ಡಿ.31ಕ್ಕೆ ಬ್ಯಾನ್ ಅಗಲಿದೆಯಾ 2 ಸಾವಿರದ ನೋಟು ?

0
168

ಕಳೆದ ಕೆಲವು ದಿನಗಳ ಹಿಂದಷ್ಟೇ ಮತ್ತೆ ನೋಟ್ ಬ್ಯಾನ್ ಆಗುತ್ತದೆ ಎಂಬ ಸುದ್ದಿ ವೈರಲ್ ಆಗಿತ್ತು. ಅದಕ್ಕೆ ಪುಷ್ಟಿಕೊಡುವಂತೆ ಮತ್ತೊಂದು ಸುದ್ದಿ ಓಡಾಡುತ್ತಿದೆ. ಹೌದು, ಡಿಸೆಂಬರ್ 31 ರಿಂದ 2 ಸಾವಿರ ರೂಪಾಯಿಗಳ (2000 ರೂಪಾಯಿ ನೋಟು) ನೋಟುಗಳ ಚಲಾವಣೆ ಬಗ್ಗೆ ಹೊಸ ಸುದ್ದಿ ಹೊರಬಿದ್ದಿದೆ. ಖಾಸಗಿ ಮಾಧ್ಯಮವೊಂದರ ಪ್ರಕಾರ 2 ಸಾವಿರ ರೂಪಾಯಿ ನೋಟುಗಳನ್ನು ಮತ್ತೆ ಬ್ಯಾನ್ ಮಾಡಲಾಗುತ್ತದೆ ಎಂಬ ಸುದ್ದಿ ಇದು. ಆದರೆ ಇದು ವೈರಲ್ ಆಗುತ್ತಿರುವ ಸುಳ್ಳು ಮಾಹಿತಿ ಎನ್ನಲಾಗಿದೆ.

 

ಇನ್ನು ಈಗಾಗಲೇ ಬಹುತೇಕ ಎಟಿಎಂನಲ್ಲಿ 2 ಸಾವಿರ ನೋಟು ಸಿಗುತ್ತಿಲ್ಲ ಅನ್ನುವ ಸುದ್ದಿಗಳು ಹರಿದಾಡುತ್ತಿದ್ದು ಇದು ಕೂಡ ಜನತೆಯಲ್ಲಿ ಆತಂಕಕ್ಕೆ ಒಂದು ದಾರಿ ಮಾಡಿಕೊಟ್ಟಂತಾಗಿದೆ. ಈಗಾಗಲೇ ಆರ್ಬಿಐನ ಅಧಿಸೂಚನೆ ವಿಭಾಗದಿಂದ ಅಂತಹ ಯಾವುದೇ ಆದೇಶವನ್ನು ಅಧಿಕೃತವಾಗಿ ಹೊರಡಿಸಲಾಗಿಲ್ಲ ಅಕ್ಟೋಬರ್ನಲ್ಲಿ ಆರ್ಟಿಐಗೆ ಪ್ರತಿಕ್ರಿಯೆಯಾಗಿ ಆರ್ಬಿಐ 2 ಸಾವಿರ ರೂಪಾಯಿ ನೋಟುಗಳ ಮುದ್ರಣವನ್ನು ನಿಲ್ಲಿಸಲಾಗಿದೆ ಹೊರತು ಅದರ ಚಲಾವಣೆಯನ್ನು ವಾಪಸ್ಸು ತೆಗೆದುಕೊಂಡಿಲ್ಲ ಎಂಬುದು ಸ್ಪಷ್ಟವಾಗಿದೆ.

 

ಸ್ಪಷ್ಟವಾದ ವಿಚಾರವೆಂದರೆ ನೋಟು ಅಥಾವ ಕಾಯಿನ್ ನಿಷೇಧಕ್ಕೆ ಸಂಬಂಧಪಟ್ಟಂತೆ ಯಾವುದೇ ರೀತಿಯಲ್ಲಿ ಆರ್ಬಿಐ/ಕೇಂದ್ರ ಸರಕಾರ/ವಿತ್ತ ಸಚಿವಾಲಯ/ಬ್ಯಾಂಕ್ಗಳು ನೀಡುವ ಅಧಿಕೃತ ಅದೇಶವೇ ಅಂತಿಮವಾಗಿರುತ್ತದೆ, ಈ ಬಗ್ಗೆ ವಿವಿಧ ಮಾಧ್ಯಮಗಳ ಮೂಲಕ ಹಾಗೂ ತಮ್ಮ ತಮ್ಮ ಅಧಿಕೃತ ವೆಬ್ಸೈಟ್ಗಳಲ್ಲಿ ಮಾಹಿತಿಯನ್ನು ನೀಡುತ್ತಾರೆ. ಹೀಗೆ ಸುಳ್ಳು ವದಂತಿಗಳಿಗೆ ಕಿವಿಗೊಡಬೇಡಿ

LEAVE A REPLY

Please enter your comment!
Please enter your name here