ಕಾಮಿಡಿ ಕಿಲಾಡಿ ಶೋನಲ್ಲಿ ಬರಲಿದ್ದಾರಾ ಚಾಲೆಂಜಿಂಗ್ ಸ್ಟಾರ್ ದರ್ಶನ್.!

0
183

ಚಂದನವನದ ಬಾಕ್ಸ್ ಆಫೀಸ್ ನ ಬಾದ್ ಶಾ ಎಂದೇ ಹೆಸರುಪಡೆದ ನಟ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ . ಈಗಾಗಲೇ ರಾಬರ್ಟ್ ಮೂವಿಯಲ್ಲಿ ಬ್ಯುಸಿಯಾದ ದರ್ಶನ್ ಹಲವು ಇತರೆ ಕಾರ್ಯಕ್ರಮಗಳನ್ನು ಭಾಗವಹಿಸುತ್ತಿದ್ದಾರೆ. ಕಿರುತರೆ ಶೋ ಒಂದರಲ್ಲಿ ಕಾಣಿಸಿಕೊಳ್ಳುತ್ತಾರಾ ಎಂಬ ಹೆಸರಿನ ಬೆನ್ನಲ್ಲೇ ದರ್ಶನ್ ಜೊತೆ ಕಾಮಿಡಿ ಕಿಲಾಡಿಗಳ ತಂಡ ಕಾಣಿಸಿದೆ.

 

ಹೌದು, ಕಿರುತೆರೆಯ ಖ್ಯಾತ ರಿಯಾಲಿಟಿ ಶೋಗಳಲ್ಲಿ ಒಂದಾಗಿರುವ ಕಾಮಿಡಿ ಕಿಲಾಡಿಗಳು ಸೆಟ್ ಗೆ ನಟ ದರ್ಶನ್ ಭೇಟಿ ನೀಡಿ ಅಚ್ಚರಿಗೊಳಿಸಿದ್ದಾರೆ. ದರ್ಶನ್ ಕಿರಿತೆರೆಯ ಪ್ರಸಾರವಾಗಿರುವ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಳ್ಳುವುದು ತುಂಬಾನೇ ಕಡಿಮೆ. ಈಗಾಗಲೇ ಭಾಗಿಯಾಗದ ದರ್ಶನ್ ಕಾಮಿಡಿ ಕಿಲಾಡಿಗಳು ಸೆಟ್ ನಲ್ಲಿ ಕಾಣಿಸಿಕೊಂಡಿರುವುದು ಅಚ್ಚರಿ ಮೂಡಿಸಿದೆ. ದರ್ಶನ್ ಭೇಟಿ ನೀಡಿರುವ ಫೋಟೋ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ.

 

ಇನ್ನು ನಟ ದರ್ಶನ್ ಭೇಟಿ ನೀಡಿದ್ದು ಕಾರ್ಯಕ್ರಮದಲ್ಲಿ ಭಾಗವಹಿಸೋಕಾ ಅಂದು ಕೊಂಡ್ರಾ ಇಲ್ಲ. ಯಾಕಂದ್ರೆ ದರ್ಶನ್ ಸೆಟ್ ನಲ್ಲಿ ಕಾಣಿಸಿಕೊಂಡಿದ್ದು ಅಷ್ಟೆ. ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿಲ್ಲ. ದರ್ಶನ್ ಕಾರ್ಯಕ್ರಮಕ್ಕೆ ಬರಲಿ ಎನ್ನುವುದು ಅಭಿಮಾನಿಗಳ ಆಸೆ. ಕಾಮಿಡಿ ಕಿಲಾಡಿಗಳು-3 ಚಿತ್ರೀಕರಣ ನಡೆಯುವ ಸ್ಥಳದ ಸಮೀಪದಲ್ಲೆ ದರ್ಶನ್ ರಾಬರ್ಟ್ ಚಿತ್ರದ ಕೆಲಸ ಕೂಡ ನಡೆಯುತ್ತಿರಬಹುದು. ಹಾಗಾಗಿ ದಿಢೀರ್ ಭೇಟಿ ನೀಡಿದ್ದಾರೆ ಎಂದು ಅಂದಾಜಿಸಲಾಗಿದೆ.

 

ಏಕಾಏಕಿ ಡಿ ಬಾಸ್ ಭೇಟಿಯಿಂದ ಚಿತ್ರೀಕರಣದಲ್ಲಿದ್ದ ನಟ ಜಗ್ಗೇಶ್ ಮತ್ತ ನಟಿ ರಕ್ಷಿತಾ ಹಾಗೂ ರಾಘವೇಂದ್ರ ಹುಣಸೂರು ಸಂತಸಪಟ್ಟಿದ್ದಲ್ಲದೆ ಅಚ್ಚರಿಗೊಂಡಿದ್ದಾರೆ. ಅಲ್ಲದೆ ಜಗ್ಗೇಶ್ ಸೆಟ್ ಗೆ ಭೇಟಿ ನೀಡಿದ ವಿಶೇಷ ಅತಿಥಿ ದರ್ಶನ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

LEAVE A REPLY

Please enter your comment!
Please enter your name here