ಬ್ರೆಸ್ಟ್ ಕ್ಯಾನ್ಸರ್ನಿಂದ ಬಳಲುತ್ತಿದ್ದ ಗೌತಮಿ ಈಗ ಎಲ್ಲಿದ್ದಾರೆ…ಅವರ ವೈಯಕ್ತಿಕ ಜೀವನ ಹೇಗಿದೆ..?

0
892

ಸಂತಸ ಅರಳುವ ಸಮಯ…ಮರೆಯೋಣ ಚಿಂತೆಯ… ಎಂದು ರೆಬಲ್ ಸ್ಟಾರ್ ಅಂಬರೀಶ್ ಜೊತೆ ಡ್ಯೂಯೆಟ್ ಹಾಡಿದ ಗೌತಮಿ ನಿಮಗೆಲ್ಲಾ ಗೊತ್ತು. ‘ಏಳು ಸುತ್ತಿನ ಕೋಟೆ’ ಚಿತ್ರದ ಮೂಲಕ ಕನ್ನಡಕ್ಕೆ ಬಂದ ಗೌತಮಿ, ನಂತರ ಸಾಹಸ ವೀರ, ಚಿಕ್ಕೆಜಮಾನ್ರು, ಚೆಲುವ ಸೇರಿ ನಾಲ್ಕೈದು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದರು.

4 ವರ್ಷಗಳಿಂದ ಸಿನಿಮಾಗಳಿಂದ ದೂರವೇ ಉಳಿದಿದ್ದ ಗೌತಮಿ ಇದೀಗ ಮತ್ತೆ ನಟನೆ ಆರಂಭಿಸಿದ್ದಾರೆ. ಕನ್ನಡ ಸಿನಿಮಾಗಳಲ್ಲಿ ನಟಿಸುವಾಗ ಬಹಳಷ್ಟು ಜನ ಆಕೆಯನ್ನು ಕನ್ನಡತಿ ಎಂದೇ ತಿಳಿದಿದ್ದರು. ಮೂಲತ: ತೆಲುಗು ಕುಟುಂಬಕ್ಕೆ ಸೇರಿದ ಗೌತಮಿ ಹುಟ್ಟಿ ಬೆಳೆದದ್ದು ಆಂಧ್ರದ ಪಶ್ಚಿಮ ಗೋದಾವರಿ ಜಿಲ್ಲೆಯ ನಿಡದವೋಲು ಎಂಬ ಗ್ರಾಮದಲ್ಲಿ. ಅವರ ಪೂರ್ತಿ ಹೆಸರು ಗೌತಮಿ ತಡಿಮಲ್ಲ.

ಶಾಲಾ, ಕಾಲೇಜು ಓದುವ ಸಮಯದಲ್ಲೇ ಆ್ಯಕ್ಟಿಂಗ್ ಬಗ್ಗೆ ಆಸಕ್ತಿ ಇದ್ದ ಗೌತಮಿ ವಿಶಾಖಪಟ್ಟಣಂನಲ್ಲಿ ಇಂಜಿನಿಯರಿಂಗ್ ಓದುವ ಸಮಯದಲ್ಲಿ ಮಾಡೆಲಿಂಗ್ನತ್ತ ಆಕರ್ಷಿತರಾದರು. ಇದು ಚಿತ್ರರಂಗಕ್ಕೆ ಬರಲು ಸಹಕಾರವಾಯಿತು. ತಮಿಳು ಚಿತ್ರದ ಮೂಲಕ ಆ್ಯಕ್ಟಿಂಗ್ ಕರಿಯರ್ ಆರಂಭಿಸಿದರು.

ನಂತರ ಅವರು ಸಂದೀಪ್ ಭಾಟಿಯಾ ಎಂಬ ಉದ್ಯಮಿಯನ್ನು ವಿವಾಹವಾದರು. ಈ ದಂಪತಿಗೆ ಸುಬ್ಬಲಕ್ಷ್ಮಿ ಎಂಬ ಮಗಳಿದ್ದಾರೆ. ಕೆಲವು ವರ್ಷಗಳ ನಂತರ ಸಂದೀಪ್ನಿಂದ ದೂರವಾದ ಗೌತಮಿ, ತಮಿಳು ನಟ ಕಮಲಹಾಸನ್ ಜೊತೆ 13 ವರ್ಷಗಳ ಕಾಲ ಲಿವಿಂಗ್ ರಿಲೇಶನ್ನಲ್ಲಿ ಇದ್ದರು. ಆದರೆ ಮಕ್ಕಳಾದ ಶ್ರುತಿ ಹಾಗೂ ಅಕ್ಷರ ಸಲುವಾಗಿ ಕಮಲ್ ಹಾಸನ್, ಗೌತಮಿ ಜೊತೆಗಿನ ಸಂಬಂಧವನ್ನು ಮುರಿದುಕೊಂಡರು. ಗೌತಮಿಗೆ 35 ವರ್ಷ ಇರುವಾಗ ಆಕೆ ಸ್ತನ ಕ್ಯಾನ್ಸರ್ಗೆ ಒಳಗಾಗಿದ್ದರು.

ಆದರೆ ಕೆಲವು ವರ್ಷಗಳ ಸತತ ಟ್ರೀಟ್ಮೆಂಟ್ ಪಡೆದು ಆ ಕಾಯಿಲೆಯನ್ನು ಗುಣಪಡಿಸಿಕೊಂಡರು. ‘ಆ ಕಾಯಿಲೆ ಇದೆ ಎಂದು ತಿಳಿದ ನಂತರ ನಾನು ಶಾಕ್ನಲ್ಲಿದ್ದೆ. ಆದರೆ, ಇವೆಲ್ಲಾ ತೊಂದರೆಗಳಿಂದ ಹೊರಬರುವುದು ಅಂತಹ ಕಷ್ಟದ ಮಾತೇನಲ್ಲ ಎಂದು ಅರಿತು ಧೈರ್ಯ ತಂದುಕೊಂಡೆ. ಕೆಲವು ವರ್ಷಗಳ ಕಾಲ ಆ ಕಾಯಿಲೆ ವಿರುದ್ಧ ಹೋರಾಡಿ ನಾನು ಗೆದ್ದಿದ್ದೇನೆ’ ಎಂದು ಅನೇಕ ಇಂಟರ್ವ್ಯೂಗಳಲ್ಲಿ ಗೌತಮಿ ಹೇಳಿಕೊಂಡಿದ್ದಾರೆ.

ಸಿನಿಮಾಗಳಿಂದ ದೂರ ಇದ್ದು ಟೆಲಿವಿಷನ್ ಶೋ, ನಿರೂಪಣೆ, ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದ ಗೌತಮಿ, ಈಗ ಮತ್ತೆ ನಟಿಸುತ್ತಿದ್ದಾರೆ. ವಿಶಾಲ್ ನಾಯಕನಾಗಿ ನಟಿಸುತ್ತಿರುವ ‘ತುಪ್ಪರಿವಾಲನ್-2’ ಚಿತ್ರದ ಮೂಲಕ ಮತ್ತೆ ಆ್ಯಕ್ಟಿಂಗ್ಗೆ ವಾಪಸಾಗಿದ್ದಾರೆ ಗೌತಮಿ. ಈಗ ಚೆನ್ನೈನಲ್ಲಿ ತಮ್ಮ ಪುತ್ರಿ ಸುಬ್ಬಲಕ್ಷ್ಮಿ ಜೊತೆ ವಾಸವಿದ್ದಾರೆ.

LEAVE A REPLY

Please enter your comment!
Please enter your name here