ಮದುವೆಯಾದ ಕೆಲವೇ ದಿನದಲ್ಲಿ ಹಿತಾ – ಕಿರಣ್ ಜಗಳವಾಡಿ ಬೀಳಿಸಿದ್ದೇಕೆ ?

0
307

ಇತ್ತೀಚೆಗಷ್ಟೇ ಚಂದನವನದ ಹಿರಿಯ ನಟರಾದ ನಟ ಸಿಹಿಕಹಿ ಚಂದ್ರು ಅವರ ಮಗಳು ಹಿತಾ ಚಂದ್ರಶೇಖರ್ ಅವರು ನಟ ಹಾಗೂ ನಿರೂಪಕ ಕಿರಣ್ ಶ್ರೀನಿವಾಸ್ ಅವರೊಂದಿಗೆ ಸಪ್ತಪಡಿ ತುಳಿದದ್ದು ಎಲ್ಲರಿಗೂ ಗೊತ್ತಿದೆ. ಮದುವೆ ಮುಗಿದ ಬಳಿಕ ಇವರಿಬ್ಬರೂ ಹೋಗಿದ್ದು, ಅಲ್ಲಿ ಜಗಳವಾಡಿಕೊಂಡಿದ್ದಾರಂತೆ.

 

ಅಯ್ಯೋ ಹೋದ ವಾರ ಮದುವೆಯಾಗಿ ಇಷ್ಟು ಬೇಗ ಕಿತ್ತಾಡಿಕೊಂಡ್ರಾ ಎಂದು ಆಶ್ಚರ್ಯ ಪಡಬೇಡಿ. ಹಿತಾ ಹಾಗೂ ಕಿರಣ್ ದಂಪತಿ ತಮ್ಮ ಹನಿಮೂನ್ ಎಂಜಾಯ್ ಮಾಡಲು ಮಡಗಾಸ್ಕರ್ ಈಶಾನ್ಯ ಭಾಗದಲ್ಲಿರುವ ಸೀಶೆಲ್ಸ್ ನ ದ್ವೀಪಕ್ಕೆ ತೆರಳಿದ್ದಾರೆ. ಇದರ ಮಧ್ಯೆ ಇಬ್ಬರು ಕಾಲಿನಿಂದ ಪರಸ್ಪರ ಒದ್ದಿದ್ದಾರೆ. ಅಲ್ಲದೆ ಆ ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಹಿತಾ ಹಾಗೂ ಕಿರಣ್ ತಮಾಷೆಗಾಗಿ ಈ ರೀತಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ ಹೊರತು ಅವರ ನಡುವೆ ಯಾವುದೇ ಜಗಳವಾಗಿಲ್ಲ. ಸದ್ಯ ಇವರಿಬ್ಬರ ಈ ಫೋಟೋಗೆ ಜನರು ಭೇಷ್ ಎನ್ನುತ್ತಿದ್ದಾರೆ.

 

ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಿತಾ ತಮ್ಮ ಇನ್ಸ್ಟಾದಲ್ಲಿ ಮೂರು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮೊದಲು ಕಿರಣ್ ಕೈ ಹಿಡಿದಿರುವ ಫೋಟೋ ಹಾಕಿದ್ದಾರೆ. ಬಳಿಕ ಕಾಲಿನಿಂದ ಒದೆಯುತ್ತಿರುವ ಫೋಟೋವನ್ನು ಶೇರ್ ಮಾಡಿದ್ದಾರೆ. ನಂತರ ಕಿರಣ್ ಕೆಳಗೆ ಬಿದ್ದಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಇತ್ತ ಕಿರಣ್ ಕೂಡ ಇದೇ ರೀತಿ ಮೂರು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

 

ಅಭಿಮಾನಿಗಳು ಸಿಹಿ ಕಹಿ ಚಂದ್ರು ಅವರಂತೆಯೇ ದಂಪತಿ ಪರಸ್ಪರ ಚೆನ್ನಾಗಿ ಕಾಲೆಳೆಯುತ್ತಿದ್ದೀರಿ. ಇದೇ ರೀತಿ ನೀವು ಚೆನ್ನಾಗಿ ಇರಿ ಎಂದು ಕಮೆಂಟ್ ಮಾಡಿ ಜೋಡಿಗೆ ಶುಭ ಹರಸುತ್ತಿದ್ದಾರೆ. ಇದೇ ಡಿಸೆಂಬರ್ 1ರಂದು ಹಿತಾ ಚಂದ್ರಶೇಖರ್ ತಮ್ಮ ಗೆಳೆಯ ಕಿರಣ್ ಶ್ರೀನಿವಾಸ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

LEAVE A REPLY

Please enter your comment!
Please enter your name here