಳ್ತಾಳೆ. ಈ ವಿಡಿಯೋ ವೈರಲ್ ಆಗ್ತಿದ್ದಂತೆ ಜನರು ತಮ್ಮ ಪ್ರತಿಕ್ರಿಯೆ ನೀಡಲು ಶುರು ಮಾಡಿದ್ದಾರೆ.

LEAVE A REPLY

Please enter your comment!
Please enter your name here