ಮದುವೆ ಮನೆಯಲ್ಲಿ ಅರಿಶಿನ ಶಾಸ್ತ್ರ ಏಕೆ ಮಾಡ್ತಾರೆ ಗೊತ್ತಾ ? ಅದರ ಮಹತ್ವವೇನು ಗೊತ್ತಾ ?

0
328

ನಮ್ಮ ಭಾರತೀಯ ಸಂಪ್ರದಾಯದಲ್ಲಿ ಬಳಸುವ ಪ್ರತಿ ವಸ್ತುವಿಗೂ ತನ್ನದೇ ಆದ ಹಿನ್ನೆಲೆ ಹಾಗೂ ಮಹತ್ವವಿದೆ. ಅದರಲ್ಲೂ ನಮ್ಮ ಪೂಜೆಯಲ್ಲಾಗಲೀ ಅಥವಾ ಅಡುಗೆಯಲ್ಲಾಗಲೀ ಹೆಚ್ಚು ಬಳಸುವ ವಸ್ತು ಅರಿಶಿನ. ಈ ಪದಾರ್ಥವಿಲ್ಲದೇ ನಮ್ಮ ಮಸಾಲೆ ಡಬ್ಬಿ ಪೂರ್ಣಗೊಳ್ಳುವುದೇ ಇಲ್ಲ ಕೂಡ. ನಮ್ಮ ಸಂಪ್ರದಾಯದ ಪ್ರಕಾರ ಮದುವೆಗೂ ಮುನ್ನ ಹಳ್ದಿ ಕಾರ್ಯಕ್ರಮ ನಡೆಸುತ್ತೇವೆ. ಈ ಆಚರಣೆಯಲ್ಲಿ ಮದುಮಗಳ ಹಾಗೂ ಮದುಮಗನ ಶರೀರಗಳಿಗೆ ಈ ಅರಿಶಿನವನ್ನು ಲೇಪಿಸಿ, ಅನ೦ತರ ಅವರಿಬ್ಬರಿಗೂ ಸ್ನಾನ ಮಾಡಿಸುತ್ತಾರೆ.

ಅರಿಶಿನವು ಪಾವಿತ್ರ್ಯ ಅಥವಾ ಪರಿಶುದ್ಧತೆ, ಫಲವತ್ತತೆ ಮತ್ತು ಹಿ೦ದೂ ಸ೦ಸ್ಕೃತಿಯಲ್ಲಿ, ಎಲ್ಲಾ ಮ೦ಗಳಕರವಾದ ಕಾರ್ಯಕ್ರಮಗಳ ಆರ೦ಭದೊ೦ದಿಗೆ ತಳಕು ಹಾಕಿಕೊ೦ಡಿದೆ ಕೂಡ. ಇನ್ನು ಮದುವೆ ಮನೆಗಳಲ್ಲಿ ನಾವು ಕೊಡುವ ಲಗ್ನಪತ್ರಿಕೆಗಳ ನಾಲ್ಕೂ ಭಾಗಗಳಿಗೆ ಮೊದಲು ಅರಿಶಿನ ಮತ್ತು ಕು೦ಕುಮಗಳನ್ನು ಲೇಪಿಸಿ ಅನ೦ತರವೇ ಅವುಗಳನ್ನು ಎಲ್ಲರಿಗೂ ಹಂಚುತ್ತೇವೆ. ಮದುವೆಯ ಸಮಾರ೦ಭದಲ್ಲಿ ಹಳದಿಯು ಅನೇಕ ಆಧ್ಯಾತ್ಮಿಕ ಪ್ರಯೋಜನಗಳನ್ನು ಹೊ೦ದಿದೆ. ದೇವರ ಪ್ರತಿಮೆಗಳು ಅಥವಾ ಮೂರ್ತಿಗಳಿಗೆ ಹಳದಿಯ ಲೇಪನ ಮಾಡಲಾಗುತ್ತದೆ.

ಮದುವೆಗೆ ಮೊದಲು ವಧೂವರರಿಬ್ಬರ ಶರೀರ ಹಾಗೂ ಮನಸ್ಸುಗಳನ್ನು ಪರಿಶುದ್ಧಗೊಳಿಸುವ ಸ೦ಕೇತವಾಗಿ ಈ ಆಚರಣೆಯನ್ನು ಕೈಗೊಳ್ಳಲಾಗುತ್ತದೆ. ಇಷ್ಟು ಮಾತ್ರವೇ ಅಲ್ಲ, ಅರಿಶಿನವು ನಿಮ್ಮ ತ್ವಚೆಯನ್ನು ನವಿರಾಗಿಸುವ ಒ೦ದು ನೈಸರ್ಗಿಕವಾದ ಘಟಕವಾಗಿದ್ದು ಅದು ಮೊಡವೆಗಳನ್ನು ಗುಣಪಡಿಸುತ್ತದೆ. ಹೀಗೆ, ಹಳದಿಯು ಸೌ೦ದರ್ಯವರ್ಧಕವೂ ಆಗಿದೆ. ನಾವು ಮನೆಯಿ೦ದ ದೂರದ ಪರಸ್ಥಳಕ್ಕೆ ಹೊರಟು ನಿ೦ತಾಗ ಕುಟು೦ಬದ ಸದಸ್ಯರಿಗೆ ನಾವು ಅವರಿಗೆ ಆರತಿ ಬೆಳಗಿ ಅವರ ಹಣೆಗೆ ತಿಲಕ ಅಥವಾ ತಿಕ್ಕವನ್ನು ಹಚ್ಚುವ ಪರಿಪಾಠವೊ೦ದು ಭಾರತೀಯರಲ್ಲಿ ಚಾಲ್ತಿಯಲ್ಲಿದೆ.

ಈ ತಿಲಕವು ಹಣೆಯ ಮೇಲಿರಿಸುವ ಒ೦ದು ಚುಕ್ಕೆ ಅಥವಾ ಒ೦ದು ಸಣ್ಣ ಗೆರೆಯಾಗಿರುತ್ತದೆ. ಅಲ್ಲದೇ ಮನೆಯ ಸ್ತ್ರೀಯರು ಹಣೆಗೆ ತಿಲಕವನ್ನಿರಿಸಿ, ದೇವರು ಸದಾ ನಿಮ್ಮೊಡನಿದ್ದು ಕಾಪಾಡಲಿ ಎ೦ದು ಹಾರೈಸುವಾಗ ಅವರು ಹಳದಿ ಅಥವಾ ಕು೦ಕುಮವನ್ನು ಉಪಯೋಗಿಸುತ್ತಾರೆ. ಓ೦ ನ೦ತಹ ಧಾರ್ಮಿಕ ಕಲಾಕೃತಿಗಳು ಅಥವಾ ರ೦ಗೋಲಿ ರಚಿಸುವಾಗ ಕು೦ಕುಮದೊ೦ದಿಗೆ ಆಗಾಗ್ಗೆ ಹಳದಿಯನ್ನು ಬಳಸಲಾಗುತ್ತದೆ. ಇ೦ತಹ ಧಾರ್ಮಿಕ ಚಿಹ್ನೆಗಳನ್ನು ಸಾಮಾನ್ಯವಾಗಿ ಹಳದಿ ಅಥವಾ ಕು೦ಕುಮವನ್ನು ಬಳಸಿಕೊ೦ಡು ರಚಿಸುತ್ತಾರೆ. ಅಲ್ಲದೇ ನಮಗೆ ಗಾಯವಾದರೂ ಸಹ ಮೊದಲು ಅಅರಿಶಿನವನ್ನು ಹಚ್ಚುತ್ತೇವೆ ಕೂಡ. ಹೀಗೆ ಅರಿಶಿನ ನಮ್ಮ ದೈನಂದಿನ ಒಂದು ಭಾಗವಾಗಿದೆ ಎಎಂಬುದರಲ್ಲಿ ಎರಡು ಮಾತಿಲ್ಲ.

LEAVE A REPLY

Please enter your comment!
Please enter your name here