ಮಂಡ್ಯ ರಮೇಶ್ ಅವರು ಇಂದಿಗೂ ಕೂಡ ಬಾಡಿಗೆ ಮನೆಯಲ್ಲಿರಲು ಕಾರಣವೇನು ಗೊತ್ತಾ,?

0
871

ಮಂಡ್ಯ ರಮೇಶ್ ಎಂದರೆ ಯಾರಿಗೆ ಗೊತ್ತಿಲ್ಲ ಹೇಳಿ? ಕನ್ನಡ ಚಿತ್ರರಂಗದಲ್ಲಿ ತಮ್ಮ ನಟನೆಯಿಂದಲೇ ಎಲ್ಲರನ್ನೂ ನಕ್ಕು ನಗಿಸುವ ಹಸನ್ಮುಖಿ ಜೀವಿ. ಕನ್ನಡ ಚಿತ್ರರಂಗಕ್ಕೆ ಮಂಡ್ಯ ರಮೇಶ್ ಅವರ ಕೊಡುಗೆ ಆಪಾರವಾದದ್ದು. ಮಂಡ್ಯ ರಮೇಶ್ ಎಂದರೆ ಚಿತ್ರನಟ ಅನ್ನುವದಕ್ಕಿಂತ ಒಬ್ಬ ಅದ್ಭುತ ನಾಟಕಗಾರರು ಎಂಬುದು ಎಲ್ಲರಿಗೂ ಮೊದಲು ತಿಳಿಯುತ್ತದೆ. ಬಾಲ್ಯದಲ್ಲೇ ನಾಟಕಗಳ ಒಲವು ಮೂಡಿಸಿಕೊಂಡ ಮಂಡ್ಯ ರಮೇಶ್ ಅವರು ನೀನಾಸಂ ಮತ್ತು ರಂಗಾಯಣದಲ್ಲಿ 1989 ರವರೆಗೆ ಸುದೀರ್ಘ ಸೇವೆ ಸಲ್ಲಿಸುತ್ತಾರೆ. ನಂತರದ ದಿನಗಳಲ್ಲಿ 1995ರ ಸಮಯದಲ್ಲಿ ಶಿವರಾಜ್ ಕುಮಾರ್ ಅಭಿನಯದ ಜನಮದ ಜೋಡಿ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಾರೆ. 2002 ರಲ್ಲಿ ಮಂಡ್ಯ ರಮೇಶ್ ಅವರು ತಮ್ಮದೇ ಸ್ವಂತ ನಟನಾ ಶಾಲೆಯನ್ನು ಆರಂಭಗೊಳಿಸುತ್ತಾರೆ.

 

 

ತಮ್ಮ ನಟನಾ ಶಾಲೆಯ ಮೂಲಕ ಕರ್ನಾಟಕದ ಆನೇಕ ಭಾಗಗಳಲ್ಲಿ ವರ್ಕ್ ಶಾಪ್ ನಡೆಸುವ ಮುಖೇನ ನಟನಾ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುತ್ತಿದ್ದರು. ಕನ್ನಡ ಭಾಷೆಯ ಬಗ್ಗೆ ಹೆಚ್ಚು ಆಸಕ್ತಿ ಇಟ್ಟುಕೊಂಡಿರುವ ಅವರು ರಂಗವಲ್ಲಿ ಮತ್ತು ಕನವರಿಕೆ ಎಂಬ ಎರಡು ಪುಸಕ್ತವನ್ನು ಬರೆದಿದ್ದಾರೆ. ಅದು ಮುಖ್ಯವಾಗಿ ಅವರ ನಟನಾ ರಂಗದ ಜೀವನ ಕುರಿತು. ನಟನೆ ಬಗ್ಗೆ ಮಂಡ್ಯ ರಮೇಶ್ ಅವರಿಗೆ ಇದ್ದಂತ ಆಸಕ್ತಿ ಅಪರಿಮಿತ.! ಪ್ರತಿಯೊಂದು ಪಾತ್ರಕ್ಕೂ ವಿಶೇಷವಾಗಿ ಜೀವ ತುಂಬುತ್ತಿದ್ದರು. ಕನ್ನಡ ಚಿತ್ರರಂಗದಲ್ಲಿ ವಿಷ್ಣುವರ್ಧನ್, ರವಿಚಂದ್ರನ್ ಸೇರಿದಂತೆ ದಿಗ್ಗಜ ನಟರೊಂದಿಗೆ ಅಭಿನಯಿಸಿ ಕನ್ನಡ ಚಿತ್ರರಸಿಕರ ಮನ ಥಣಿಸುವಲ್ಲಿ ಯಶಸ್ವಿಯಾದವರು. ಸದ್ಯ ಕನ್ನಡ ಚಿತ್ರರಂಗಕ್ಕಿಂತ ಹೆಚ್ಚಾಗಿ ತಮ್ಮ ನಟನಾ ಶಾಲೆಯಲ್ಲಿ ಮಕ್ಕಳಿಗೆ ತರಬೇತಿ ನೀಡುತ್ತಿರುವ ಅವರು ನಟನಾ ಶಾಲೆಯ ಬಗ್ಗೆ ಒಂದಿಷ್ಟು ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.

 

 

ಮಂಡ್ಯ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸಿದ ಮಂಡ್ಯ ರಮೇಶ್ ಅವರು ತಮ್ಮ ಬಾಲ್ಯವನ್ನು ಬೆಳ್ಳೂರು ಮತ್ತು ನಾಗಮಂಗಲದಲ್ಲಿ ಕಳೆಯುತ್ತಾರೆ. ಮಂಡ್ಯದಲ್ಲಿ ಹೆಚ್ಚು ಸಮಯ ಕಳೆದಿದ್ದರಿಂದ ಅವರಿಗೆ ಅವರ ಗುರುಗಳಾದ ಬಿ.ವಿ. ಕಾರಂತರು ಮೊದಲಿಗೆ ಮಂಡ್ಯ ರಮೇಶ್ ಎಂದು ನಾಮಕರಣ ಮಾಡಿ ಕರೆದಿದ್ದರಂತೆ. ಅಂದಿನಿಂದ ಇಂದಿನವರೆಗೂ ಮಂಡ್ಯ ರಮೇಶ್ ಎಂಬ ಹೆಸರು ಮುಂದುವರೆದುಕೊಂಡು ಬಂದಿದೆ. ಯಾರೇ ತಮ್ಮನ್ನು ನೀನು ದೊಡ್ಡವನ್ನಾದ ಮೇಲೆ ಏನಾಗುತ್ತೀಯಾ.? ಎಂದು ಕೇಳಿದರೆ. ನಾನು ಒಬ್ಬ ಕಲಾವಿದನಾಗುತ್ತೇನೆ ಎಂದೆ ಎಲ್ಲರಿಗೂ ಹೇಳುತ್ತಿದ್ದರು.

 

 

ತಾವು ಶಾಲೆಯಲ್ಲಿ ಮೊದಲ ಬಾರಿಗೆ ಗಾಂಧಿಯ ಪಾತ್ರವನ್ನು ಮಾಡಿದ್ದು, ಅಂದು ಒಬ್ಬರು ನನ್ನನ್ನು ನೋಡಿ ಕೇಕೆ ಹಾಕಿ ನಕ್ಕಿದರು.! ಅದನ್ನು ನಾನು ನನ್ನ ನಟನೆ ನೋಡಿ ಖುಷಿ ಪಟ್ಟು ಚಪ್ಪಾಳೆ ಹೊಡೆದರು ಎಂದುಕೊಂಡೆ ಆದರೆ ಅವರು ನಾನು ಎಡವಿ ಬಿದ್ದದಕ್ಕೆ ನಕ್ಕರು ಎಂಬುದು ಆ ನಂತರ ತಿಳಿಯಿತು. ಆಗಲೇ ನಾನು ಒಬ್ಬ ಕಲಾವಿದನಾಗುತ್ತೇನೆ ಎಂದು ನಿರ್ಧರಿಸಿದೆ. ನಾನೊಬ್ಬ ಕಲಾವಿದ ಎಂದು ಗುರುತ್ತಿಸಿದ್ದು ಹಾಗೂ ನಾನೂ ಕಲಾವಿದ ಎಂದು ತಿಳಿದಿದ್ದು, ದಾರಿಯಲ್ಲಿ ಹೋಗುವ ಸಾಮಾನ್ಯ ವ್ಯಕ್ತಿಯಿಂದ ಹೊರೆತು ನನ್ನ ಗುರುಗಳಿಂದಲೋ ಅಥವಾ ಯಾವ ದೊಡ್ಡ ವ್ಯಕ್ತಿಯಿಂದಲೋ ಅಲ್ಲ.! ಒಳ್ಳೆ ನಟನಾಗಬೇಕು ಎಂದರೆ ಸಿಕ್ಕ ಸಿಕ್ಕ ಜೀವನದ ಪ್ರಸಂಗಗಳನ್ನು ನೋಡಿಕೊಂಡು ಹೋಗಬೇಕು ಹಾಗೂ ಜೀವನದ ಪ್ರತಿಯೊಂದು ಘಟನೆಗಳನ್ನು ಆಸ್ವಾದಿದುತ್ತ ಬರಬೇಕು.! ನಾನು ಇಂದಿಗೂ ಕೂಡ ಯಾವುದೇ ರೀತಿಯ ಸಾಧಕನಲ್ಲ.!

 

 

ನಾನು ಇಂದಿಗೂ ಸಾಧಕನಲ್ಲ, ಸಾಧನೆ ಮಾಡುವುದು ಇನ್ನೂ ತುಂಬ ಇದೆ. ನಾನೂ ನಟನಾಗಲಿಲ್ಲ ಎಂದರೆ ಒಬ್ಬ ಪ್ರೈಮರಿ ಶಾಲೆಯಲ್ಲಿ ಮಕ್ಕಳಿಗೆ ಪಾಠ ಹೇಳಿಕೊಡುವ ಶಿಕ್ಷಕನಾಗುತ್ತಿದ್ದೆ ಎಂದು ಹೇಳುತ್ತಾರೆ. ಬರವಣಿಗೆಯಲ್ಲಿ ತುಂಬ ಆಸಕ್ತಿ ಕೂಡ ಇದೆ, ನಾನೊಬ್ಬ ಪತ್ರಕರ್ತ ಕೂಡ ಆಗಬಹುದಿತ್ತು. ನನಗೆ ಯಾವ ಸ್ವಂತ ಮನೆಯಿಲ್ಲ.! ಬದಲು ಬಾಡಿಗೆ ಮನೆಯಲ್ಲಿಯೇ ಖುಷಿಯಿಂದ ಜೀವನ ಸಾಗಿಸುತ್ತಿದ್ದೇನೆ. ಯಾಕೆಂದರೆ ನನ್ನ ಸುತ್ತ ಯುವ ತಲೆಮಾರಿನ 35 ಜನ ವಿದ್ಯಾರ್ಥಿಗಳು, ಮಕ್ಕಳು ನನ್ನ ನಟನಾ ಶಾಲೆಯಲ್ಲಿ ಮುಖವಾಡ ತಯಾರಿಸುವುದು, ಪುಸ್ತಕಗಳು ಓದುವುದು, ಕಲೆ ಎಂಬ ಹೂವು ಇವರಲ್ಲಿ ಅರಳುತ್ತಿರುವುದು ಅದನ್ನು ನೋಡಿದರೆ ನನಗೆ ಖುಷಿಯಾಗುತ್ತದೆ. ನನ್ನ ಬಡತನ, ನೋವುಗಳನ್ನು ಮರೆಯಲು ಏಕೈಕ ಕಾರಣ ಎಂದರೆ ಈ ಒಂದು ಅದ್ಭುತವಾದ ಕಲೆ.! ಹೀಗಾಗಿ ಸಿರಿತನದ ಬಗ್ಗೆ ನನಗೆ ಯಾವ ಆಸಕ್ತಿಯೂ ಇಲ್ಲ.

 

 

ನಾನು ರಂಗಾಯಾಣದ ಮೊಟ್ಟ ಮೊದಲ ಬ್ಯಾಚ್ನ, ಮೊದಲ ದಿನದ, ಮೊದಲ ವಿದ್ಯಾರ್ಥಿ ನಾನಾಗಿದ್ದೇ.! ಹಲವು ದಿಗ್ಗಜರೊಡನೆ ಸಮಯ ಕಳೆದೆ ಬಿ.ವಿ. ಕಾರಂತರು, ರಂಗಸ್ವಾಮಿ, ರಘುನಂದನ್, ಗಂಗಾಧರಸ್ವಾಮಿ ಇಂಥ ವ್ಯಕ್ತಿಗಳೂಡನೆ ಬದುಕಿದ್ದು ಬಹಳ ಖುಷಿಯಿದೆ ಮತ್ತು ಇವರಲ್ಲಿರುವ ಪ್ರಯೋಗಶೀಲತೆ, ವೃತ್ತಿಪರತೆ ಮತ್ತು ಚೈತನ್ಯಶೀಲತೆಗಳನ್ನು ನನ್ನ ಜೀವನದಲ್ಲಿ ಅಳವಡಿಸಿಕೊಂಡೆ. ನನ್ನ ಮುಂದಿನ ತಲೆಮಾರಿಗೆ ನಾನು ಏನಾದರೂ ಕೊಡುಗೆ ನೀಡಬೇಕಲ್ಲ ಎಂಬ ಯೋಚನೆಯಲ್ಲಿದ್ದ ನನಗೆ ಹೊಳಿದ ಕೆಲಸವೇ ನನ್ನದೇ ಆದ ಸಂಸ್ಥೆ ಮಂಡ್ಯ ರಮೇಶ್ ನಟನ ರಂಗಶಾಲೆ. ಈ ಒಂದು ನಟನಾ ಶಾಲೆ ಕರ್ನಾಟಕ ಆನೇಕ ಭಾಗಗಳಲ್ಲಿ ಇಂದು ಹೆಗ್ಗುರುತಾಗಿ ಬೆಳೆಯುತ್ತಿದೆ. ಇದು ನನ್ನೊಬ್ಬನ ಗೆಲುವಲ್ಲ ಬದಲು ನೂರು ಜನರ ಶ್ರಮದ ಒಂದು ಸಾಧನೆ ಈ ಒಂದು ನಟನಾ ಸಂಸ್ಥೆ.!

 

 

ರಂಗಭೂಮಿಯಲ್ಲಿ ಆರ್ಥಿಕವಾಗಿ ಸಬಲರಾಗುವುದಕ್ಕೆ ಖಂಡಿತ ನಟನೆಗೆ ಸಾಧ್ಯವಾಗಲಿದೆ ಆದರೆ ಗಟ್ಟಿ ಮನಸ್ಸು ಮಾಡಬೇಕು, ಹೆಚ್ಚು ಶ್ರಮ ಪಡಬೇಕು.! ತಮ್ಮ ಸಿನಿಮಾ ಪಯಣ ಜನುಮದ ಜೋಡಿ ಆರಂಭಗೊಂಡಿದ್ದು ಹೇಗೆ ಎಂಬುದರ ಬಗ್ಗೆ ಕೂತಹಲಕಾರಿಯಾಗಿ ಹೇಳಿಕೊಂಡಿದ್ದಾರೆ. ಮಂಡ್ಯ ರಮೇಶ್ ಅವರ ಮತ್ತಷ್ಟು ಮಾತುಗಳ ಬಗ್ಗೆ ತಿಳಿದುಕೊಳ್ಳಲು ಅವರ ಸಂದರ್ಶನದ ಯೂಟ್ಯೂಬ್ ವಿಡಿಯೋ ಲಿಂಕ್ ಕೆಳೆಗೆ ಇದೆ ವೀಕ್ಷಿಸಬಹುದು.

LEAVE A REPLY

Please enter your comment!
Please enter your name here