ಈ ಸುದ್ಧಿಯ ಮುನ್ಸೂಚನೆ ಭೂಮಿ ಶಟ್ಟಿ ಹೊರಗೆ ಹೋಗಲಿದ್ದಾರೆಂದೇ?

0
386

ಬಿಗ್‍ಬಾಸ್ ಮನೆಯಲ್ಲಿ ದಿನದಿಂದ ದಿನಕ್ಕೆ ಕುತೂಹಲಕಾರಿ ಘಟನೆಗಳು ನಡೆಯುತ್ತಿದ್ದು, ಪ್ರೇಕ್ಷರಿಗೆ ಸಿಕ್ಕಾಪಟ್ಟೆ ಎಂಟರ್‍ಟೈಮೆಂಟ್ ನೀಡುತ್ತಿದ್ದಾರೆ. ಈಗಾಗಲೇ ಎರಡು ತಿಂಗಳುಗಳ ಕಾಲವನ್ನು ಕಳೆದಿರುವ ಸ್ಪರ್ದಿಗಳು ಪ್ರೇಕ್ಷಕರ ಮನೆಮಾತಾಗಿದ್ದಾರೆ. ಈ ವಾರದ ಲಕ್ಸುರಿ ಬಜೆಟ್‍ಗಾಗಿ ಬಿಗ್ ಬಾಸ್ ರಾಕ್ಷಸ ಮತ್ತು ಗಂಧರ್ವ ಟಾಸ್ಕ್ ನೀಡಿದ್ದರು, ಟಾಸ್ಕ್ ವಿಚಾರವಾಗಿ ಸ್ಪರ್ದಿಗಳ ಮಧ್ಯೆ ವೈಮನಸ್ಸು ಹೆಚ್ಚಾಗಿಯೇ ಇತ್ತು. ಅಲ್ಲದೇ ಈ ವಾರ ಬಿಗ್‍ಬಾಸ್ ಮನೆ ಜಗಳವಿಂದಲೆ ಕೂಡಿತ್ತು. (ಚಿತ್ರ ಕೃಪೆ: ಕಲರ್ಸ್ ಕನ್ನಡ/ವೂಟ್ )

 

 

ಕೆಲವು ದಿನಗಳ ಹಿಂದೆ ಭೂಮಿ ಶೆಟ್ಟಿ, ತನ್ನ ಮಾವ ಅಂದರೆ ತುಂಬಾ ಇಷ್ಟ, ಆದರೆ ಕೆಲವೊಂದು ವಿಷಯಗಳಿಂದ ಅವರ ಜೊತೆ ಮಾತನಾಡುತ್ತಿಲ್ಲ, ಚಿಕ್ಕ ವಯ್ಯಸಿಂದಲೂ ನನಗೊಸ್ಕರ ಏನೆಲ್ಲಾ ಮಾಡಿದ್ದಾರೆ ಅವರು ನೆನಪಾಗುತ್ತಿದ್ದಾರೆ ಎಂದು ಭಾವನಾತ್ಮಕವಾಗಿದ್ದರು. ಇದು ನಡೆದು ಬಹಳ ದಿನಗಳಾಗಿತ್ತು, ಆದರೆ ಬಿಗ್‍ಬಾಸ್ ಇದ್ದಕ್ಕಿಂದತೆ ನೆನ್ನೆ ರಾಯಲ್ ಶೆಟ್ರುಗೆ ಬಿಗ್ ಸರ್ಪೈಸ್ ನೀಡಿದ್ದಾರೆ! (ಚಿತ್ರ ಕೃಪೆ: ಕಲರ್ಸ್ ಕನ್ನಡ/ವೂಟ್ )

 

 

ಹೌದು ನೆನ್ನೆ ಲಕ್ಸರಿ ಬಜೆಟ್ ಟಾಸ್ಕ್ ಮುಗಿದ ಮೇಲೆ ಸ್ಪರ್ದಿಗಳೆಲ್ಲಾ ಕಿಚನ್ ರೂಮಿನಲ್ಲಿ ಮಾತನಾಡುತ್ತ ಕುಳಿತ್ತಿದ್ದರು, ಅವಗಲೇ ನೋಡಿ ಮನೆ ಮುಖ್ಯದ್ವಾರದಿಂದ ಶಟ್ಟಿಯವರ ಮಾವ ಕೈಯಲ್ಲಿ ಏನೋ ಇಟ್ಟುಕೊಂಡು ಮನೆಗೆ ಪ್ರವೇಶ ಮಾಡಿದರು, ಇದನ್ನು ಕಂಡ ಭೂಮಿ ಶೆಟ್ಟಿ, ಖುಷಿಯಿಂದ ಬಿಕ್ಕಿ ಬಿಕ್ಕಿ ಅತ್ತು, ತನ್ನ ಮಾವನ ಕಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡರು. ಆದರೆ ಇದನ್ನು ನೋಡುತ್ತಿದ್ದರೆ ಈ ವಾರ ಬಿಗ್ ಬಾಸ್ ಮನೆಯಿಂದ ಭೂಮಿ ಎಲಿಮಿನೇಶನ್ ಆಗೋದು ಪಕ್ಕಾ ಅನಿಸುತ್ತಿದೆ. (ಚಿತ್ರ ಕೃಪೆ: ಕಲರ್ಸ್ ಕನ್ನಡ/ವೂಟ್ )

ಯಾಕೆ ಈ ರೀತಿಯಾಗಿ ಅನಿಸುತ್ತಿದೆ ಎಂದರೆ, ಕಳೆದ ವಾರ ಎಲಿಮಿನೇಟ್ ಆದ ರಕ್ಷಾ ಸೋಮಶೇಖರ್ ಅವರಿಗೆ ಸೀಕ್ರೇಟ್ ಟಾಸ್ಕ್ ಒಂದನ್ನು ನೀಡಲಾಗಿತ್ತು, ಎಂದು ಈ ಸೀಕ್ರೀಟ್ ಅನ್ನು ರಿವೀಲ್ ಮಾಡ್ ಬಿಗ್ ಬಾಸ್, ಅವರು ಎಲಿಮಿನೇಟ್ ಆಗುವ ವಾರದಲ್ಲೇ ರಿವಿಲ್ ಮಾಡಿದ್ದರು, ಅಂತೆಯೇ ಚೈತ್ರಾ ವಾಸುದೇವನ್ ಅವರ ವಿಚಾರದಲ್ಲು ಈ ರೀತಿಯಾದ ಘಟನೆ ನಡೆಯಿತು. ಇವನೆಲ್ಲಾ ನೋಡುತ್ತಿದ್ದರೆ, ಈ ವಾರ ಭೂಮಿ ಶೆಟ್ಟಿ ಈ ವಾರ ಮನೆಗೆ ಹಿಂತಿರುಗುವುದು ಫಿಕ್ಸ್ ಎನ್ನುತ್ತಿವೆ ಮೂಲಗಳು (ಚಿತ್ರ ಕೃಪೆ: ಕಲರ್ಸ್ ಕನ್ನಡ/ವೂಟ್ )

LEAVE A REPLY

Please enter your comment!
Please enter your name here