‘ಸ್ಟಾರ್’ ಬಿರುದು ಸುದೀಪ್ ಅವರ ಹೆಸರಿನ ಮುಂದೆ ಸೇರಿಲ್ಲ ಯಾಕೆ ?

0
419

ದಕ್ಷಿಣ ಭಾರತದ ಚಲನಚಿತ್ರ ನಟರು ತಮ್ಮ ಹೆಸರಿನ ಮುಂದೆ, ರಿಯಲ್ ಸ್ಟಾರ್, ಸೂಪರ್ ಸ್ಟಾರ್, ಪವರ್ ಸ್ಟಾರ್, ರಾಕಿಂಗ್ ಸ್ಟಾರ್, ಚಾಲೆಂಜಿಂಗ್ ಸ್ಟಾರ್, ಮೆಗಾ ಸ್ಟಾರ್, ಸುಪ್ರೀಮ್ ಸ್ಟಾರ್ ಹೀಗೆ ಬಿರುದುಗಳನ್ನು ಪಡೆದುಕೊಂಡಿರುವುದು ಸರ್ವೇಸಾಮಾನ್ಯ.

 

 

ಆದರೆ ಅಭಿಮಾನಿಗಳ ಆಸೆಯಂತೆ ಅಭಿನಯ ಚಕ್ರವರ್ತಿ ಎಂಬ ಬಿರುದನ್ನು ಸೇರಿಸಿಕೊಂಡಿದ್ದು ಬಿಟ್ಟರೆ ನಟ ಕಿಚ್ಚ ಸುದೀಪ್ ಯಾವುದೇ ರೀತಿಯ ಸ್ಟಾರ್ ಎಂದು ಸೇರಿಸಿಕೊಂಡಿಲ್ಲ.. ಎಷ್ಟೋ ವರ್ಷಗಳಿಂದ ಸುದೀಪ್ ಅವರು ಕಿಚ್ಚ ಸುದೀಪ್ ಆಗೆಯೇ ಉಳಿದಿದ್ದಾರೆ..ಸಾಕಷ್ಟು ಜನರು ಸಾಮಾಜಿಕ ಜಾಲತಾಣಗಳಲ್ಲಿ, ಸುದೀಪ್ ಯಾಕೆ ಯಾವ ಸ್ಟಾರ್ ಬಿರುದನ್ನು ಸೇರಿಸಿಕೊಂಡಿಲ್ಲ ಎಂಬ ಪ್ರಶ್ನೆಗಳನ್ನು ಕೇಳುತ್ತಲೇ ಇದ್ದಾರೆ.

 

 

ಆದರೆ ಇದರ ಹಿಂದೆ ಒಂದು ಬಲವಾದ ಕಾರಣವಿದೆ, ಸುದೀಪ್ ಅವರಿಗೆ ಸ್ಟಾರ್ ಬಿರುದುಗಳಿಂದ ಕಿಚ್ಚ ಸುದೀಪ್ ಅಂದರೆ ಬಹಳ ಖುಷಿಯಾಗುತ್ತದೆಯಂತೆ. 2001, ಹುಚ್ಚ ಸಿನಿಮಾ ತೆರೆಕಂಡ ವರ್ಷವದು. ಅಲ್ಲಿಯ ತನಕ ಸುದೀಪ್ ಅವರ ಸಿನಿಮಾಗಳು ಹೆಚ್ಚಾಗಿ ಹಿಟ್ ಆಗುತ್ತಿರಲಿಲ್ಲ ಮತ್ತು ಅಷ್ಟು ಅಭಿಮಾನಿಗಳನ್ನು ಸಹ ಹೊಂದಿರಲಿಲ್ಲ.ಈ ಸಿನಿಮಾ ತೆರೆ ಕಂಡ ದಿನವೇ ನೋಡಿ ಸುದೀಪ್ ಅವರು ಕಿಚ್ಚ ಸುದೀಪ್ ಆಗಿದ್ದು, ಮತ್ತು ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದು.

 

 

ಈ ಚಿತ್ರ ರೀಮೇಕ್ ಆದರೂ ಸುದೀಪ್ ಅವರಿಗೆ ಸಾಕಷ್ಟು ಖ್ಯಾತಿ ತಂದುಕೊಟ್ಟಿತ್ತು.. ರೊಮ್ಯಾಂಟಿಕ್ ಆ್ಯಕ್ಷನ್ ಕಥೆಯನ್ನು ಹೊಂದಿದ್ದ ಹುಚ್ಚ ಸಿನಿಮಾವನ್ನು ನಿರ್ದೇಶನ ಮಾಡಿದ್ದು ಓಂಪ್ರಕಾಶ್ ರಾವ್.. ತೆರೆಯ ಮೇಲೆ ಕಿಚ್ಚನ ಆಕ್ಷನ್ ಲವ್ ಮತ್ತು ಹುಚ್ಚನ ಪಾತ್ರಗಳು ಪ್ರೇಕ್ಷಕರಿಗೆ ಬಹಳ ಇಷ್ಟವಾಗುತಿತ್ತು.

 

‘ಹುಚ್ಚ’ ಸಿನಿಮಾ ಬಿಡುಗಡೆಯಾದ ಮೊದಲ ದಿನ ಚಿತ್ರಮಂದಿರದ ಮುಂದೆ ಜನ ಅವರನ್ನು ‘ಕಿಚ್ಚ’ ಎಂದು ಕರೆದು ಜೈಕಾರ ಹಾಕಿದ್ದರು. ಆ ಸಮಯದಲ್ಲಿ ಸುದೀಪ್ ಅವರ ಹೆಸರು ಕೂಡ ಅಭಿಮಾನಿಗಳಿಗೆ ಅಷ್ಟಾಗಿ ತಿಳಿದಿರಲಿಲ್ಲ.

 

 

ಸಿನಿಮಾದ ಪಾತ್ರದ ಹೆಸರನ್ನು ಜನ ಪ್ರೀತಿಯಿಂದ ಕರೆದರು. ಮೊದಲ ಬಾರಿಗೆ ಜನ ಈ ಹೆಸರು ನೀಡಿದ್ದು, ಅದರಲ್ಲಿ ಒಂದು ಮುಗ್ದತೆ ಇದೆ ಎನ್ನುತ್ತಾರೆ ಸುದೀಪ್. ಅದಕ್ಕೆ ಎಷ್ಟೇ ದೊಡ್ಡ ನಟನಾದರೂ, ಸುದೀಪ್ ಜನ ನೀಡಿದ ‘ಕಿಚ್ಚ’ ಹೆಸರನ್ನು ತೆಗದು ಹಾಕುವುದಿಲ್ಲವಂತೆ. ಭಾವನಾತ್ಮಕವಾಗಿ ಕಿಚ್ಚ ಎನ್ನುವ ಪದ ಸುದೀಪ್ ಗೆ ಬಹಳ ಹತ್ತಿರವಾಗಿದೆ.

LEAVE A REPLY

Please enter your comment!
Please enter your name here