ನಟಿ ಸರಿತಾ ದುಬೈಗೆ ಹೋಗಲು ಕಾರಣವೇನು? ಅವರ ಜೀವನದಲ್ಲಿ ಅಂಥಾದ್ದು ಏನಾಗಿತ್ತು ?

0
543

ಸಿನಿ ಲೋಕದಲ್ಲಿ ನೋಡಲು ಸುಂದರವಾಗಿದ್ದರೆ ಗ್ಲಾಮರಸ್ ಆಗಿದ್ದರೆ ಮಾತ್ರ ಬೆಳೆಯಲು ಸಾದ್ಯ! ಆಗ ಮಾತ್ರ ಪ್ರೇಕ್ಷಕರು ಒಪ್ಪಿಕೊಳ್ಳುತ್ತಾರೆ ಎಂದು ಮಾತನಾಡಿಕೊಳ್ಳುವ ಸಮಯದಲ್ಲಿ, ಕಪ್ಪಗಿದ್ದರೆ ವ್ಯಕ್ತಿಗೆ ಅದು ಮೈನಸ್ ಅಲ್ಲ ಪ್ಲಸ್ ಎಂದು ತೋರಿಸಿಕೊಟ್ಟವರು ನಟಿ ಸರಿತಾ.! ಆಕೆಯ ಕಣ್ಣುಗಳನ್ನು ನೋಡಿ ಸೋತವರೆಷ್ಟೋ, ಅವರ ಅಭಿನಯ ಮತ್ತು ವ್ಯಕ್ತಿತ್ವವವನ್ನು ನೋಡಿ ಈ ರೀತಿಯಾದ ಹುಡುಗಿ ನಮಗೆ ಸಿಗಬೇಕು ಎಂದು ಅದೆಷ್ಟೋ ಜನ ಕನಸು ಕಂಡಿದ್ದರು. ಕನ್ನಡ, ತೆಲುಗು, ತಮಿಳು, ಮಲೆಯಾಳ ಮುಚ್ಚಿಗೆ ಮರಗಳಲ್ಲಿ ವಿಜೃಂಭಿಸಿದ ಅವರಿಗೆ ವೈವಾಹಿಕ ಜೀವನ ಮಾತ್ರ ಕಹಿಯನ್ನು ನೀಡಿತು. ಅವರನ್ನು ಅರ್ಥ ಮಾಡಿಕೊಂಡು ಸಂಸಾರವನ್ನು ನಡೆಸುವ ಗಂಡ ಸಿಗಲೇ ಇಲ್ಲ.!

 

ಸರಿತಾ, ದಕ್ಷಿಣ ಭಾರತ ಕಂಡ ಹೆಮ್ಮೆಯ ನಟಿ. ಡಾಕ್ಟರ್ ರಾಜ್‍ಕುಮಾರ್ ಅವರಿಗೆ ಸತಿಯಾಗಿ, ಪುನೀತ್ ರಾಜ್‍ಕುಮಾರ್ ಅವರಿಗೆ ತಾಯಿಯಾಗಿ ನಟಿಸಿ ಕನ್ನಡಿಗರ ಮನಸ್ಸಿನಲ್ಲಿ ನೆಲೆಯೂರಿದ್ದಾರೆ. ಸರಿತಾ ಅವರ ಅಭಿನಯಕ್ಕೆ ಅವರೇ ಸಾಟಿ. ಯಾವದೇ ಪಾತ್ರ ನೀಡಿದರು ಅದನ್ನು ಅನುಭವಿಸಿ ಪರಕಾಯ ಪ್ರವೇಶ ಮಾಡಿ, ಪಾತ್ರಕ್ಕೆ ಜೀವತುಂಬುತ್ತಾರೆ. ಇನ್ನು ಅವರ ಭಾವನಾತ್ಮಕ ನಟನೆಯಂತು ಪ್ರೇಕ್ಷಕರ ಕಣ್ಣಂಚಲ್ಲಿ ನೀರು ತುಂಬಿಸುವುದಂತು ಸತ್ಯ. ಕನ್ನಡ, ತೆಲುಗು, ತಮಿಳು,ಮಲಯಾಳಂ ಬಾಷೆಗಳಲ್ಲಿ ಸುಮಾರು 250 ಚಿತ್ರಗಳಲ್ಲಿ
ಅಭಿನಯಿಸಿ, 80ರ ದಶಕದಲ್ಲಿ ಸಾಕಷ್ಟು ಜನಪ್ರಿಯತೆ ಮತ್ತು ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ನಟಿ ಸರಿತಾ,

 

ಮದುವೆ ಎಂದರೇನು ಸಂಸಾರವನ್ನು ಹೇಗೆ ತೂಗಬೇಕು ಎಂದು ಗೊತ್ತಿಲ್ಲದ ವಯಸ್ಸಿನಲ್ಲಿ (14ನೇ ವಯ್ಯಸ್ಸು) ನಟ ವೆಂಕಟಸುಬ್ಬಯ್ಯ ಅವರಿಗೆ ಕೊಟ್ಟು ಕುಟುಂಬದವರು ಮದುವೆ ಮಾಡಿದರು. ಆಗಿನ್ನೂ ಪ್ರೌಢಶಾಲೆಯನ್ನು ವ್ಯಾಸಂಗ ಮಾಡುತ್ತಿದ್ದ ಸರಿತಾ ಅವರು ವಿಧಿಯಿಲ್ಲದೆ ತನ್ನ ಪತಿಯ ಜತೆ ಚೆನ್ನೈನಲ್ಲಿ ವಾಸವಾದರು. ವಿಪರ್ಯಾಸವೆಂದರೆ ತನ್ನ ಗಂಡ ವೆಂಕಟಸುಬ್ಬಯ್ಯ ಅವರಿಗೆ 35 ವರ್ಷ ಸರಿತಾ ಅವರಿಗೆ 14 ವರುಷ , ಆದುದರಿಂದ ಹೊಂದಾಣಿಕೆಯಾಗಲಿಲ್ಲ. ಇದರ ಜೊತೆಗೆ ಪತಿಯ ಹಿಂಸೆ ಬೇರೆ, ಇವೆಲ್ಲವನ್ನು ಸಹಿಸಲಾರದ ಅವರು ತವರು ಮನೆಗೆ ವಾಪಸ್ಸು ಬಂದು ಬಿಡುತ್ತಾರೆ.

 

ಕೆಲವು ದಿನಗಳ ಕಾಲ ಸುಮ್ಮನಿದ್ದ ಪತಿ ವೆಂಕಟ ಸುಬ್ಬಯ್ಯ ತನ್ನ ಹೆಂಡತಿಯನ್ನು ನನ್ನ ಮನೆಗೆ ಕಳುಹಿಸಿಕೊಡಿ ಎಂದು ಕೋರ್ಟ್ ಮೆಟ್ಟಿಲೇರುತ್ತಾರೆ . ಇದಕ್ಕೆ ಪ್ರತಿಕ್ರಿಯಿಸಿದ ಸರಿತಾ ಅದು ಮದುವೆಯೇ ಅಲ್ಲ ಅವರ ಜೊತೆ ನಾನು ಹೋಗುವುದಿಲ್ಲ ಎಂದು ವಾದಿಸುತ್ತಾರೆ. ಇವೆಲ್ಲವನ್ನೂ ನೋಡಿದ ಕೋರ್ಟ್ ಸರಿತಾ ಅವರ ವಾದಕ್ಕೆ ಬೆಲೆ ನೀಡಿ ವಿಚ್ಛೇದನವನ್ನು ಮಂಜೂರು ಮಾಡುತ್ತದೆ. ಮೊದಲ ಮದುವೆಯ ಕಹಿ ನೆನಪುಗಳಿಂದ ಹೊರಬರಲು ಬಹಳ ಸಮಯವನ್ನು ತೆಗೆದುಕೊಂಡ ನಟಿ ಸರಿತಾ. ನಂತರ ಚಿತ್ರರಂಗಕ್ಕೆ ಪ್ರವೇಶ ಮಾಡುತ್ತಾರೆ.

 

ನಂತರ ದಶಕಗಳ ಕಾಲ ಚಿತ್ರರಂಗವನ್ನು ಆಳಿದ ಅವರು, ಹನ್ನೆರಡು ವರ್ಷಗಳ ನಂತರ ಮಲೆಯಾಳಂನ ಖ್ಯಾತ ನಟ ಮುಖೇಶ್ ಅವರನ್ನು ಪ್ರೀತಿಸಿ ವಿವಾಹವಾಗುತ್ತಾರೆ. ವಿವಾಹವಾದ ಕೆಲವು ವರ್ಷಗಳು ಇಬ್ಬರೂ ಅನ್ಯೋನ್ಯವಾಗಿ ಸುಖ ಜೀವನವನ್ನು ನಡೆಸುತ್ತಾರೆ. ಅಲ್ಲದೆ ಈ ದಂಪತಿಗಳಿಗೆ ಇಬ್ಬರು ಗಂಡುಮಕ್ಕಳು ಜನಿಸುತ್ತಾರೆ. ಕಾಲಗಳು ಉರುಳಿದಂತೆ ನಟ ಮುಖೇಶ್ ತನ್ನ ಸತಿಯನ್ನು ಅಭಿನಯ ಮಾಡುವುದಕ್ಕೆ ಅವಕಾಶ ಕೊಡುವುದಿಲ್ಲ. ಉತ್ತಮ ಹಾಗೂ ಸಾಂಸಾರಿಕ ಪಾತ್ರಗಳನ್ನು ಸಹ ಅಭಿನಯಿಸಲು ಅವಕಾಶ ನೀಡುವುದಿಲ್ಲ.

 

ಸಿನಿಮಾ ರಂಗವನ್ನು ತ್ಯಜಿಸಿ ಪತಿ ಮತ್ತು ಮಕ್ಕಳೊಂದಿಗೆ ಸುಖ ಜೀವನ ನಡೆಸೋಣ ಎಂದುಕೊಂಡರೆ, ಪ್ರತಿನಿತ್ಯ ಮುಖೇಶ್ ಕುಡಿದು ಬಂದು ಸರಿತಾ ಅವರನ್ನು ಹೊಡೆಯುತ್ತಿದ್ದರಂತೆ. ತನ್ನ ಪತಿ ದೈಹಿಕ ಹಾಗೂ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ ಎಂದು ಒಂದು ಸಂದರ್ಶನದಲ್ಲಿ ಸರಿತಾ ಅವರೇ ಹೇಳಿಕೊಂಡಿದ್ದಾರೆ. ಇನ್ನು ಇವರೊಂದಿಗೆ ಜೀವನ ನಡೆಸಿದರೆ ಅವರು ಕೊಡುವ ಕಷ್ಟಗಳನ್ನು ಸಹಿಸಿಕೊಳ್ಳಲು ಆಗುವುದಿಲ್ಲ ಎಂದು ತನ್ನ ಮಕ್ಕಳೊಂದಿಗೆ ದುಬೈಗೆ ಹೊರಟು ಹೋದ ಸರಿತಾ ಅಲ್ಲಿ ಅವರಿಗೆ ಒಳ್ಳೆಯ ಶಿಕ್ಷಣ ಕೊಡಿಸುತ್ತಿದ್ದಾರೆ.

 

ಸರಿತಾ ಅವರು ದುಬೈಗೆ ಹೋಗಿ ವರ್ಷಗಳು ಕಳೆದಂತೆ ನಟ ಮುಖೇಶ್ ಮತ್ತೊಂದು ವಿವಾಹವಾಗುತ್ತಾರೆ. ನಂತರ 2011ರಲ್ಲಿ ಮುಖೇಶ್ ಅವರಿಗೆ ವಿಚ್ಛೇದನವನ್ನು ನೀಡಿ ತನ್ನ ಮಕ್ಕಳೇ ನನ್ನ ಜೀವನ ಎಂದು ಬದುಕನ್ನು ಸಾಗಿಸುತ್ತಿದ್ದಾರೆ. ಹಿರಿಯ ಮಗ ಎಂಬಿಬಿಎಸ್ ಮಾಡುತ್ತಿದ್ದರೆ, ಮತ್ತೊಬ್ಬ ಮಗ ನ್ಯೂಜಿಲೆಂಡ್ ನಲ್ಲಿ ಎಂಬಿಎ ಮಾಡುತ್ತಿದ್ದಾನೆ. ಅಪ್ಪ ಕೈಬಿಟ್ಟರೂ ಹೆತ್ತ ತಾಯಿ ಕೈಬಿಡದೆ ಮಕ್ಕಳನ್ನೇ ಜೀವನವೆಂದು ಬದುಕಿ ಅವರಿಗೆ ಉತ್ತಮ ಭವಿಷ್ಯವನ್ನು ರೂಪಿಸಿಕೊಟ್ಟಿದ್ದಾರೆ. ಇನ್ನು ಮುಂದೆ ಮಕ್ಕಳು ಸರಿತಾ ಅವರನ್ನು ಚೆನ್ನಾಗಿ ನೋಡಿಕೊಂಡು ಕಹಿ ನೆನಪುಗಳನ್ನು ಮರೆಸಲಿ ಎಂಬುದು ನಮ್ಮ ಆಶಯ.

LEAVE A REPLY

Please enter your comment!
Please enter your name here