10ʼ000 ಒಂಟೆಗಳನ್ನು ಏಕಾಏಕಿ ಕೊಲ್ಲುವ ನಿರ್ಧಾರ ಕೈಗೊಂಡಿದ್ದೇಕೆ ?

0
175

ಕಾಡ್ಗಿಚ್ಚು ಅಂದರೆ ಯಾರಿಗೆ ತಾನೇ ಭಯವಿಲ್ಲ ಹೇಳಿ. ಈಗಾಗಲೇ ಇದೇ ಕಾಡ್ಗಿಚ್ಚಿಗೆ ಆಸ್ಟ್ರೇಲಿಯಾ ನಲುಗಿ ಹೋಗಿದೆ. ಅಂದರೆ ನೀರನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಸುಮಾರು ಹತ್ತು ಸಾವಿರ ಒಂಟೆಗಳನ್ನು ಕೊಲ್ಲುವ ನಿರ್ಧಾರ ಕೈಗೊಂಡಿದೆ. ಈಗಾಗಲೇ ಒಂಟೆಗಳು ಹೆಚ್ಚು ನೀರು ಕುಡಿಯುತ್ತಿದ್ದು, ಇದೀಗ 10000 ಒಂಟೆಗಳನ್ನು ಕೊಲ್ಲುವ ಐದು ದಿನಗಳ ಕಾರ್ಯಾಚರಣೆಗೆ ಆಸ್ಟ್ರೇಲಿಯಾ ಸರ್ಕಾರ ಮುಂದಾಗಿದೆ.

 

ಈ ಕಾರ್ಯಾಚರಣೆ ಇಂದಿನಿಂದ ಆರಂಭವಾಗಿದ್ದು, ಇದಕ್ಕಾಗಿ ಸರ್ಕಾರ ಹೆಲಿಕಾಪ್ಟರ್ ಗಳನ್ನು ಕಳುಹಿಸಿದೆ.
ಈಗಾಗಲೇ ಆಸ್ಟ್ರೇಲಿಯಾದಲ್ಲಿ ನವೆಂಬರ್ ನಿಂದ ಕಾಡ್ಗಿಚ್ಚು ಆರಂಭವಾದಾಗಿನಿಂದ ಒಂಟೆಗಳ ಹಾವಳಿ, ಹೆಚ್ಚು ನೀರನ್ನು ಕುಡಿಯಲು ಆರಂಭಿಸಿದ್ದರಿಂದ ಅವುಗಳ ಹತ್ಯೆಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದರಿಂದ ಹೆಚ್ಚು ನೀರು ಉಳಿತಾಯವಾಗಲಿದೆ ಎಂದು ಮಾರ್ಟಿಯಾ ವಿವರಿಸಿರುವುದಾಗಿ ವರದಿ ತಿಳಿಸಿದೆ.

 


idEವೆಂಬರ್‌ನಿಂದ ಆಸ್ಟ್ರೇಲಿಯಾದ ಕಾಡುಗಳಲ್ಲಿ ಅಗ್ನಿ ನರ್ತನ ಆರಂಭವಾಗಿದೆ. ವಾತಾವರಣ ಮತ್ತು ನೀರಿನ ಬಿಕ್ಕಟ್ಟಿನಿಂದಾಗಿ 10,000 ಒಂಟೆಗಳನ್ನು ಕೊಲ್ಲಲು ಸ್ಥಳೀಯ ಆಡಳಿತ ನಿರ್ಧರಿಸಿದೆ. ಆಡಳಿತದ ಪ್ರಕಾರ, ಕಾಡಿನಲ್ಲಿ ಭಾರಿ ಬೆಂಕಿಯಿಂದಾಗಿ ಒಂಟೆಗಳು ವಸತಿ ಪ್ರದೇಶಗಳನ್ನು ತಲುಪುತ್ತಿವೆ. ಬೆಂಕಿಯ ಸುತ್ತಲಿನ ಶಾಖದಿಂದಾಗಿ ಈ ಒಂಟೆಗಳು ಹೆಚ್ಚು ನೀರು ಕುಡಿಯುತ್ತಿವೆ. ಈಗಾಗಲೇ, ನೀರಿನ ಬಿಕ್ಕಟ್ಟನ್ನು ಎದುರಿಸುತ್ತಿರುವ ಪ್ರದೇಶಗಳಲ್ಲಿ ಇದು ಮತ್ತೊಂದು ರೀತಿಯ ಸಮಸ್ಯೆಯನ್ನು ಉಂಟುಮಾಡಿದೆ ಎಂದು ಅಂದಾಜಿಸಲಾಗಿದೆ..

 

ನಾವು ಈಗಾಗಲೇ ನಮ್ಮ ಮನೆಗಳಲ್ಲಿ ಸಿಲುಕಿಕೊಂಡಿದ್ದೇವೆ. ನೀರಿನ ಬಿಕ್ಕಟ್ಟಿನಿಂದಾಗಿ ಜನರು ತಮ್ಮ ಅಗತ್ಯಗಳನ್ನು ಪೂರೈಸಲು ಎಸಿಯಿಂದ ನೀರನ್ನು ಸಂಗ್ರಹಿಸುತ್ತಾರೆ. ನಮ್ಮ ಮನೆಗಳಿಗೇ ನೀರು ಬರುವುದು ಕಷ್ಟ ಸಾಧ್ಯವಾಗಿರುವ ಈ ಸಂದರ್ಭದಲ್ಲಿ ಈ ಒಂಟೆಗಳು ಎಸಿಯಿಂದ ಹೊರಬರುವ ನೀರನ್ನು ಸಹ ಕುಡಿಯುತ್ತಿವೆ. ಈ ಸನ್ನಿವೇಶಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಈ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಒಟ್ಟಾರೆ ಮನುಷ್ಯರಂತೆ ಬದುಕಬೇಕಾದ ಪ್ರಾಣಿಗಳ ಮಾರಣ ಹೋಮ ನಡೆಸಬೇಕೆಂಬ ನಿರ್ಧಾರ ಅಮಾನವೀಯವೇ ಸರಿ.

LEAVE A REPLY

Please enter your comment!
Please enter your name here