ಪಿಜ್ಜಾ ತಿನ್ತೀರಾ. ಹಾಗಾದ್ರೆ ನಿಮಗೆ ಈ ವಿಚಾರ ತಿಳಿದಿರಲೇಬೇಕು

0
100

ಸದ್ಯ ನಮ್ಮ ದೇಶಕ್ಕೆ ಕಾಲಿಟ್ಟು ಯುಜನತೆಯನ್ನು ಮರಳು ಮಾಡಿದ ತಿಂಡಿ ಪಿಜ್ಜಾ. ಭಾರತೀಯ ತಿಂಡಿಗಳ ಮೇಲೆ ಸವಾರಿ ಮಾಡುತ್ತಾ ತನ್ನ ಚಾಪನ್ನು ಒತ್ತಿರುವುದು ಪಿಜ್ಜಾ. ಪಿಜ್ಜಾ ತಿಂದೆ ಎನ್ನುವುದೇ ಇಂದಿನ ಯುವ ಜನತೆಗೆ ಹೆಮ್ಮೆಯ ವಿಷಯ.

 

ಈ ಹೆಸರುವಾಸಿ ‘ಪಿಜ್ಜಾ’ ಹುಟ್ಟಿದ್ದು ಇಟಲಿಯ ಗೀಟಾ ನಗರದಲ್ಲಿ, ಪಿಜ್ಜಾದ ಹುಟ್ಟಿನ ಪ್ರಮುಖ ಕಾರಣ ಬಹಳ ಜನಕ್ಕೆ ಊಹಿಸುವುದೂ ಅಸಾದ್ಯ. ಮೂಲಭೂತವಾಗಿ ಇದು ಹುಟ್ಟಿದ್ದು ಬಡಜನರ ಊಟವಾಗಿ. ಬೀದಿ ಬದಿಯ ಗೂಡಂಗಡಿಗಳಿಂದ ಪ್ರಾರಂಭವಾದ ಪಿಜ್ಜಾ ಮಾರಾಟ ಇಂದು ಹವಾನಿಯಂತ್ರಿತ ಮಳಿಗೆಯವರೆಗೆ ಹಾಗೂ ಮನೆ ಮನೆಗೆ ನಿಗದಿತ ಸಮಯದಲ್ಲಿ ಸರಬರಾಜು ಆಗುತ್ತಿದೆ.

 

 

ಪಿಜ್ಜಾ ತಯಾರಿಕೆ ಬಹಳ ಸುಲಬ. ಎರಡು, ಇದರ ತಯಾರಿಕೆಯಲ್ಲಿ ಕ್ರಸ್ಟ್ ಗಳನ್ನಾಗಲಿ, ಟಾಪಿಂಗ್ಸ್ ಗಳನ್ನಾಗಲಿ, ಚೀಸ್ಗಳನ್ನಾಗಲಿ, ಮತ್ತು ಸಾಸ್ಗಳನ್ನಾಗಲಿ ಉಪಯೋಗಿಸಲಾಗುತ್ತದೆ. . ಯುವಜನತೆಯ ಆಸೆ, ಆಕಾಂಕ್ಶೆ, ರುಚಿ, ವೈವಿದ್ಯತೆಗಳ ಅವಶ್ಯಕತೆಗೆ ತಕ್ಕಂತೆ ಮಾರ್ಪಾಟು ಮಾಡಿ ಬಗೆ ಬಗೆಯ ಪಿಜ್ಜಾ ತಯಾರು ಮಾಡಬಹುದು. ಪಿಜ್ಜಾಗಳ ಟಾಪಿಂಗ್ ವೈವಿದ್ಯಮಯವಾಗಿದ್ದು ಆಯಾ ದೇಶದ ಪ್ರದೇಶದ ಭಾಗವಾಗಿದೆ.

 

 

ಪಿಜ್ಜಾದ ಖ್ಯಾತಿ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದವರೆಗೂ ಪಸರಿಸಿತ್ತು ಎಂದರೆ ಅದನ್ನು ಬಯಸುವವರು ಎಲ್ಲೆಲ್ಲಿದ್ದಾರೆ ಎಂದು ಕಲ್ಪಿಸಿಕೊಳ್ಳಲೂ ಅಸಾದ್ಯ. 1889ರಲ್ಲಿ ನೇಪಲ್ಸ್ ನ ಅತ್ಯಂತ ಪ್ರಕ್ಯಾತ ಪಿಜ್ಜಾ ಬಾಣಸಿಗ ರಪೇಲೆ ಎಸ್ಪೊಸಿಟೋ ತಯಾರಿಸಿದ ಪಿಜ್ಜಾವನ್ನು ಪಡೆದಿದ್ದರು. ಇಟಲಿಯ ರೆನಾಟೊ ವಿಯೋಲಾ ಸ್ರುಶ್ಟಿಯ ಲೂಯಿಸ್ ಗಿIII ಪಿಜ್ಜಾ ವಿಶ್ವದಲ್ಲೇ ಅತಿ ದುಬಾರಿ ಪಿಜ್ಜಾ ಎಂದು ದಾಖಲೆ . ಇದರ ಬೆಲೆ ಬರೋಬ್ಬರಿ 12,000 ಡಾಲರ್. 1261.65 ಚದರ ಮೀಟರ್ ಅಗಲದ ಪಿಜ್ಜಾ ಅತ್ಯಂತ ವಿಸ್ತಾರವಾದ ಪಿಜ್ಜಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

 

 

ಅತಿ ದುಬಾರಿ ಮತ್ತು ಅತಿ ವಿಸ್ತಾರವಾದ ಪಿಜ್ಜಾಗಳನ್ನು ದಾಖಲಾತಿಗಾಗಿ ಮಾತ್ರ ತಯಾರಿಸಿದರೆ ವಾಣಿಜ್ಯವಾಗಿ ಸಾರ್ವಜನಿಕಗೆ ಲಭ್ಯವಿರುವ ಅತಿ ದೊಡ್ಡ ಪಿಜ್ಜಾದ ಅಳತೆ 1.37 ಚದರ ಮೀಟರ್. ಕ್ಯಾಲಿಫೋರ್ನಿಯಾದ ಬಿಗ್ ಮಾಮಾ’ಸ್ ಮತ್ತು ಪಾಪಾ’ಸ್ ಪಿಜ್ಜೇರಿಯಾ ತಯಾರಿಕೆಯ ಇದು 50 ರಿಂದ 100 ಜನರಿಗೆ ಹಂಚಬಹುದಾದಷ್ಟು ದೊಡ್ಡದಾಗಿತ್ತಂತೆ.

LEAVE A REPLY

Please enter your comment!
Please enter your name here