ರಶ್ಮಿಕಾ ಮಂದಣ್ಣ ಬ್ಯಾಗ್‍ ನಲ್ಲಿ ಏನಿದೆ? ತಪ್ಪದೇ ಒಂದು ವಸ್ತುವನ್ನು ಕಿರಿಕ್‍ ಬೆಡಗಿ ಕ್ಯಾರಿ ಮಾಡ್ತಾರೆ

0
145

ಸ್ಟಾರ್‍ ಸೆಲೆಬ್ರೆಟಿಗಳ ವೈಯಕ್ತಿಕ ವಿಷಯಗಳನ್ನು ತಿಳಿದುಕೊಳ್ಳಲು ಅವರ ಅಭಿಮಾನಿಗಳು ಬದುಕಿನ ಬಗ್ಗೆ ತಿಳಿದುಕೊಳ್ಳಲು ಸಾಕಷ್ಟು ಕುತೂಹಲವನ್ನು ಹೊಂದಿರುತ್ತಾರೆ. ತಮ್ಮ ತಮ್ಮ ಫೆವರೇಟ್‍ ನಟ-ನಟಿಯರ ಮೊಬೈಲ್‍ ನಲ್ಲಿ ಏನಿದೆ? ತಮ್ಮ ಬ್ಯಾಗ್‍ಗಳಲ್ಲಿ ಏನೆಲ್ಲಾ ವಸ್ತುಗಳನ್ನು ಕ್ಯಾರಿ ಮಾಡುತ್ತಾರೆ ಎಂಬುದನ್ನು ತಿಳಿದುಕೊಳ್ಳಬೇಕೆಂಬ ಕುತೂಹಲ ಮತ್ತೂ ಹೆಚ್ಚಿರುತ್ತದೆ.
ಸಾಮಾನ್ಯವಾಗಿ ಸೆಲೆಬ್ರೆಟಿಗಳು ಯಾವುದೇ ಫಂಕ್ಷನ್‍ ಗೆ ಹೋಗಬೇಕಾದರೂ ಕೂಡ ಒಂದು ಚಿಕ್ಕ ಬ್ಯಾಗನ್ನು ಯಾವಾಗಲೂ ಕೈಯಲ್ಲಿ ಹಿಡಿದುಕೊಂಡು ಹೋಗುವುದನ್ನು ನೋಡಿರುತ್ತೇವೆ. ಆ ಬ್ಯಾಗ್‍ಗಳಲ್ಲಿ ಅವರಿಗೆ ಅವಶ್ಯಕತೆ ಇರುವ ವಸ್ತುಗಳನ್ನು ಕ್ಯಾರಿ ಮಾಡುತ್ತಾರೆ. ನಟಿಯರ ಬ್ಯಾಗ್ ನಲ್ಲಿ ಸಾಮಾನ್ಯವಾಗಿ ಮೇಕಪ್‍ ಸಾಮಾನು, ಶೇಡ್ಸ್‍, ಲಿಪ್‍ಸ್ಟಿಕ್, ಕ್ರೀಂ ಹೀಗೆ ಹಲವಾರು ಅಗತ್ಯ ಕಾಸ್ಮಿಟಿಕ್ ಗಳನ್ನು ಇಟ್ಟುಕೊಂಡಿರುತ್ತಾರೆ.
ಕನ್ನಡ ಚಿತ್ರರಂಗದಲ್ಲಿ ಆಗಾಗ್ಗೆ ಟ್ರೋಲ್‍ ಆಗುತ್ತಿರುವ ಕರ್ನಾಟಕದ ಕ್ರಶ್‍ ರಶ್ಮಿಕಾ ಮಂದಣ್ಣ ಅವರ ಬ್ಯಾಗ್‍ ನಲ್ಲಿ ಏನೆಲ್ಲಾ ಇಟ್ಟುಕೊಂಡಿರುತ್ತಾರೆ ಎಂಬುದನ್ನು ಸ್ವತಃ ಅವರೇ ರಿವೀಲ್‍ ಮಾಡಿದ್ದಾರೆ. ಸ್ಯಾಂಡಲ್‍ವುಡ್‍ ಮೂಲಕ ಸಿನಿಮಾ ಜಗತ್ತಿಗೆ ಕಾಲಿಟ್ಟರೂ ಕೂಡ ಟಾಲಿವುಡ್‍ ನಲ್ಲಿ ಸಾಕಷ್ಟು ಹೆಸರು ಗಳಿಸುತ್ತಿದ್ದಾರೆ. ದಕ್ಷಿಣ ಭಾರತದ ಬಹುಬೇಡಿಕೆಯ ನಟಿ ರಶ್ಮಿಕಾ ಮಂದಣ್ಣ ಅವರ ಬ್ಯಾಗ್‍ ನಲ್ಲಿ ಏನೆಲ್ಲಾ ಇರುತ್ತವೆ ಎಂಬುದು ತಿಳಿದಿದೆ.
ವಾಟ್‍ ಇಸ್‍ ಇನ್‍ ಯುವರ್‍ ಬ್ಯಾಗ್‍ ಟಾಸ್ಕ್‍ ನಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ. ರಶ್ಮಿಕಾ ಬ್ಯಾಗ್‍ ನಲ್ಲಿ ಐಪ್ಯಾಡ್‍, ಮುಂದಿನ ಚಿತ್ರಗಳ ಸ್ಕ್ರಿಪ್ಟ್‍ಗಳು, ನಾಲ್ಕೈದು ಶೇಡ್ಸ್‍ಗಳು, ಹೆಡ್‍ಫೋನ್‍, ಮಾಶ್ಚುರೈಸರ್ಸ್‍ ಕ್ರೀಂ, ಪರ್‍ಫ್ಯೂಮ್‍, ವೆಟ್‍ ಟಿಶ್ಶೂ ಸೇರಿ ಸಾಕಷ್ಟು ವಸ್ತುಗಳು ಅವರ ಬ್ಯಾಗ್ ನಲ್ಲಿ ಇರುತ್ತವೆಯಂತೆ.
ಇಷ್ಟೆಲ್ಲಾದರ ನಡುವೆ ಬಹಳ ಪ್ರಮುಖವಾದ ವಸ್ತುವೊಂದನ್ನು ರಶ್ಮಿಕಾ ತಪ್ಪದೇ ತಮ್ಮ ಜೊತೆ ಕ್ಯಾರಿ ಮಾಡುತ್ತಾರಂತೆ. ಅದೇನಪ್ಪಾ ಅಂದರೆ ಚಾಕೋಲೇಟ್‍. ಹೌದು ರಶ್ಮಿಕಾಗೆ ಚಾಕೊಲೇಟ್‍ ಅಂದರೆ ತುಂಬಾನೇ ಇಷ್ಟ. ಈ ಎಲ್ಲಾ ವಸ್ತುಗಳಿಗಿಂತ ನನಗೆ ಚಾಕೋಲೇಟ್‍ ಅಂದರೆ ತುಂಬಾ ಇಷ್ಟ ಅನ್ನೋ ಕಾರಣಕ್ಕಾಗಿ ಅದನ್ನು ಇಟ್ಟುಕೊಂಡಿರುತ್ತಾರಂತೆ.
ಬ್ಯಾಗ್ ನಲ್ಲಿರುವ ಉಳಿದ ವಿಚಾರಗಳಿಗೆ ಪ್ರಾಮುಖ್ಯತೆ ಕೊಡುವುದೇ ಇಲ್ಲ. ಯಾವುದೇ ವಸ್ತುವನ್ನು ಹಂಚಿಕೊಂಡು ತಿನ್ನುತ್ತೇನೆ. ಆದರೆ ಚಾಕೋಲೇಟ್‍ ವಿಚಾರದಲ್ಲಿ ಮಾತ್ರ ಬಹಳ ಸ್ವಾರ್ಥಿ. ಎಂದಿಗೂ ಚಾಕೋಲೇಟ್‍ ಶೇರ್‍ ಮಾಡುವ ಮಾತೇ ಇಲ್ಲ ಎಂದು ಕಿರಿಕ್‍ ಬೆಡಗಿ ಹೇಳಿದ್ದಾರೆ.

LEAVE A REPLY

Please enter your comment!
Please enter your name here