ಯಾವ ಸಚಿವರಿಗೆ ಯಾವ ಖಾತೆ..? ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್

0
636

ರಾಜ್ಯ ಬಿಜೆಪಿ ಸರಕಾರದ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿರುವ 17 ಸಚಿವರಿಗೆ ಖಾತೆ ಹಂಚಿಕೆ ಮಾಡಿರುವ ಪಟ್ಟಿಯನ್ನು ಸಿಎಂ ಬಿಎಸ್ ಯಡಿಯೂರಪ್ಪ ನಿರೀಕ್ಷೆಯಂತೆ ಇಂದು ರಾಜಭವನಕ್ಕೆ ರವಾನಿಸಿದ್ದಾರೆ.

ಇನ್ನು ಮುಖ್ಯಮಂತ್ರಿ ಯಡಿಯೂರಪ್ಪ ಗೃಹ ಕಚೇರಿ ಕೃಷ್ಣಾದಿಂದ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿ ರಾಜ್ಯಪಾಲ ವಜೂಭಾಯಿ ವಾಲಾ ಅವರಿಗೆ ಕಳುಹಿಸಿಕೊಡಲಾಗಿದ್ದು, ಏತನ್ಮಧ್ಯೆ ಅತೃಪ್ತ ಶಾಸಕರ ಮನವೊಲಿಕೆಗೆ ಬಿಎಸ್ ಯಡಿಯೂರಪ್ಪ ಮುಂದಾಗಿದ್ದಾರೆ. ಜೊತೆಗೆ ತಮ್ಮ ಆಪ್ತ ಶಾಸಕರ ಬಳಿ ಈ ಹಂತದಲ್ಲಿ ಬಂಡಾಯ ಏಳದಂತೆ ಮನವಿ ಮಾಡಿಕೊಂಡಿದ್ದಾರೆ. ಸಾಕಷ್ಟು ಅಳೆದುತೂಗಿ ಖಾತೆ ಹಂಚಿಕೆ ಮಾಡಲಾಗಿದೆ. ಆದರು ಬಿಜೆಪಿ ವಲಯದಲ್ಲಿ ಖಾತೆ ಹಂಚಿಕೆಯ ಬಗ್ಗೆಯೂ ಅಪಸ್ವರ ಕೇಳಿ ಬಂದಿದೆ.

ಖಾತೆ ಹಂಚಿಕೆಯ ವಿವರ

೧.ಶಶಿಕಲಾ ಜೊಲ್ಲೆ – ಮಹಿಳಾ ಮತ್ತು ಮಕ್ಕಳ ಕಲ್ಯಾಣ.
೨. ಶ್ರೀರಾಮುಲು- ಆರೋಗ್ಯ.
೩. ಸಿ.ಸಿ ಪಾಟೀಲ್ -ಗಣಿ ಮತ್ತು ಭೂವಿಜ್ಞಾನ.
೪. ಕೆ.ಎಸ್. ಈಶ್ವರಪ್ಪ- ಸಮಾಜ ಕಲ್ಯಾಣ.
೫. ಜಗದೀಶ್ ಶೆಟ್ಟರ್- ಬೃಹತ್ ಕೈಗಾರಿಕಾ.
೬. ಬಸವರಾಜ ಬೊಮ್ಮಾಯಿ- ಇಂಧನ.

೭. ಆರ್ ಅಶೋಕ್ – ಕಂದಾಯ.
೮. ಡಾಕ್ಟರ್ ಅಶ್ವತ್ಥ್ ನಾರಾಯಣ -ಗೃಹ.
೯. ವಿ.ಸೋಮಣ್ಣ- ವಸತಿ.
೧೦. ಲಕ್ಷ್ಮಣ ಸವದಿ-ಸಹಕಾರ.
೧೧.ಜೆ.ಸಿ.ಮಾಧುಸ್ವಾಮಿ-ಸಂಸದೀಯ ವ್ಯವಹಾರ.
೧೨. ಗೋವಿಂದ ಕಾರಜೋಳ- ಲೋಕೋಪಯೋಗಿ.

LEAVE A REPLY

Please enter your comment!
Please enter your name here