ಟಿಪ್ಪು ಇತಿಹಾಸ ಪಠ್ಯ ಪುಸ್ತಕದಲ್ಲಿ ಇರಲಿದೆಯಾ.?

0
138

ಟಿಪ್ಪು ಸುಲ್ತಾನ್ ಇತಿಹಾಸದ ಪುಟವನ್ನು ವಿದ್ಯಾರ್ಥಿಗಳ ಪಠ್ಯಪುಸ್ತಕದಲ್ಲಿ ಅಳವಡಿಸಲು ಚಿಂತನೆ ನಡೆಸುತ್ತಿರುವ ರಾಜಕಾರಣಿಗಳು ತಮ್ಮ ಹಠವನ್ನು ಮಂಡಿಸುವಲ್ಲಿ ಜಟಾಪಟಿಗೆ ನಿಂತಿದ್ದಾರೆ. ಹೌದು, ರಾಜ್ಯ ರಾಜಕೀಯದಲ್ಲಿ ಈ ವಿಚಾರವಾಗಿ ದೊಡ್ಡ ಗೊಂದಲ ಸೃಷ್ಟಿಯಾಗಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಟಿಪ್ಪು ಸುಲ್ತಾನ್ ಸಂಬಂಧಿತವಾಗಿ ಜಟಾಪಟಿಯೇ ಸಂಭವಿಸುತ್ತಿದೆ.

 

 

ಇತ್ತ ಬಿ.ಎಸ್ ಯಡಿಯೂರಪ್ಪ ಅವರು ಟಿಪ್ಪು ಸುಲ್ತಾನ್ ವಿಷಯವನ್ನು ಪಠ್ಯಪುಸ್ತಕದಿಂದ ತೆಗೆದು ಹಾಕಲಾಗುತ್ತದೆ ಎಂದು ತಿಳಿಸಿದರೆ, ಅತ್ತ ಶಿಕ್ಷಣ ತಜ್ಞರು ಮತ್ತು ಇತಿಹಾಸವನ್ನು ಅರಿತುಕೊಂಡಿರುವ ವಿಶೇಷ ಸಮಿತಿಯೊಂದು ಟಿಪ್ಪು ಸುಲ್ತಾನ್ ವಿಷಯವನ್ನು ಪಠ್ಯ ಪುಸ್ತಕದಲ್ಲಿ ಮುಂದುವರಿಸಬೇಕು, ಯಾವುದೇ ಕಾರಣಕ್ಕೂ ತೆಗೆಯುವ ಮಾತಿಲ್ಲ ಎಂದು ಹೇಳಿಕೆ ನೀಡಿದೆ.

 

 

ಸದ್ಯ ಪ್ರಾಥಮಿಕ ಶಾಲೆಯ ಆರನೇ, ಏಳನೇ ಮತ್ತು ಹತ್ತನೇ ತರಗತಿಯ ಮಕ್ಕಳ ಭಾಷಾ ಪಠ್ಯ ಪುಸ್ತಕದಲ್ಲಿ ಹದಿನೆಂಟನೇ ಶತಮಾನದ ಮೈಸೂರಿನ ಹುಲಿ ಟಿಪ್ಪು ಸುಲ್ತಾನ್ ವಿಷಯವನ್ನು ಮುಂದುವರಿಸಬೇಕು ಎಂದು ತಿಳಿಸಿದೆ. ಟಿಪ್ಪು ಸುಲ್ತಾನ್ ಆಳ್ವಿಕೆಯಿಂದ ಮೈಸೂರಿನ ಇತಿಹಾಸ ಪುಟ ಮತ್ತಷ್ಟು ರಚನೆಯಾಗಿದ್ದು, ಇತಿಹಾಸದಲ್ಲಿ ಟಿಪ್ಪುವಿನ ವಿಷಯ ಇರಬೇಕು ಎಂಬುದನ್ನು ಸರ್ಕಾರಕ್ಕೆ ವಿಶೇಷ ಸಮಿತಿ ತಮ್ಮ ವಾದವನ್ನು ಮುಟ್ಟಿಸಿದೆ.

 

 

ಬಿ.ಎಸ್ ಯಡಿಯೂರಪ್ಪನವರ ಹೇಳಿಕೆಯ ವಿರುದ್ಧ ನಿಂತಿರುವ ವಿಶೇಷ ಸಮಿತಿಯ ಹೇಳಿಕೆ ಸದ್ಯ ರಾಜ್ಯ ರಾಜಕೀಯದಲ್ಲಿ ದೊಡ್ಡ ಚರ್ಚೆಯನ್ನು ರೂಪಿಸಿದ ಜತೆಗೆ ರಾಜ್ಯ ಸರ್ಕಾರದ, ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಇಲಾಖೆಗೆ ವರದಿ ಸಲ್ಲಿಸಲಾಗಿದ್ದು, ರಾಜ್ಯ ಸರ್ಕಾರದ ನ್ಯಾಯಾಲಯದಲ್ಲಿ ಉಳಿದುಕೊಂಡಿದೆ. ಪಠ್ಯಪುಸ್ತಕದಿಂದ ಟಿಪ್ಪು ಸುಲ್ತಾನ್ ಅವರ ಇತಿಹಾಸವನ್ನು ಅಳಿಸಿ ಹಾಕಬೇಕು ಎಂದು ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು.

LEAVE A REPLY

Please enter your comment!
Please enter your name here