ಜನಿವಾರ ಓಕೆ, ಏಸು ಶಿಲುಬೆ ಯಾಕೆ ? ನೆಟ್ಟಿಗರಿಗೆ ಮಾಧವನ್ ನ ಖಡಕ್ ಉತ್ತರ !

0
507

ನೆಟ್ಟಿಗರು ಬಹುಭಾಷಾ ನಟ ಮಾಧವನ್ ಮೇಲೆ ಗರಂ ಆಗಿದ್ದಾರೆ.ಇದಕ್ಕೆ ಕಾರಣ ಸಾಮಾಜಿಕ ಜಾಲತಾಣದಲ್ಲಿ ಮಾಧವನ್ ಅವರು ತಮ್ಮ ಮಗನ ಜೊತೆ ಹಾಗೂ ತಂದೆಯ ಜೊತೆ ಜನಿವಾರ ತೊಟ್ಟು, ಉಪಾಕರ್ಮ ಆಚರಿಸಿಕೊಳ್ಳುವ ಫೋಟೊವೊಂದನ್ನು ಶೇರ್ ಮಾಡಿದ್ದರು !
ಹಾಗೆಯೇ ರಕ್ಷಾ ಬಂಧನ ಆಚರಿಸಿ ಕೊಳ್ಳುತ್ತಿರುವ ಫೋಟೋವನ್ನು ಸಹಿತ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು !

ಆದರೆ ಈ ಚಿತ್ರವೇ ವಿವಾದಕ್ಕೆ ಕಾರಣವಾಗಿದೆ ಹಾಗೂ ನೆಟ್ಟಿಗರು ಗರಂ ಆಗಿದ್ದಾರೆ ! ಮಾಧವನ್ ಹಂಚಿಕೊಂಡಿದ್ದ ಫೋಟೊವಿನ ಹಿಂದೆ ಏಸುವಿನ ಶಿಲುಬೆ ಕಾಣಿಸುತ್ತದೆ ! ಹಾಗಾಗಿ ಜನಿವಾರ ಧರಿಸುವ ನಿಮ್ಮ ಮನೆಯ ದೇವರ ಮನೆಯಲ್ಲಿ ಏಸುವಿನ ಶಿಲುಬೆ ಯಾಕೆ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ?

ಹಾಗೆಯೆ,”ನೀವು ಬ್ರಾಹ್ಮಣರು. ಹಿಂದು ಎಂದ ಮೇಲೆ ನಿಮ್ಮ ಮನೆಯ ಪೂಜಾ ಕೋಣೆಯಲ್ಲಿ ಏಸುವಿನ ಶಿಲುಬೆಯಾಕಿದೆ? ಚರ್ಚ್ ಗಳಲ್ಲಿ ಹಿಂದೂ ದೇವರ ಮೂರ್ತಿಯಾಗಲಿ, ಫೊಟೋ ಆಗಲಿ ಇರುತ್ತದೆಯಾ?ನಿಮ್ಮ ಮೇಲಿನ ಗೌರವ ಕಳೆದುಹೋಯಿತು. ನಕಲಿ ಮುಖವನ್ನು ಯಾಕೆ ತೋರಿಸುತ್ತೀರಿ?” ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು !

ಇದಕ್ಕೆ ಪ್ರತ್ಯುತ್ತರವಾಗಿ ಮಾಧವನ್ ಖಡಕ್ಕಾಗಿ ರಿಪ್ಲೆ ನೀಡಿದ್ದಾರೆ !

“ನಿಮ್ಮಂತವರಿಂದ ಗೌರವ ತೆಗೆದುಕೊಳ್ಳಬೇಕೆಂದು ನನಗನಿಸುವುದಿಲ್ಲ. ನನ್ನ ಮನೆಯಲ್ಲಿರುವವರು ಎಲ್ಲಾ ಧರ್ಮದ ಮಲೆ ನಂಬಿಕೆಯನ್ನು ಇಟ್ಟವರು. ಎಲ್ಲಾ ಜಾತಿ ಧರ್ಮದ ಮೇಲೆ ಗೌರವವಿದೆ. ನಿಮ್ಮ ರೋಗಗ್ರಸ್ತ ಮನಸ್ಥಿಗೆ ಶೀಘ್ರವೇ ಪರಿಹಾರ ಸಿಗಲಿ” ಎಂದು ಮಾಧವನ್ ಖಡಕ್ಕಾಗಿ ಹೇಳಿದ್ದಾರೆ !

“ನಾನು ದರ್ಗಾಕ್ಕೂ ಹೋಗುತ್ತೇನೆ, ಚರ್ಚಿಗೂ ಹೋಗುತ್ತೇನೆ, ಗುರುದ್ವಾರಕ್ಕೂ ಹೋಗುತ್ತೇನೆ. ನನ್ನ ಪೂಜಾ ಕೋಣೆಯಲ್ಲಿ ಗೋಲ್ಡನ್ ಟೆಂಪಲ್ ಕೂಡ ಇದೆ. ಅದನ್ನು ನೋಡಿ ಸಿಖ್ ಧರ್ಮಕ್ಕೆ ಮತಾಂತರ ಗೊಂಡಿದ್ದೀರಾ ಎಂದು ಕೇಳಲ್ಲವಲ್ಲಾ?” ಎಂದು ಕೇಳಿದ್ದಾರೆ

ಹಿರಿಯರು ಹೇಳಿಕೊಟ್ಟಿದ್ದು ಇದೆ ಬೇರೆಯವರ ಆಚರಣೆ, ನಂಬಿಕೆಗಳಿಗೆ ಗೌರವಕೊಡಿ

“ನನ್ನ ಅಸ್ಮಿತೆ ಬಗ್ಗೆ ಹೆಮ್ಮೆ ಪಡುತ್ತಾ, ಅದನ್ನು ಆಚರಿಸುತ್ತಾ ಬೇರೆಯವರ ಆಚರಣೆ, ನಂಬಿಕೆಗಳಿಗೆ ಗೌರವ ಕೊಡುವಂತೆ ನಮ್ಮ ಹಿರಿಯರು ಹೇಳಿಕೊಂಡಿದ್ದಾರೆ. ನನ್ನ ಮಗನಿಗೂ ಅದನ್ನೇ ಪಾಲಿಸುವಂತೆ ಹೇಳಿಕೊಟ್ಟಿದ್ದೇನೆ. ಪಾಲಿಸುತ್ತಿದ್ದಾನೆ. ನಂಬಿಕೆ, ಆಚರಣೆ, ಸಂಪ್ರದಾಯ ಇವೆಲ್ಲಾ ಅವರವರ ವೈಯಕ್ತಿಕ ಅಭಿಪ್ರಾಯ. ನಮ್ಮ ಅಸ್ಮಿತೆಯನ್ನು ಉಳಿಸಿಕೊಂಡು ಬೇರೆಯವರ ನಂಬಿಕೆ, ಆಚರಣೆಗಳನ್ನು ಗೌರವಿಸುವುದೆ ನಿಜವಾದ ಧರ್ಮ” ಎಂದು ಖಾರವಾಗಿ ಉತ್ತರಿಸಿದ್ದಾರೆ.

LEAVE A REPLY

Please enter your comment!
Please enter your name here