ಅರೆ….ಹುಡುಗಿಯಂತೆ ವೇಷ ಧರಿಸಿರುವ ಈ ನಟ ಯಾರು…?

0
163

ಒಂದು ಸಿನಿಮಾಗೆ ಒಪ್ಪಿಕೊಂಡ ಮೇಲೆ ನಟ-ನಟಿಯರು ಯಾವುದೇ ಪಾತ್ರ ಮಾಡಲು ಸಿದ್ಧರಿರಬೇಕು. ದಪ್ಪ ಎಂದರೆ ದಪ್ಪವಾಗಬೇಕು. ಸಣ್ಣ ಎಂದರೆ ಸಣ್ಣವಾಗಬೇಕು. ಇನ್ನು ಮಹಿಳೆ ವೇಷ ಧರಿಸಲು ಕೂಡಾ ಸಿದ್ಧರಿರಬೇಕು.

 

ಈ ಫೋಟೋದಲ್ಲಿರುವ ನಟ ಥೇಟ್ ನೋಡಲು ಹುಡುಗಿಯಂತೇ ಕಾಣುತ್ತಿದ್ದಾರೆ. ಅದೂ ಕೂಡಾ ನೋಡಿದ ಕೂಡಲೇ ಎಲ್ಲರೂ ಈಕೆ ಆಲಿಯಾ ಭಟ್ ತಾನೇ ಎಂದುಕೊಳ್ಳುವುದು ಗ್ಯಾರಂಟಿ. ಆದರೆ ಇದು ಬಾಲಿವುಡ್ ನಟ ರಾಜ್‍ಕುಮಾರ್ ರಾವ್. ಅನುರಾಗ್ ಬಸು ನಿರ್ದೇಶನದ ‘ಲುಡೋ’ ಎಂಬ ಸಿನಿಮಾಗಾಗಿ ರಾಜ್‍ಕುಮಾರ್ ಹೆಣ್ಣಿನ ವೇಷ ಧರಿಸಿದ್ದಾರೆ. ಈ ಫೋಟೋ ಕೂಡಾ ‘ಲುಡೋ’ ಚಿತ್ರದ ಫಸ್ಟ್‍ಲುಕ್.

 

ಫೋಟೋ ನೋಡಿದವರು ನಿಜಕ್ಕೂ ಈತ ನಟ ಎಂದು ಹೇಳಲು ಸಾಧ್ಯವೇ ಇಲ್ಲ. ಈ ಫೋಟೋಗೆ ನೆಟಿಜನ್ಸ್ ವಿಧವಿಧವಾಗಿ ಕಮೆಂಟ್ ಮಾಡುತ್ತಿದ್ದಾರೆ. ‘ಲುಡೋ’ ಚಿತ್ರವನ್ನು ಭೂಷಣ್ ಕುಮಾರ್ ನಿರ್ಮಿಸುತ್ತಿದ್ದಾರೆ. ಪ್ರಮುಖ ಪಾತ್ರದಲ್ಲಿ ಅಭಿಷೇಕ್ ಬಚ್ಚನ್ ನಟಿಸುತ್ತಿದ್ದು ಈ ಕಾಮಿಡಿ ಸಿನಿಮಾ ಏಪ್ರಿಲ್‍ನಲ್ಲಿ ತೆರೆ ಕಾಣಲಿದೆ.

LEAVE A REPLY

Please enter your comment!
Please enter your name here