ಕನ್ನಡ ಚಿತ್ರರಂಗದಲ್ಲಿ ಪ್ರತಿದಿನ ಒಂದಲ್ಲ ಒಂದು ಬಿಸಿ ಬಿಸಿ ಸುದ್ದಿ ಹೊರಬಿಳುತ್ತಿರುತ್ತದೆ. ಅದೇ ರೀತಿಯಲ್ಲಿ ಇಲ್ಲೊಂದು ಹೊಸ ಸಿನಿಮಾ ತಂಡ ತಮ್ಮ ನಟಿ ವಿರುದ್ಧ ಆರೋಪ ಮಾಡಿದೆ. ಹೌದು, ಬಿಗ್ಬಾಸ್ ಸೀಸನ್ 4ರಲ್ಲಿ ಸಾಕಷ್ಟು ಚರ್ಚೆಗೆ ಒಳಗಾಗಿದ್ದ ನಟಿ ಸಂಜನಾ ಚಿದಾನಂದ್ ಇದೀಗ ಸಿನಿಮಾ ತಂಡದಿಂದ ಹಣ ಪಡೆದು ಮೋಸ ಮಾಡಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಬಿಗ್ಬಾಸ್ ಶೋನಲ್ಲಿ ಹೆಚ್ಚು ಕಾಂಟ್ರವರ್ಸಿಯಿಂದಲೇ ಹೆಸರು ಮಾಡಿದ್ದರು ನಟಿ ಸಂಜನಾ ಚಿದಾನಂದ.
ಕನ್ನಡ ಚಿತ್ರರಂಗದಲ್ಲಿ ಹೊಚ್ಚ ಹೊಸ ಜಾನರ್ಗಳ ಸಿನಿಮಾಗಳು ಗಾಂಧಿನಗರದಲ್ಲಿ ರಾರಾಜಿಸುತ್ತಿದ್ದು, ಆದೇ ಸಾಲಿನಲ್ಲಿ ತಯಾರಾಗಿರುವ `ಉಡುಂಬಾ’ ಚಿತ್ರವು ಈಗಾಗಲೇ ಪ್ರೇಕ್ಷಕರಿಗೆ ಸಾಕಷ್ಟು ಕೂತೂಹಲ ಮೂಡಿಸಿದೆ ಎನ್ನಬಹುದು. ಇದೇ ಶುಕ್ರವಾರ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಇಂಥ ಸಂಧರ್ಭದಲ್ಲಿ ಚಿತ್ರತಂಡ ಸಂಜನಾ ಮೇಲಿರುವ ಅಸಮಾಧಾನವನ್ನು ಹೊರ ಹಾಕಿದೆ. ಸಂಜನಾ ಈ ಚಿತ್ರದಲ್ಲಿ ಐಟಂ ಸಾಂಗ್ನಲ್ಲಿ ನಟಿಸಿದ್ದಾರೆ ಎನ್ನಲಾಗಿದೆ. ಚಿತ್ರದ ನಿರ್ಮಾಪಕರು ನಟಿ ಸಂಜನಾ ವಿರುದ್ಧ ತೀರಾ ಬೇಸರ ವ್ಯಕ್ತಪಡಿಸಿದ್ದಾರೆ. ಸಿನಿಮಾದ ಚಿತ್ರಿಕರಣ ಮುಗಿದ ಬಳಿಕ ಚಿತ್ರದ ಪ್ರಮೋಷನ್ಗೆ ನೀವು ಬರಬೇಕು ಎಂದು ನಿರ್ಮಾಪಕರು ಪೇಮೆಂಟ್ ನೀಡುವಾಗ ತಿಳಿ ಹೇಳಿದ್ದರಂತೆ.
ಆದರೆ ಸಂಜನಾ ಸಿನಿಮಾದ ದ್ವನಿಸುರುಳಿ ಬಿಡುಗಡೆಗೂ ಬಂದಿಲ್ಲ ಜೊತೆಗೆ ಸಿನಿಮಾದ ಹಾಡಿನ ಚಿತ್ರಿಕರಣದ ವೇಳೆಯು ಸರಿಯಾದ ಸಮಯಕ್ಕೆ ಬಂದಿಲ್ಲ. ಎಷ್ಟೂ ಕರೆ ಮಾಡಿದರು ಅದಕ್ಕೆ ಸರಿಯಾದ ಪ್ರತಿಕ್ರಿಯೇ ನೀಡುತ್ತಿರಲಿಲ್ಲ ಎಂದು ಉಡುಂಬಾ ಚಿತ್ರದ ನಾಯಕ ಪವನ್ ಶೌರ್ಯ ಮತ್ತು ನಿರ್ಮಾಪಕರು ಸಂಜನಾ ವಿರುದ್ಧ ಆರೋಪ ವ್ಯಕ್ತಪಡಿಸಿದ್ದಾರೆ.