ನದಿ ನೀರಿನಂತೆ ಉಕ್ಕಿ ಹರಿದ ದುಬಾರಿ ವೈನ್, ವಿಡಿಯೋ ವೈರಲ್

0
210

ಲಾಕ್ ಡೌನ್ ಸಮಯದಲ್ಲಿ ಮದ್ಯ ಸಿಗಲಿಲ್ಲ ಎಂದು ಭಾರತದಲ್ಲಿ ಕೆಲವು ರಾಜ್ಯಗಳಲ್ಲಿ ಜನರು ಆತತ್ಮಹತ್ಯೆಗೆ ಶರಣಾಗಿದ್ದರು. ಆ ನಂತರ ಲಾಕ್ ಡೌನ್ ಸಡಿಲಿಕೆಗೊಂಡ ಮೇಲೆ ಮದ್ಯ ಕೊಳ್ಳಲು ಸಾಲಾಗಿ ಗಂಡು ಮಕ್ಕಳ ಜೊತೆ ಹೆಣ್ಣು ಮಕ್ಕಳು ಬೇಧವಿಲ್ಲದೆ ಕ್ಯೂ ನಿಂತುಕೊಂಡಿದ್ದರು. ಮದ್ಯ ಕೈಗೆ ಸಿಕ್ಕಿದ್ದೆ ತಡ ಕೊರೊನಾ ರೋಗದ ಮೇಲೆ ಸ್ವಲ್ಪವೂ ಭಯವಿಲ್ಲದೆ ಕಂಡಕಂಡಲ್ಲಿ ಜನರು ಕುಡಿದು ತೂರಾಡಿದ್ದು ಇವೆಲ್ಲವೂ ನಿಮಗೂ ನೆನಪಿರಬಹುದು. ಅದು ಸರಿ, ಈ ವಿಷಯದ ಬಗ್ಗೆ ಈಗ್ಯಾಕೆ ಪ್ರಸ್ತಾಪ ಎಂದು ನಿಮಗನಿಸಬಹುದು. ಆದರೆ ಅದಕ್ಕೆ ಕಾರಣವಿದೆ. ಜನ ತಿಂಗಳುಗಟ್ಟಲೇ ಮದ್ಯ ಸಿಗದಿದ್ದಕ್ಕೆ ಹೀಗಾಗಿದ್ದರು, ಇನ್ನು ಸಾವಿರಾರು ಲೀಟರ್ ದುಬಾರಿ ವೈನ್ ರಸ್ತೆಯಲ್ಲಿ ನದಿ ನೀರಿನಂತೆ ಹರಿದು ಹೋಯಿತೆಂದರೆ ಏನಾಗಬೇಡ ಅಲ್ಲವೇ.

ಹೌದು, ನಿಮಗೆ ಇದನ್ನು ಕೇಳು ಆಶ್ಚರ್ಯವಾಗುತ್ತಿರಬಹುದು. ಆದರೆ ಇದು ನಿಜ. ವೈನ್ ರಸ್ತೆಯಲ್ಲಿ ಹರಿಯುತ್ತಿರುವ ದೃಶ್ಯವನ್ನು ನೀವು ನೋಡಿದ್ದರೆ ಇದೇನಿದು ಕೆಂಪು ನದಿ ಸೃಷ್ಟಿಯಾಗಿದೆ ಎಂದು ಭಾವಿಸುತ್ತಿದ್ದಿರಿ. ಅಂದಹಾಗೆ ಇಂತಹ ಒಂದು ಕೆಂಪು ನದಿ ಹರಿದಿದ್ದು  ಸ್ಪೇನ್‌ನ ಬೀದಿಗಳಲ್ಲಿ ಕಂಡುಬಂತು. ಕಳೆದ ತಿಂಗಳು ಇದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗಿತ್ತು. ಜೊತೆಗೆ ಕೆಂಪು ವೈನ್‌’ನ ಕಾರಂಜಿ ವಿಡಿಯೋದಲ್ಲಿ ಸ್ಪಷ್ಟವಾಗಿ ಗೋಚರವಾಗುತ್ತಿತ್ತು. ಈ  ವಿಡಿಯೋ ತುಣುಕನ್ನು ಸೆ.26ರಂದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿತ್ತು. ರಸ್ತೆಯ ಮೇಲೆ ಇಂತಹ ದುಬಾರಿ ವೈನ್ ಹರಿದದ್ದು ಹೇಗೆ ಎಂದು ಹಲವರು ಸಿಕ್ಕಾ ಪಟ್ಟೆ ಬೇಸರ ವ್ಯಕ್ತಪಡಿಸಿದರು.

ಘಟನೆಯ ವಿವರ

ಈ ವಿಡಿಯೋ ತುಣುಕಿನಲ್ಲಿ ತೋರಿಸಿರುವ ಪ್ರಕಾರ  ಸ್ಪ್ಯಾನಿಷ್ ವೈನ್ ಕಾರ್ಖಾನೆಯ ಕಂಟೇನರ್ ಸ್ಫೋಟಗೊಂಡು 50,000 ಲೀಟರ್ ಕೆಂಪು ವೈನ್ ನೀರಿನಂತೆ ರಸ್ತೆಯ ಮೇಲೆ ಹರಿಯಿತು. ಜೊತೆಗೆ ಕಂಟೇನರ್‌ನಿಂದ ಕೆಂಪು ವೈನ್‌  ಕಾರಂಜಿಯಂತೆ ಉಕ್ಕಿತು. ಇದು ಇಡೀ ಪ್ರದೇಶವನ್ನು ಕ್ಷಣಾರ್ಧದಲ್ಲಿ ಕೆಂಪು ಬಣ್ಣಕ್ಕೆ ತಿರುಗಿಸಿತು.

ವಿಡಿಯೋದಲ್ಲಿ ವೈನ್ ಕಾರ್ಖಾನೆಯ ಸಿಬ್ಬಂದಿಗಳು ಈ ದೃಶ್ಯವನ್ನು ನೋಡುತ್ತಿರುವುದು ಕಂಡುಬರುತ್ತದೆ. ಹಾಗೆಯೇ ಸಾವಿರಾರು ಲೀಟರ್ ವೈನ್ ಕ್ರಮೇಣ ಹತ್ತಿರದ ಹೊಲಕ್ಕೆ ಹರಿದು ಹೋಗುತ್ತದೆ. ಬೆಡೋಗಾಸ್ ವಿಟಿವಿನೋಸ್  ಎಂಬ ಈ ಕಾರ್ಖಾನೆಯನ್ನು 1969 ರಲ್ಲಿ ಸ್ಥಾಪಿಸಲಾಯಿತು. ಇಲ್ಲಿ 60 ಲಕ್ಷ ಕೆಜಿ ದ್ರಾಕ್ಷಿಯನ್ನು ಉತ್ಪಾದಿಸಲಾಗುತ್ತದೆ. ರಸ್ತೆಯಲ್ಲಿ ಹರಿಯುವ ಕೆಂಪು ಮದ್ಯವನ್ನು ನೋಡಿದ ಜನರು  ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಮೀಮ್ ಗಳನ್ನು ಹಂಚಿಕೊಂಡಿದ್ದಾರೆ.  ಈ ವಿಡಿಯೋ ಸಾಕಷ್ಟು ವೈರಲ್ ಆಗಿದ್ದು ಸಾಕಷ್ಟು ಕಮೆಂಟ್ಸ್ ಪಡೆದಿರುವುದನ್ನು ನಾವು ಈ ಟ್ವಿಟರ್ ಪೇಜ್’ನಲ್ಲಿ ನೋಡಬಹುದು.

LEAVE A REPLY

Please enter your comment!
Please enter your name here