ಒಂದೇ ಹಾಡಿಗೆ ಎರಡು ಶೋಗಳಲ್ಲಿ ವಿಜೇತರಾದ ಸ್ಪರ್ಧಿಗಳು !

0
278

ಕನ್ನಡ ಕೋಗಿಲೆ ಸೀಸನ್ ೨,ಕಲರ್ಸ್ ಸೂಪರ್ ವಾಹಿನಿಯ ಜನಪ್ರಿಯ ಸಂಗೀತ ಕಾರ್ಯಕ್ರಮ.. ಇನ್ನು ಈ ಕಾರ್ಯಕ್ರಮಕ್ಕೆ ತೀರ್ಪುಗಾರರಾಗಿ ಕನ್ನಡ ರಾಪರ್ ಚಂದನ್ ಶೆಟ್ಟಿ, ಕಾಮಿಡಿ ಕಿಂಗ್ ಸಾಧು ಕೋಕಿಲಾ ಮತ್ತು ಗಾನ ಕೋಗಿಲೆ ಅರ್ಚನಾ ಉಡುಪ ನೇತೃತ್ವದಲ್ಲಿ ಈ ಕಾರ್ಯಕ್ರಮ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿತ್ತು ..! ಕಳೆದ ಸೀಸನ್ ನಲ್ಲಿ, ಕಾರ್ಯಕ್ರಮದ ನಿರೂಪಕಿಯಾಗಿ ಬಿಗ್ ಬಾಸ್ ಮತ್ತು ಅಕ್ಕ ಧಾರಾವಾಹಿ ಖ್ಯಾತಿಯ ಅನುಪಮಾ ಕಾಣಿಸಿಕೊಂಡಿದ್ದರೆ, ಈ ಬಾರಿ ಆರ್ಜೆ.ಸಿರಿ ನೇತೃತ್ವದಲ್ಲಿ ಕಾರ್ಯಕ್ರಮ ಮುಂದುವರೆದಿತ್ತು.

ಪ್ರೇಕ್ಷಕರ ನಿರೀಕ್ಷೆಯಂತೆ ಈ ಬಾರಿ ಗ್ರ್ಯಾಂಡ್ ಫಿನಾಲೆ ನಲ್ಲಿ ಕನ್ನಡ ಕೋಗಿಲೆ ಸೀಸನ್ ೨ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದು ಕಾಸೀಮ್ ಅಲಿ. ಒಂದೊಂದು ಸಂಚಿಕೆಯಲ್ಲೂ ತನ್ನ ವಿಭಿನ್ನ ಶೈಲಿಯ ಕಂಠದಿಂದ ಸುಮಧುರವಾಗಿ ಹಾಡುತ್ತಿದ್ದ ಕಾಸೀಮ್ ಈ ಬಾರಿ ವಿಜೇತರಾಗಿದ್ದಾರೆ. !
ವಿಶೇಷವೇನೆಂದರೆ ಕಾಸೀಮ್ ಅವರು ಫೈನಲ್ ನಲ್ಲಿ ಹಾಡಿದ ಹಾಡು `ಶ್ರೀ ಮಂಜುನಾಥ’ ಸಿನಿಮಾದ ಭಕ್ತಿ ಪೂರ್ವಕವಾದ ಹಾಡು ‘ಮಹಾಪ್ರಾಣ ದೀಪಂ’..
ಕಾಸೀಮ್ ಅವರು ಈ ಹಾಡನ್ನು ಹಾಡುತ್ತಿದ್ದಂತೆಯೇ ಎಲ್ಲರೂ ಭಕ್ತಿ ಪೂರ್ವಕವಾಗಿ ಕೇಳುತ್ತಿದ್ದರು.. ಹಾಗೆಯೇ ಎದ್ದು ನಿಂತು ಚಪ್ಪಾಳೆ ಬಡಿಯುತ್ತ ಒನ್ಸ್ ಮೋರ್, ಒನ್ಸ್ ಮೋರ್ ಎಂದು ಕಿರುಚಿ ಮತ್ತೊಮ್ಮೆ ಹಾಡಿಸಿದರು !

ಇದರ ಬೆನ್ನಲ್ಲೇ ಜೀ ವಾಹಿನಿಯಲ್ಲಿ ಪ್ರಸಾರವಾಗುವ, ನಂಬರ್ ಒನ್ TRP ಹೊಂದಿರುವ ಸರಿಗಮಪ ಸೀಸನ್ 16ರ ಗ್ರ್ಯಾಂಡ್ ಫಿನಾಲೆ ಇದೆ ಬಾನುವಾರ ನಡೆದಿತ್ತು…
ಸಂಗೀತ ಬ್ರಹ್ಮ ಹಂಸಲೇಖ ಅವರ ನೇತೃತ್ವದಲ್ಲಿ ವಿಜಯ್ ಪ್ರಕಾಶ್ , ಅರ್ಜುನ್ ಜನ್ಯ, ರಾಜೇಶ್ ಕೃಷ್ಣನ್ ಅವರು ತೀರ್ಪುಗಾರರಾಗಿದ್ದು, ಈ ಸೀಸನ್ ಕೂಡ ಸೂಪರ್ ಹಿಟ್ ಆಗಿತ್ತು.. ಶನಿವಾರ ,ಭಾನುವಾರ ಬಂದರೆ ಸಾಕು ಸರಿಗಮಪ ಕಾರ್ಯಕ್ರಮಕ್ಕಾಗಿ ಪ್ರೇಕ್ಷಕರು ಕಾದು ಕುಳಿತಿರುತ್ತಿದ್ದರು ! ಇನ್ನು ಈ ಕಾರ್ಯಕ್ರಮದ ಹೈಲೈಟ್ ಎಂದರೆ ಅನುಶ್ರೀ ಅವರ ನಿರೂಪಣೆ ಅಂತಾನೇ ಹೇಳಬಹುದು .. ಕಳೆದ ಹದಿನಾರು ಸೀಸನ್ನಿಂದಲೂ ಸರಿಗಮಪ ಕಾರ್ಯಕ್ರಮವನ್ನು ಅನುಶ್ರೀ ಅವರು ಬಹಳ ಅಚ್ಚುಕಟ್ಟಾಗಿ,ತಮ್ಮದೇ ಕಾಮಿಡಿಯ ಮೂಲಕ ಪ್ರೇಕ್ಷಕರ ಮನಸ್ಸು ಮತ್ತು ಕಾರ್ಯಕ್ರಮವನ್ನು ಗೆಲ್ಲಿಸಿದ್ದಾರೆ ..
ಇನ್ನು ಈ ಸೀಸನ್ ನ ವಿನ್ನರ್ ‘ಓಂಕಾರ್ ‘.ಗ್ರ್ಯಾಂಡ್ ಫಿನಾಲೆಯಲ್ಲಿ ಓಂಕಾರ್ ರವರು ಹಾಡಿದ ಹಾಡು ಮಂಜುನಾಥ ಚಿತ್ರದ ‘ಮಹಾಪ್ರಾಣ ದೀಪಂ’..
ಕನ್ನಡ ಕೋಗಿಲೆ ಯಲ್ಲಿ ನಡೆದಂತ ಜಾದುವೇ ಈ ಸರಿಗಮಪದಲ್ಲಿ ನಡೆಯಿತು..

ಓಂಕಾರ್ ಮಹಾಪ್ರಾಣ ದೀಪಂ ಹಾಡನ್ನು ಹಾಡುತ್ತಿದ್ದಂತೆಯೇ ಪ್ರೇಕ್ಷ ಕರು ಮತ್ತು ತೀರ್ಪುಗಾರರೆಲ್ಲ ಎದ್ದು ನಿಂತು ಚಪ್ಪಾಳೆ ಹೊಡೆಯುವ ಮೂಲಕ ಒನ್ಸ್ ಮೋರ್ ಎಂದು ಕಿರುಚಿದರು.. ಪ್ರೇಕ್ಷಕರ ಒತ್ತಾಯದಂತೆ ಓಂಕಾರ್ ಮತ್ತೊಮ್ಮೆ ಹಾಡು ಹಾಡಿದರು ಹಾಗೆಯೆ ಗ್ರಾಂಡ್ ಫಿನಾಲೆಯ ಗ್ರ್ಯಾಂಡ್ ವಿನ್ನರ್ ಆಗಿ ಹೊರ ಹೊಮ್ಮಿದರು …

ಒಟ್ಟಾರೆ ಈ ‘ಮಹಾಪ್ರಾಣ ದೀಪಂ’ ಹಾಡು ಹಾಡಿದ ಬೇರೆ ಬೇರೆ ವಾಹಿನಿಯ ಬೇರೆ ಬೇರೆ ಸ್ಪರ್ಧಿಗಳು ಗೆಲುವಿನ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.. ಇದು ಕಾಕತಾಳಿಯೋ, ಅಥವಾ ಸ್ಕ್ರಿಪ್ಟೆಡ್ ಇರಬಹುದು ಎಂಬುವ ಗೊಂದಲ ಪ್ರೇಕ್ಷಕರಲ್ಲಿ ಕಾಡುತ್ತಿದೆ ಎನ್ನಬಹುದು.

LEAVE A REPLY

Please enter your comment!
Please enter your name here