ಗೃಹ ಸಚಿವಾಲಯದ ನಿಯಮದ ಪ್ರಕಾರ ಹಾಲಿ ಪ್ರಾಧಾನಿಗಳು,ಮಾಜಿ ಪ್ರಾಧಾನಿಗಳು ಮತ್ತು ಅವರ ಕುಟುಂಬಕ್ಕೆ ಎಸ್.ಪಿ.ಜಿ ಭದ್ರತೆ ಸಿಗುತ್ತದೆ. ಪ್ರಧಾನಿಗಳು ಮಾಜಿ ಆದರು ಕೂಡ ಹತ್ತು ವರುಷಗಳ ಕಾಲ ಈ ಭದ್ರತೆಯನ್ನು ಪಡೆದುಕೊಳ್ಳುತ್ತಿದ್ದರು.ಆದರೆ ಹಂತಹಂತವಾಗಿ ಇದರಲ್ಲಿ ಬದಲಾವಣೆಗಳಾಗಿ ಸದ್ಯ 4 ಮುಖಂಡರಿಗೆ ಮಾತ್ರ ಈ ಭದ್ರತೆಯನ್ನು ಪಡೆದುಕೊಳ್ಳುತ್ತಿದ್ದಾರೆ.

ಸ್ಪೆಶಲ್ ಪ್ರೋಟೆಕ್ಷನ್ ಗ್ರೂಪ್ನಲ್ಲಿ ಒಟ್ಟು 3500 ಸಿಬ್ಬಂಧಿಗಳು ಕೆಲಸ ಮಾಡುತ್ತಿದ್ದಾರೆ! ಕಳೆದ ವರ್ಷ ನಿಧನರಾದ ಅಟಲ್ ಬಿಹಾರಿ ವಾಜುಪೇಯಿ ಅವರಿಗು ಸಹ ಕೊನೆಯ ವರೆಗೂ ಈ ಭದ್ರತೆಯನ್ನು ನೀಡಲಾಗಿತ್ತು! ಈಗ ಹಾಲಿ ಪ್ರಾಧನಿ,ವಿಶ್ವಜನಪ್ರಿಯರಲ್ಲಿ ಒಬ್ಬರಾದ ನರೇಂದ್ರ ಮೋದಿ ಅವರಿಗೆ ಈ ರಕ್ಷಣೆ ಸಿಗುತ್ತಿದೆ. ಹಾಲಿ ಪ್ರಾಧನಿಗೆ ಈ ರಕ್ಷಣೆ ಸಿಗುವುದು ಗೃಹ ಸಚಿವಾಲಯದ ನಿಯಮಾವಳಿ. ಜೊತೆಗೆ ವಿವಿದ ಉಗ್ರ ಸಂಘಟನೆಗಳ ಬೆದರಿಕೆ ಇರುವುದರಿಂದ ಮೋದಿಯವರಿಗೆ ಈ ರಕ್ಷಣೆ ಸಿಗುತ್ತಿದೆ.

ಇನ್ನು ಎ.ಎ.ಐ.ಸಿ ಹಂಗಾಮಿ ಅಧ್ಯಕ್ಷೇ ಸೋನಿಯಾ ಗಾಂಧಿ ಅವರಿಗೂ ಕೂಡ ಎಸ್.ಪಿ.ಜಿ ರಕ್ಷಣೆ ಸಿಗುತ್ತಿದೆ. ವಿ ಪಿ ಸಿಂಗ್ ಪ್ರಾಧನಿಯಾಗಿದ್ದ ವೇಳೆ ರಾಜೀವ್ ಗಾಂಧಿ ಅವರಿಗೆ ನೀಡಿದ್ದ ಭದ್ರತೆಯನ್ನು ಹಿಂದಕ್ಕೆ ಪಡೆಯಲಾಗಿತ್ತು. ತಮಿಳುನಾಡಿನಲ್ಲಿ ರಾಜೀವ್ ಗಾಂಧಿ ಅವರು ಆತ್ಮಹುತಿ ದಾಳಿಗೆ ಬಲಿಯಾದ ವೇಳೆ ಚಂದ್ರಶೇಕರ್ ಪ್ರಧಾನಿಯಾಗಿದ್ದರು.ಇದಾದ ಮೇಲೆ ಎಲ್ಲಾ ಮಾಜಿ ಪ್ರಧಾನಿ ಮಂತ್ರಿ ಕುಟುಂಬಕ್ಕು ಈ ಭದ್ರತೆ ಸಿಕ್ಕಿದೆ. ಇದು ಈಗ ಸೋನ್ಯಾ ಗಾಂಧಿ ಅವರಿಗೆ ನೀಡಲಾಗಿದೆ.ಇನ್ನು ಕಾಂಗ್ರೇಸ್ನ ಮಾಜಿ ಅದ್ಯಕ್ಷ ರಾಹುಲ್ ಗಾಂಧಿ ಅವರಿಗೂ ಸಹ ಈ ರಕ್ಷಣೆ ದೊರಕಿದೆ. ಇನ್ನು ಪ್ರಿಯಾಂಕ ಗಾಂಧಿ ಅವರು ಸಹ ಈ ರಕ್ಷಣೆಯಲ್ಲಿದ್ದಾರೆ.
