ಕರ್ನಾಟಕ ಈ ಪರಿಸ್ಥಿತಿಯಲ್ಲಿರುವಾಗ ಸುಮಲತಾ ಹೀಗೆ ಮಾಡಿದ್ದಕ್ಕೆ ಜನರ ಅಸಮಾಧಾನ….!

0
109

ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿತ್ತು
ಅದರಲ್ಲಿಯೂ ಉತ್ತರ ಕರ್ನಾಟಕದಲ್ಲಿ ಜನರು ಮಳೆಯಿಂದ ಉಂಟಾಗಿರುವ ಜಲಪ್ರಳಯಕ್ಕೆ ತತ್ತರಿಸಿ ಹೋಗಿದ್ದಾರೆ
ಊಟ ವಸತಿಗಾಗಿ ಆಶ್ರಯವನ್ನು ಬೇಡುತ್ತಿದ್ದಾರೆ

ಮತ್ತೊಂದು ಕಡೆ ದೇಶದ ಹಿರಿಯ ನಾಯಕರೊಬ್ಬರನ್ನು ಕಳೆದುಕೊಂಡು ದುಃಖದಲ್ಲಿ ಮುಳುಗಿದ್ದೇವೆ

ಇಂತಹ ಪರಿಸ್ಥಿತಿಯಲ್ಲಿ ಮಂಡ್ಯದ ಸಂಸದೆಯಾಗಿರುವ ಸುಮಲತಾ ಅಂಬರೀಶ್ ಅವರು ಮಾಡಿದ್ದ ಈ ಕೆಲಸದಿಂದ ಕರ್ನಾಟಕದಾದ್ಯಂತ ಜನ ಕೆರಳಿದ್ದು
ತಮ್ಮ ಆಕ್ರೋಶವನ್ನು ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಹೊರಹಾಕುತ್ತಿದ್ದಾರೆ.

ಅಷ್ಟಕ್ಕೂ ಸುಮಲತಾ ಮಾಡಿದ್ದಾದರೂ ಏನು ಹೇಳ್ತೀವಿ ಬನ್ನಿ

ಕರ್ನಾಟಕ ಈಗ ಅಕ್ಷರಶಃ ಜಲಪ್ರಳಯದಿಂದ ಮುಳುಗಿಹೋಗಿದೆ
ಉಳ್ಳವರು , ರಾಜಕಾರಣಿಗಳು , ಸೆಲೆಬ್ರಿಟಿಗಳು , ಸಾಮಾನ್ಯ ಜನರು ಕೂಡ ಇಲ್ಲದವರಿಗಾಗಿ ಹಾಗೂ ಕಷ್ಟದ ಪರಿಸ್ಥಿತಿಯಲ್ಲಿ ಸಿಲುಕಿಕೊಂಡವರಿಗಾಗಿ ಸಹಾಯ ಹಸ್ತವನ್ನು ಚಾಚಬೇಕಾದ ಪರಿಸ್ಥಿತಿ ಎದುರಾಗಿದೆ.

ಇದೇ ವೇಳೆ ಕರ್ನಾಟಕದಲ್ಲಿ ಏಕ ಮಾತ್ರವಾಗಿ ಪಕ್ಷೇತರ ಅಭ್ಯರ್ಥಿಯಾಗಿ ಆಯ್ಕೆಯಾಗಿ ಹೋಗಿರುವ ಸುಮಲತಾ ಅಂಬರೀಶ್ ಅವರು ಈ ಕೆಲಸ ಮಾಡಿದ್ದರಿಂದ ಜನ ಕೆರಳಿ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ

ಹೌದು ಇದಕ್ಕೆ ಕಾರಣ ಏನಪ್ಪಾ ಅಂದ್ರೆ ದೆಹಲಿಯ ಕರ್ನಾಟಕ ಭವನದಲ್ಲಿ ಸಿಎಂ ಯಡಿಯೂರಪ್ಪನವರ ಜೊತೆಗಿನ ಡಿನ್ನರ್ ಮೀಟಿಂಗ್ ನಡೆದಿದ್ದು
ಈ ಬಗ್ಗೆ ಡಿನ್ನರ್ ಮುಗಿಸಿದ ಸುಮಲತಾ ಅಂಬರೀಶ್ ಅವರು
ಬಿಜೆಪಿಯ ಜೊತೆ ಭರ್ಜರಿಯಾಗಿ ಭೋಜನ ಸವಿದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ
ಜನರು ಏನ್ ಮೇಡಂ ಒಂದು ಕಡೆ ಕರ್ನಾಟಕ ಮಳೆಯಿಂದ ನಲುಗಿ ಹೋಗಿದ್ದರೆ
ಇನ್ನೊಂದು ಕಡೆ ದೇಶದ ಪ್ರಮುಖ ವ್ಯಕ್ತಿಯನ್ನು ಕಳೆದುಕೊಂಡು ಆಘಾತಕ್ಕೆ ಒಳಗಾಗಿದ್ದೇವೆ
ನೀವು ಮಾತ್ರ ಚೆನ್ನಾಗಿ ಸವಿ ಭೋಜನ ಸವಿಯುತ್ತ ಅದನ್ನು ಹೇಳಿಕೊಂಡು ತಿರುಗುತ್ತಿದ್ದೀರ ಹಾಗೂ ಈ ಸಮಯದಲ್ಲಿ ಇದು ಬೇಕಿತ್ತಾ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ

ಸುಮಲತಾ ಅವರ ಈ ನಡೆಗೆ ಜನರ ಪ್ರತಿಕ್ರಿಯೆ ಹೇಗಿತ್ತು ನೀವೇ ನೋಡಿ

ಇನ್ನು ಮಂಡ್ಯದಲ್ಲಿ ಸುಮಲತಾ ಅವರು ನಿಂತಾಗ
ಇಡೀ ಕರ್ನಾಟಕವೇ ಅವರಿಗೆ ಬೆಂಬಲಿಸಿದ್ದು
ಗೊತ್ತೇ ಇದೆ
ಆದರೆ ಸುಮಲತಾ ಅವರು ಈ ರೀತಿ ಮಾಡಿದಾಗ ಕರ್ನಾಟಕದ ಜನ ಎಂದು ಕೂಡ ಒಪ್ಪುವುದಿಲ್ಲ ಎಂಬುದನ್ನು ಸಹ ಅವರು ತಿಳಿದುಕೊಳ್ಳಬೇಕಿತ್ತು.

ಮತ್ತಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸಲ್ಲಿ ತಿಳಿಸಿ
ಧನ್ಯವಾದಗಳು.

LEAVE A REPLY

Please enter your comment!
Please enter your name here