ವಿದ್ಯಾಬಾಲನ್, ಬಾಲಿವುಡ್ನ ಒಬ್ಬ ಪ್ರತಿಭಾವಂತ ನಟಿ. ಎಂತಹ ಪಾತ್ರಕ್ಕು ತಮ್ಮದೇ ಆದ ಜೀವತುಂಬುವ ವಿದ್ಯಾಬಾಲನ್,ಅಂದಿನ ಪರಿಣಿತ' ಇಂದ,ಇಂದಿನ
ಮಿಷನ್ ಮಂಗಲ್’ ತನಕ ಸಾಕಷ್ಟು ಏಳು-ಬೀಳುಗಳನ್ನು ಕಂಡಿದ್ದಾರೆ. ಹೀಗಿದ್ದರು ಒಮ್ಮೆಯೂ ಹಿಂತಿರುಗಿ ನೋಡದ ವಿದ್ಯಾಬಾಲನ್ಗೆ ದಷಿಣ ಭಾರತದ ನಿರ್ಮಾಪಕರೊಬ್ಬರು ಸದಾ ಕಾಡುತ್ತಿರುತ್ತಾರಂತೆ. ಹೀಗಂತಾ ಸ್ವತಃ ವಿದ್ಯಾಬಾಲನ್ ಅವರು ಖಾಸಗಿ ಮಾದ್ಯಮ ಸಂದರ್ಶನದಲ್ಲಿ ತಮ್ಮ ನೋವನ್ನು ಹೊರಹಾಕಿದ್ದಾರೆ.ದಷಿಣ ಭಾರತೀಯ ಚಿತ್ರರಂದಲ್ಲಿ ಒಂದಾದ ತಮಿಳು ಚಿತ್ರರಂಗದಲ್ಲಿ ತನಗಾದ ಕರಾಳ ಅನುಭವವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಒಬ್ಬ ತಮಿಳು ನಿರ್ಮಾಪಕ ತನ್ನನ್ನು ಸಿನಿಮಾದಲ್ಲಿ ಹಾಕಿಕೊಳ್ಳುವುದಾಗಿ ಕೈ ಕೊಟ್ಟ. ತಮ್ಮ ತಂದೆ-ತಾಯಿ ಬೇಡಿಕೊಂಡರು ಸ್ಪಂದಿಸಲಿಲ್ಲ ಎಂದು ನೆನಪು ಮಾಡಿಕೊಡಿದ್ದಾರೆ. ನಾನು ಯಾವತ್ತು ಆ ನಿರ್ಮಾಪಕರನ್ನು ಕ್ಷಮಿಸುವುದಿಲ್ಲ ಎಂದು ಹೇಳಿದ್ದಾರೆ. ಇನ್ನು ನಿರ್ಮಾಪಕರ ಬೇಡಿಕಿಗೆ ಸ್ಪಂದಿಸಿಲ್ಲ ಎನ್ನುವ ಕಾರಣಕ್ಕಾಗಿ ಸಾಕಷ್ಟು ಸಿನಿಮಾಗಳು ನನ್ನ ಕೈ ತಪ್ಪಿ ಹೋದವು.ನನ್ನ ಬದಲಾಗಿ ಬೇರೆ ನಟಿಯರನ್ನು ಹಾಕಿಕೊಳ್ಳಲಾಯಿತು ಎಂದು ತಮ್ಮ ಕರಾಳದಿನವನ್ನ ಬಿಚ್ಚಿಟ್ಟಿದ್ದಾರೆ. ಒಟ್ಟಾರೆ ಅಂದು ತಿರಸ್ಕಾರಕ್ಕೆ ಒಳಗಾಗಿದ್ದ ವಿದ್ಯಾಬಾಲನ್ ಇಂದು ಯಾರು ಉಹಿಸದಷ್ಟು ಎತ್ತರಕ್ಕೆ ಬೆಳೆದಿದ್ದಾರೆ.ಇನ್ನು ಸಿನಿಮಾದಲ್ಲಿ ನಟಿಸಬೇಕು ಎಂದು ಆಸೆಯಿಂದ ಬಂದ ವಿದ್ಯಾಬಾಲನ್ ಎದುರಿಸಿದ ನೋವು ನಿಜಕ್ಕು ಸಿನಿಮಾರಂಗ ನಾಚಿಕೊಳ್ಳುವಂತಾಗಿದೆ.
