ಪ್ರಸ್ತುತ ದಿನಗಳಲ್ಲಿ ಒಂದು ನಿರ್ಮಾಪಕನಾಗಿ ಕೆಲಸ ಮಾಡುವುದು ಸುಲಭದ ಕೆಲಸವಲ್ಲ. ನನಗೆ ಇರುವ ಮಾರುಕಟ್ಟೆಗೆ ಅನುಗುಣವಾಗಿ ನಿರ್ಮಾಪಕರು ಮುಂದೆ ಬಂದರೆ ಅವರ ಸಿನಿಮಾಗಳಲ್ಲಿ ನಟನೆ ಮಾಡಲು ಮುಂದಾಗುತ್ತೇನೆ. ಅದರ ಬದಲಾಗಿ ನಾನೇ ನನ್ನದೇ ಸ್ವಂತ ಬ್ಯಾನರ್ ಅಡಿಯಲ್ಲಿ ಕೆಲಸ ಮಾಡುವುದಕ್ಕಿಂತ ಬೇರೆಯವರ ಬ್ಯಾನರ್ ಅಡಿಯಲ್ಲಿ ಕೆಲಸ ಮಾಡುವುದು ಸೂಕ್ತ ಎಂದಿದ್ದಾರೆ ನಿಖಿಲ್ ಕುಮಾರಸ್ವಾಮಿ.
ಅಭಿಷೇಕ್ ಮತ್ತು ನಾನು ಒಳ್ಳೆಯ ಸ್ನೇಹಿತರು. ಚಿತ್ರರಂಗದಲ್ಲಿ ಅವರ ಕೂಡ ಬೆಳೆಯಬೇಕು. ಈಗಾಗಲೇ ಅವರು ನಟಿಸಿರುವ ಚಿತ್ರ ಬಿಡುಗಡೆಯಾಗಿದೆ. ವೈಯಕ್ತಿಕವಾಗಿ ಅವರ ಜೊತೆ ಸಂಪರ್ಕದಲ್ಲಿದ್ದೇನೆ. ರಾಜಕೀಯದ ಹೊರತಾಗಿಯೂ ಅವರ ಜೊತೆಗೆ ಸ್ನೇಹ ಸಂಬಂಧ ಹೊಂದಿದ್ದೇವೆ ಎಂದಿದ್ದಾರೆ.
ಸೀತಾರಾಮ ಕಲ್ಯಾಣ ಆಯ್ತು, ಕುರುಕ್ಷೇತ್ರ ಆಯ್ತು ಮದ್ವೆ ಯಾವಾಗ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಮದ್ವೆ ಬಗ್ಗೆ ನನಗೆ ಗೊತ್ತಿಲ್ಲ. ಅದು ನನ್ನ ಹಣೆಬರಹ ಎಂದರು. ಅಲ್ಲದೇ, ನಾನೊಬ್ಬ ಭಾವನಾತ್ಮಕ ಜೀವಿ. ನನಗೂ ಒಬ್ಬ ಸಂಗಾತಿ ಅವಶ್ಯಕತೆ ಇದೆ ಎಂದೇ ಯೋಚನೆ ಮಾಡುತ್ತೇನೆ. ಹೆಣ್ಣು, ಹೊನ್ನು, ಮಣ್ಣು ಇದೆಲ್ಲವೂ ಆಯಾ ಸಮಯ ಬಂದಾಗಲೇ ಸಿಗುವುದು. ಅದಕ್ಕಾಗಿ ಯಾವುದೇ ಆತುರವಿಲ್ಲ. ಮನೆಯಲ್ಲಿ ಯಾರನ್ನು ನೋಡುತ್ತಾರೋ ಅವರಿಗೆ ತಾಳಿ ಕಟ್ಟಲು ಸಿದ್ಧ ಎಂದರು.