ಲಾರಿ ಡ್ರೈವರ್ ಗಳು ಟೋಲ್ ಪಾವತಿ ಮಾಡದೆ ಸರ್ಕಾರಕ್ಕೆ ಮೋಸ ಮಾಡುತ್ತಿರುವುದಾದರು ಯಾಕೆ.?

0
146

ಇತ್ತೀಚಿನ ದಿನಗಳಲ್ಲಿ ಊರಿನಿಂದ ಊರಿಗೆ ಹೋಗುವಾಗ ಟೋಲ್ ಗಳನ್ನು ದಾಟಿಯೇ ಹೋಗಬೇಕಾಗಿದೆ. ಟೋಲ್ ಹಣವನ್ನು ಪಾವತಿ ಮಾಡಿ ನಂತರವೇ ಪ್ರಯಾಣ ಮಾಡಬೇಕಾಗಿದೆ. ಟೋಲ್ ನಲ್ಲಿ ಪ್ರತಿಭಾರಿಯೂ ಭಾರಿ ವಾಹನಗಳು ಸಾಲು ಸಾಲಾಗಿ ನಿಂತುಕೊಳ್ಳುತ್ತದೆ. ಇದರಿಂದ ವಾಹನಗಳ ಸಂಚಾರದ ಸಮಸ್ಯೆ ಜೊತೆ ಟೋಲ್ ನಲ್ಲಿ ವಾಹನಗಳ ಪರದಾಟ ಕೂಡ ಹೆಚ್ಚಿದೆ.! ಈ ಒಂದು ಸಮಸ್ಯೆಯನ್ನು ಬಗೆಹರಿಸಲು ಸರ್ಕಾರ ಫಾಸ್ಟ್ ಟ್ಯಾಗ್ ಗಳನ್ನು ಜಾರಿಗೆ ತಂದಿದೆ. ಫಾಸ್ಟ್ ಟ್ಯಾಗ್ ನಿಯಮವನ್ನು ಜಾರಿಗೆ ತಂದ ನಂತರ ಸಾಕಷ್ಟು ವಾಹನ ಸವಾರರು ನಿಯಮವನ್ನು ಪಾಲಿಸಲು ಹಿಂದೆಟು ಹಾಕಿದರು.

 

 

ಸರ್ಕಾರ ಈ ಒಂದು ನಿಯಮವನ್ನು ಶಿಸ್ತು ಬದ್ದವಾಗಿ ರೂಪಿಸಬೇಕು ಎಂದು ಖಡಕ್ ಆದೇಶ ಹೊರಡಿಸಿತ್ತು. ಆದರೆ ಹೆಚ್ಚು ಜನ ನಿರಾಸಕ್ತಿಯನ್ನು ತೋರಿದ ಕಾರಣಕ್ಕೆ ಈ ಗಡುವನ್ನು ಡಿಸೆಂಬರ್ 15 ರಿಂದ ಜನವರಿ 15 ರವರೆಗೆ ವಿಸ್ತರಿದೆ. ಸರ್ಕಾರದ ನಿಯಮದ ಪ್ರಕಾರ ಹಲವು ವಾಹನ ಸವಾರರು ಫಾಸ್ಟ್ ಟ್ಯಾಗ್ ಗಳ ಮುಖಾಂತರ ಟೋಲ್ ಹಣ ಪಾವತಿ ಮಾಡುತ್ತಿದ್ದಾರೆ. ಸರ್ಕಾರ ನೀಡಿರುವ ಪ್ರಕಟಣೆಯ ಪ್ರಕಾರ ಫಾಸ್ಟ್ ಟ್ಯಾಗ್ ಗಳನ್ನು ತೆಗೆದುಕೊಳ್ಳದೇ ಹೋದರೆ ದಂಡವನ್ನು ಹೇರಿಸಲಾಗುವುದು ಎಂಬ ಸೂಚನೆಯನ್ನು ಕೂಡ ತಿಳಿಸಿದೆ. ಇದರ ಬೆನ್ನಲ್ಲೇ ಜನಸಾಮಾನ್ಯರು ಫಾಸ್ಟ್ ಟ್ಯಾಗ್ ಗಳನ್ನು ಮಾಡಿಸಿಕೊಳ್ಳಲು ಕಡಿಮೆ ಸಮಯ ಇರುವ ಕಾರಣ ಮುಗಿಬಿದ್ದು ಫಾಸ್ಟ್ ಟ್ಯಾಗ್‍ಗಳನ್ನು ಖರೀದಿಸಲು ಮುಂದಾಗಿದ್ದಾರೆ.

 

 

ಈ ಒಂದು ಫಾಸ್ಟ್ ಟ್ಯಾಗ್‍ಗಳು ವಾಹನಗಳ ಮುಂಭಾಗದಲ್ಲಿರಬೇಕು.! ಇದನ್ನು ರೀಚಾರ್ಚ್ ಮಾಡಿಸಿಕೊಳ್ಳಬೇಕು. ಹೇಗೆ ಈ ಒಂದು ಟ್ಯಾಗ್ ಗಳನ್ನು ಸ್ಕ್ಯಾನರ್ ಗಳು ಗ್ರಹಿಸುತ್ತದೆ ಎಂದರೆ ವಾಹನಗಳು ಫಾಸ್ಟ್ ಟ್ಯಾಗ್‍ಗಳನ್ನು ಅಳವಡಿಸಿಕೊಂಡು ಪಾವತಿ ಮಾಡಲು ಬಂದಾಗ ಸ್ಕ್ಯಾನರ್ ಈ ಒಂದು ಫಾಸ್ಟ್ ಟ್ಯಾಗ್‍ಗಳನ್ನು ಗ್ರಹಿಸಿ, ವಾಹನಗಳ ಅನುಗುಣಕ್ಕೆ ತಕ್ಕ ಹಾಗೆ ಶುಲ್ಕವನ್ನು ಆಟೋಮ್ಯಾಟಿಕ್ ಪಾವತಿ ಮಾಡಿಸಿಕೊಳ್ಳುತ್ತದೆ. ಸರ್ಕಾರ ಈ ಒಂದು ಫಾಸ್ಟ್ ಟ್ಯಾಗ್‍ಗಳನ್ನು ಟೋಲ್ ಗಳಲ್ಲಿ ವಾಹನಗಳು ಕಾಯುವುದನ್ನು ನಿಯಂತ್ರಿಸಬೇಕು ಎಂಬ ನಿಟ್ಟಿನಲ್ಲಿ ರೂಪಿಸಿದೆ. ಆದರೆ ಇದರ ಉಪಯೋಗವನ್ನು ಬಳಸಿಕೊಳ್ಳದೆ ಲಾರಿ ಚಾಲಕರು ಟೋಲ್ ನಲ್ಲಿ ತಮ್ಮ ದುರ್ವತನೆ ಮೂಲಕ ಟೋಲ್ ಪಾವತಿಸದೆ, ಫಾಸ್ಟ್ ಟ್ಯಾಗ್‍ಗಳನ್ನು ಮೋಸದ ರೂಪದಲ್ಲಿ ಬಳಸಿಕೊಂಡು ಸರ್ಕಾರಕ್ಕೆ ವಂಚಿಸುತ್ತಿದ್ದಾರೆ.

 

 

2 ಬ್ಲಾಕ್ ಲಿಸ್ಟ್ ಆಗಿರುವ ಫಾಸ್ಟ್ ಟ್ಯಾಗ್‍ಗಳನ್ನು ಲಾರಿ ಚಾಲಕರು ಬಳಸಿದ್ದನ್ನು ಟೋಲ್ ಸಿಬ್ಬಂದಿ ಗಮನಿಸಿ ಲಾರಿ ಚಾಲಕರನ್ನು ಬಂಧಿಸಿದ್ದಾರೆ. ಈ ಜಾಲದ ಬಗ್ಗೆ ಪೊಲೀಸರು ಹೆಚ್ಚು ವಿವರಣೆಯನ್ನು ನೀಡಿದ್ದಾರೆ. ಲಾರಿ ಚಾಲಕರು ಟೋಲ್ ಸಿಬ್ಬಂದಿಯ ಮೇಲೆ ಹೆಚ್ಚಿನ ಒತ್ತಡ ನೀಡುತ್ತಿದ್ದು, ಅವರಿಗೆ ಬ್ಲಾಕ್ ಲಿಸ್ಟ್ ಆಗಿರುವ ಫಾಸ್ಟ್ ಟ್ಯಾಗ್‍ಗಳನ್ನು ಸ್ಕ್ಯಾನ್ ಮಾಡಿ ಮುಂದೆ ಹೋಗುತ್ತಿದ್ದಾರೆ. ಇದರ ಅರಿವು ಇಲ್ಲದ ಟೋಲ್ ಸಿಬ್ಬಂದ್ದಿಗಳು ವಿಧಿ ಇಲ್ಲದೆ ಅವರ ಬಳಿ ಶುಲ್ಕ ಕಟ್ಟಿಸಿಕೊಳ್ಳದೆ ಬಿಡುವ ಪರಿಸ್ಥಿತಿ ಎದುರಾಗಿದೆ. ಇದರಿಂದಾಗಿ ಪ್ರಾಧಿಕಾರಕ್ಕೆ ಹೆಚ್ಚಿನ ನಷ್ಟ ಉಂಟಾಗುತ್ತಿದೆ.

 

 

ಹೀಗಾಗಿ ಟೋಲ್ ಸಿಬ್ಬಂದಿಗಳು ಟೋಲ್ ಬಳಿ ಬರುವ ಲಾರಿಗಳಲ್ಲಿ 2 ಫಾಸ್ಟ್ ಟ್ಯಾಗ್‍ಗಳನ್ನು ಇದ್ದರೆ ಆ ವಾಹನವನ್ನು ಗುರುತಿಸಿ, ಪೊಲೀಸರ ವಶಕ್ಕೆ ಒಪ್ಪಿಸಲು ಸಜ್ಜಾಗಿದೆ. ಸದ್ಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ಈ ಒಂದು ಬ್ಲಾಕ್ ಲಿಸ್ಟ್ ಫಾಸ್ಟ್ ಟ್ಯಾಗ್‍ಗಳನ್ನು ಅಳವಡಿಸಿಕೊಂಡಿರುವ ಲಾರಿಗಳ ಹಿಂದೆ ಪೊಲೀಸರ ಹಿಂದೆ ಬಿದ್ದಿದ್ದಾರೆ.

LEAVE A REPLY

Please enter your comment!
Please enter your name here