ಮೊಬೈಲ್ ಕಳೆದು ಹೋದ ತಕ್ಷಣ ಏನ್ಮಾಡಬೇಕು ಗೊತ್ತೇ ?

0
181

21ನೇ ಶತಮಾನದಲ್ಲಿ ಮೊಬೈಲ್ ಫೋನ್ಗಳು ನಮ್ಮ ಜೀವನದ ಬಹುದೊಡ್ಡ ಭಾಗವಾಗಿದೆ. ನಮ್ಮ ಎಷ್ಟೊಂದು ಅವಿಭಾಜ್ಯ ಅಂಗವೇ ಆಗಿಬಿಟ್ಟಿದೆ. ನಮ್ಮ ಹೆಚ್ಚಿನ ಮಾಹಿತಿಗಳೆಲ್ಲವೂ ಫೋನ್ನಲ್ಲಿಯೇ ಸೇವ್ ಆಗಿರುತ್ತದೆ. ಹೀಗಿದ್ದಾಗ ಈ ಮೊಬೈಲ್ ಕಳೆದುಹೋದರೆ ಏನು ಮಾಡಬೇಕೆಂಬ ದಿಕ್ಕೇ ತೋಚುವುದಿಲ್ಲ.

 

ಫೋನ್ ಕಳೆದು ಹೋದರೆ ಎಲ್ಲರೂ ಹೇಳುವುದು ಮೊದಲು ಸಿಮ್ ಬ್ಲಾಕ್ ಮಾಡಿಸಿ ಎಂದು. ಅಂಡ್ರಾಯ್ಡ್ ಫೋನ್ ಆಗಿದ್ದರೆ ಅದರಲ್ಲಿರುವ ಮಾಹಿತಿಗಳನ್ನೂ ನಾವು ಡಿಲೀಟ್ ಮಾಡಬಹುದು. ಅಕಸ್ಮಾತ್ ಫೋನ್ ಸ್ವಿಚ್ ಆನ್ ಆಗಿದ್ದು, ಅದರಲ್ಲಿ ಮೊಬೈಲ್ ಡೇಟಾ ಆನ್ ಆಗಿರಬೇಕು. ಲೊಕೇಶನ್ ಆನ್ ಆಗಿದ್ದು, ಗೂಗಲ್ ಖಾತೆಗೆ ಸೈನ್ ಆಗಿರಬೇಕು. ಹೀಗಿದ್ದರೆ ಮಾತ್ರ ನೀವು ಕುಳಿತಲ್ಲಿಂದ ನಿಮ್ಮ ಫೋನ್ನಲ್ಲಿರುವ ಮಾಹಿತಿ ಡಿಲೀಟ್ ಮಾಡಿ ಫೋನ್ ಲಾಕ್ ಮಾಡಬಹುದು.

 

 

ಫೋನ್ ನಲ್ಲಿ ಮೊದಲು ಗೂಗಲ್ ಸರ್ಚ್ ನಲ್ಲಿ Find My phone ಸರ್ಚ್ ಮಾಡಿ https://myaccount.google.com/intro/find-your-phone ಲಿಂಕ್ ಕ್ಲಿಕ್ಕಿಸಿ. Sign into Start ಕ್ಲಿಕ್ ಮಾಡಿ ಗೂಗಲ್ ಖಾತೆಗೆ ಸೈನ್ ಇನ್ ಆಗಿ. ಖಾತೆಗೆ ಸೈನ್ ಇನ್ ಆಗುತ್ತಿದ್ದಂತೆ ಗೂಗಲ್ ಮ್ಯಾಪ್ ಮತ್ತು ಎಡಭಾಗದಲ್ಲಿ ನಿಮ್ಮ ಫೋನ್ ವಿವರಗಳು ಡಿಸ್ಪ್ಲೇ ಆಗುತ್ತದೆ. ಮ್ಯಾಪ್ನಲ್ಲಿ ತೋರಿಸುವ ಲೊಕೇಶನ್ ನಿಮ್ಮ ಫೋನ್ ಇರುವ ಖಚಿತ ಲೊಕೇಶನ್ ಆಗಿರದಿದ್ದರೂ, ಹತ್ತಿರದ ಲೊಕೇಶನ್ಗಳನ್ನು ತೋರಿಸುತ್ತದೆ.

 

ಮೊಬೈಲ್ ಸೈಲಂಟ್ ಮೋಡ್ನಲ್ಲಿ ಇದ್ದರೂ Play Sound ಕ್ಲಿಕ್ ಮಾಡಿದಾಗ 5 ನಿಮಿಷಗಳ ಕಾಲ ನಿಮ್ಮ ಮೊಬೈಲ್ ರಿಂಗಣಿಸುತ್ತದೆ. ನಿಮ್ಮ ಫೋನ್ಗೆ ಲಾಕ್ ಇಲ್ಲದೇ ಇದ್ದರೂ ಲಾಕ್ ಸೆಟ್ ಮಾಡಬಹುದು. ಫೋನ್ ಮೆಮೊರಿಯಲ್ಲಿ ಸೇವ್ ಮಾಡಿಟ್ಟಿರುವ ಮಾಹಿತಿ ಮಾತ್ರ ಡಿಲೀಟ್ ಆಗುತ್ತದೆ. ಎಸ್ಡಿ ಕಾರ್ಡ್ ನಲ್ಲಿರುವ ಮಾಹಿತಿ ಡಿಲೀಟ್ ಆಗಲಾರದು.

LEAVE A REPLY

Please enter your comment!
Please enter your name here