ಕೊರೊನಾ ಸಂಕಷ್ಟದಲ್ಲಿ ಜನರಿಗೆ ಅನ್ನ ನೀಡಿದ್ದ ಮುನಿರತ್ನ… ಮಾನವೀಯತೆಗೆ ಮತ ನೀಡಿ ಎಂದ ಚಾಲೇಂಜಿಂಗ್ ಸ್ಟಾರ್…

0
58

ರಾಜ್ಯದಲ್ಲಿ ಉಪಚುನಾವಣಾ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಮಿನಿ ಸಮರ ಸ್ಟಾರ್ ವಾರ್ ಆಗಿ ಮಾರ್ಪಟ್ಟಿದೆ. ನ.3ರಂದು ಶಿರಾ ಹಾಗೂ ರಾಜರಾಜೇಶ್ವರಿ ನಗರದಲ್ಲಿ ಉಪಚುನಾವಣೆ ನಡೆಯಲಿದ್ದು, ಬಿಜೆಪಿ-ಕಾಂಗ್ರೆಸ್-ಜೆಡಿಎಸ್ ಮೂರು ಪಕ್ಷಗಳಿಗೆ ಪ್ರತಿಷ್ಠಿಯ ಕಣವಾಗಿದೆ. ಪ್ರಮುಖವಾಗಿ ಆರ್.ಆರ್.ನಗರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ನಡುವೇ ನೇರ ಪೈಪೋಟಿ ಆರಂಭವಾಗಿದೆ. ಮತದಾರರ ವೋಲೈಕೆಗಾಗಿ ಅಭ್ಯರ್ಥಿಗಳು, ರಾಜಕೀಯ ನಾಯಕರು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ’ಕೈ’ ಅಭ್ಯರ್ಥಿ ಕುಸುಮಾ ಕಣ್ಣೀರಿಟ್ಟು ಮತ ಕೇಳುತ್ತಿದ್ದರೆ, ಬಿಜೆಪಿ ಅಭ್ಯರ್ಥಿ ತಾರಾ ಪ್ರಚಾರಕರನ್ನೇ ಕರೆತಂದು ಕ್ಷೇತ್ರಾದ್ಯಂತ ತಮ್ಮ ಪರವಾಗಿ ಮತಯಾಚನೆ ಮಾಡಿಸಿದ್ದಾರೆ.

ಎರಡು ದಿನಗಳ ಹಿಂದೆ ದಕ್ಷಿಣದ ಖ್ಯಾತ ನಟಿ ಖುಷ್ಭೂ ಮುನಿರತ್ನ ಪರ ಚುನಾವಣಾ ಪ್ರಚಾರ ಮಾಡಿ ಹೋಗಿದ್ದರು. ಇದೀಗ ಮಿನಿ ಕುರುಕ್ಷೇತ್ರ ಎಂದೇ ಬಿಂಬಿತವಾಗಿರುವ ಆರ್.ಆರ್.ನಗರ ಅಖಾಡಕ್ಕೆ ಚಾಲೇಂಜಿಂಗ್ ಸ್ಟಾರ್ ದರ್ಶನ್ ಎಂಟ್ರಿ ಕೊಟ್ಟಿದ್ದು, ಭರ್ಜರಿ ರೋಡ್ ಶೋ ಮೂಲಕ ಚುನಾವಣಾ ಪ್ರಚಾರ ನಡೆಸಿದರು. ನಟಿ ಅಮೂಲ್ಯ, ರಾಕ್ ಲೈನ್ ವೆಂಕಟೇಶ್ ಸೇರಿದಂತೆ ಹಲವು ತಾರೆಯರು ಮುನುರತ್ನ ಪರ ಚುನಾವಣಾ ಪ್ರಚಾರದಲ್ಲಿ ದರ್ಷನ್ ಗೆ ಸಾಥ್ ನೀಡಿದರು.

ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ದರ್ಶನ್, ನಾನು ಪಕ್ಷ ಅಥವಾ ವ್ಯಕ್ತಿಯನ್ನು ನೋಡಿ ಬಂದಿಲ್ಲ. ಮುನಿರತ್ನ ಅವರ ಮಾನವೀಯತೆ ದೃಷ್ಟಿಗೆ ಬಂದಿದ್ದೇನೆ. ಕೊರೊನಾ ಸಂಕಷ್ಟದ ಸಮಯದಲ್ಲಿ ಅಕ್ಕಿ, ಆಹಾರ ಕಿಟ್ ಗಳನ್ನು ನೀಡಿದ್ದರು. ಕೊರೊನಾ ಲಾಕ್ ಡೌನ್ ವೇಳೆ ಹಲವರು ಅನ್ನ-ಆಹಾರವಿಲ್ಲದೇ ಪರದಾಡಿದ್ದರು. ಅಂತಹ ಕಠಿಣ ಸ್ಥಿತಿತಲ್ಲಿ ಮುನಿರತ್ನ ಅನ್ನದಾಸೋಹವನ್ನೇ ಮಾಡಿ ಸಂಕಷ್ಟಲ್ಲಿರುವ ಜನರಿಗೆ ಹೊಟ್ಟೆ ತುಂಬಾ ಊಟ ಕೊಟ್ಟು ಮಾನವೀಯತೆ ಮೆರೆದಿದ್ದಾರೆ. ಅವರಲ್ಲಿನ ಆ ಮಾನವೀತೆ, ದೊಡ್ಡತನ ನೋಡಿ ನಾನು ಅವರ ಪರ ಪ್ರಚಾರ ಮಾಡಲು ಬಂದಿದ್ದೇನೆ ಎಂದರು.

ಕೊರೊನಾದಂತ ಸಂದರ್ಭದಲ್ಲಿ ಊಟವನ್ನು ನೀಡಿದ ಮುನಿರತ್ನ ಅವರಿಗೆ ಮತ ನೀಡಿ, ಅವರು ಆರ್.ಆರ್.ನಗರದ ಇನ್ನಷ್ಟು ಅಭಿವೃದ್ಧಿಗಳನ್ನು ಮಾಡಿ, ನಿಮ್ಮ ಸೇವೆ ಮಾಡುವ ಅವಕಾಶವನ್ನು ನೀಡಿ ಎಂದು ಮತದಾರರಲ್ಲಿ ದರ್ಶನ್ ವಿನಂತಿ ಮಾಡಿದರು.

ಇದೇ ವೇಳೆ ಮಧ್ಯಾಹ್ನ ತಾರಾ ಪ್ರಚಾರಕರಿಗಾಗಿ ಕಂದಾಯ ಸಚಿವ ಆರ್.ಅಶೋಕ್ ಮನೆಯಲ್ಲಿ ಭರ್ಜರಿ ಭೂಜನದ ವ್ಯವಸ್ಥೆ ಮಾಡಲಾಗಿತ್ತು. ನಟ ದರ್ಶನ್, ಅಮೂಲ್ಯ, ರಾಕ್ ಲೈನ್ ವೆಂಕಟೇಶ್, ಮುನಿರತ್ನ ಅಪ್ಪಟ ಸಸ್ಯಾಹಾರ ಚಪಾತಿ-ಪಲ್ಯ, ಮುದ್ದೆ-ಸಾರು, ಈರುಳ್ಳಿ ಪಕೋಡ ಭೂರಿಭೋಜನ ಸವಿದರು.

LEAVE A REPLY

Please enter your comment!
Please enter your name here