ಮನೆಯ ಮುಂದೆ – ಗಾಡಿಗಳಲ್ಲಿ ನಿಂಬೆಹಣ್ಣು ಏಕೆ ತೂಗಿ ಹಾಕುತ್ತಾರೆ ಗೊತ್ತಾ ?

0
248

ನಿಂಬೆಹಣ್ಣು ಆರೋಗ್ಯವರ್ಧಕ ಎಂಬುದು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಅದನ್ನು ದೃಷ್ಟಿ ನಿವಾರಕ ವಸ್ತುವಾಗಿಯೂ ಸಹ ಎಲ್ಲೆಡೆ ಬಳಸುತ್ತಾರೆ. ನಿಂಬೆ ಹಣ್ಣು ಹಾಗೂ 7 ಮೆಣಸಿನಕಾಯಿಯನ್ನು ದಾರದಲ್ಲಿ ಕಟ್ಟಿ ತೂಗು ಹಾಕುತ್ತಾರೆ. ಇದರೊಟ್ಟಿಗೆ ವಾಹನಗಳಿಗೂ ನಿಂಬೆಯ ಹಣ್ಣನ್ನು ಕಟ್ಟಿರುವುದನ್ನು ಗಮನಿಸಿರುತ್ತೇವೆ. ಆದರೆ ಇದಕ್ಕೆ ನಿಜವಾದ ಕಾರಣ ಮಾತ್ರ ನಮಗೆ ಗೊತ್ತಿರುವುದಿಲ್ಲ.

 

ಮೊದಲನೆಯ ಕಾರಣವನ್ನು ತಿಳಿದುಕೊಳ್ಳುವುದಾದರೆ ದುರದೃಷ್ಟದ ದೇವತೆ ಎಂದು ಕರೆಯಲ್ಪಡುವ ಅಲಕ್ಷ್ಮಿಯು ವ್ಯಾಪಾರಸ್ಥರಿಗೆ ವ್ಯವಹಾರದಲ್ಲಿ ನಷ್ಟವನ್ನುಂಟು ಮಾಡುತ್ತಾಳೆ. ಅಲಕ್ಷ್ಮಿಯು ಅಂಗಡಿಯ ಒಳಗೆ ಪ್ರವೇಶಿಸದಂತೆ ನಿಂಬೆಹಣ್ಣು ಹಾಗೂ ಏಳು ಹಸಿಮೆಣಸನ್ನು ಹೊರಬಾಗಿಲಿನಲ್ಲಿ ಕಟ್ಟಲಾಗುತ್ತದೆ. ಅಲಕ್ಷ್ಮಿಗೆ ಹುಳಿ, ತೀಕ್ಷ್ಣವಾದ, ಖಾರ ಪದಾರ್ಥಗಳನ್ನು ಇಷ್ಟಪಡುವುದರಿಂದ, ಬಾಗಿಲವರೆಗೆ ಬಂದು ತನಗೆ ಇಷ್ಟವಾದ ಆಹಾರವನ್ನು ತಿಂದು ಹೋಗುತ್ತಾಳೆ ಎಂಬುದು ಮಾತು.

 

ಇನ್ನು ಎಲ್ಲಾ ವಾಹನಗಳಿಗೆ ನಿಂಬೆ ಹಣ್ಣು ಹಾಗೂ ಹಸಿಮೆಣಸಿನಕಾಯಿಯನ್ನು ಕಟ್ಟುವ ಹಿಂದಿನ ಕಾರಣವೆಂದರೆ, ಹಿಂದೆ ರಸ್ತೆಗಳು ಸದ್ಯದ ಕಾಲದಂತೆ ಅಭಿವೃದ್ಧಿ ಹೊಂದಿರಲಿಲ್ಲ, ಹದಗೆಟ್ಟ ರಸ್ತೆಗಳು, ಕಾಡಿನ ಮಧ್ಯೆ ಸಂಚರಿಸುವಾಗ ವಿಷ ಜಂತುಗಳು ಏನಾದರೂ ಕಚ್ಚಿದಲ್ಲಿ ವಿಷ ತಾಗಿದೆಯೇ ಇಲ್ಲವೇ ಎನ್ನುವುದನ್ನು ಪರೀಕ್ಷಿಸಲು. ವಿಷ ಜಂತು ಕಚ್ಚಿದಾಗ ವಿಷ ದೇಹಕ್ಕೆ ಏರಿದ್ದಲ್ಲಿ ಯಾವುದೇ ಪದಾರ್ಥದ ರುಚಿ ತಿಳಿಯುವುದಿಲ್ಲ, ವಿಷ ಏರದಿದ್ದಲ್ಲಿ ನಿಂಬೆಹಣ್ಣಿನ ಹುಳಿ, ಮೆಣಸಿನ ಖಾರದ ರುಚಿ ತಿಳಿಯುತ್ತದೆ. ಈ ಕಾರಣಕ್ಕಾಗಿ ಹಿಂದಿನ ಕಾಲದಿಂದ ಈ ಆಚರಣೆಯನ್ನು ಪಾಲಿಸಿಕೊಂಡು ಬಂದಿದ್ದಾರೆ ಎಂಬ ವಾಡಿಕೆಯಿದೆ.

 

ಕೆಲವೊಬ್ಬರು ದೂರ ಪ್ರಯಾಣದ ಸಂದರ್ಭದಲ್ಲೂ ಮೆಣಸು ಹಾಗೂ ನಿಂಬೆಹಣ್ಣನ್ನು ಇಟ್ಟುಕೊಂಡು ತೆರಳುತ್ತಾರೆ. ಯಾಕೆಂದರೆ, ದೂರ ಪ್ರಯಾಣ ಸಂದರ್ಭದಲ್ಲಿ ದೇಹದಲ್ಲಿ ನಿರ್ಜಲೀಕರಣ ಸಮಸ್ಯೆ ಉಂಟಾದಾಗ ನಿಂಬೆಹಣ್ಣನ್ನು ನೀರಿಗೆ ಹಾಕಿ ಹಿಂಡಿ ಸೇವಿಸುವುದಕ್ಕಾಗಿ ನಿಂಬೆ ಹಣ್ಣನ್ನು ಬಳಕೆ ಮಾಡಲಾಗುತ್ತದೆ. ಜೊತೆಗೆ ಮೆಣಸನ್ನು ವಿಷಜಂತುವಿನ ಕಡಿತವನ್ನು ಪರೀಕ್ಷಿಸಲು ತೆಗೆದುಕೊಂಡು ಹೋಗುತ್ತಾರೆ. ಹೀಗೆ ನಿಂಬೆಹಣ್ಣಿಗೆ ತನ್ನದೇ ಆದ ಕಾರಣವಿರುವುದರಿಂದ ಅದನ್ನು ವಿಶೇಷವಾಗಿ ಬಳಸಿಕೊಳ್ಳಲಾಗುತ್ತದೆ.

LEAVE A REPLY

Please enter your comment!
Please enter your name here