ಏನಾಗುತ್ತೆ ಡಿ.ಕೆ. ಶಿವಕುಮಾರ್ ಭವಿಷ್ಯ..?!

0
347

ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗುತ್ತಿದ್ದಂತೆ ಕಾಂಗ್ರೆಸ್‍ನ ಪ್ರಭಾವಿ ನಾಯಕ ಡಿ.ಕೆ. ಶಿವಕುಮಾರ್‍ಗೆ ಹೊಸ ಸಂಕಷ್ಟ ಎದುರಾಗಿದೆ. ಈ ಹಿಂದೆ ನವದೆಹಲಿಯ ಡಿಕೆಶಿ ಮನೆಗಳಲ್ಲಿ ದೊರೆತ 8.60 ಕೋಟಿ ರೂಪಾಯಿಗಳಷ್ಟು ನಗದು ಪತ್ತೆ ಪ್ರಕರಣದ ಸಂಬಂಧ ಜಾರಿ ನಿರ್ದೇಶನಾಲಯ ಹೊರಡಿಸಿರುವ ಸಮನ್ಸ್ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ಇಡಿಗೆ ನೋಟೀಸ್ ನೀಡಲು ಹೈಕೋರ್ಟ್ ನಿರಾಕರಿಸಿದೆ. ಹೈಕೋರ್ಟ್ ನೀಡಿದ ಈ ಆದೇಶದಿಂದ ಇಂದು ವಿಚಾರಣೆಗೆ ಗ್ರೀನ್ ಸಿಗ್ನಲ್ ನೀಡಿದಂತಾಗಿದೆ. ಹೀಗಾಗಿ ಇಡಿ ಇದೀಗ ಡಿ.ಕೆ. ಶಿವಕುಮಾರ್ ಅವರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯುವ ಸಾಧ್ಯತೆ ಇದೆ.

ಇನ್ನು ನ್ಯಾ.ಅರವಿಂದ ಕುಮಾರ್ ಅವರಿದ್ದ ನ್ಯಾಯಾಪೀಠ ತನ್ನ ತೀರ್ಪು ನೀಡುವ ವೇಳೆಯಲ್ಲಿ 120 ಬಿ ಪ್ರತ್ಯೇಕ ಒಳಸಂಚು ಎಂದು ಪರಿಗಣಿಸಬಹುದು ಎಂದಿದೆ. ಅಧಿಸೂಚಿತ ಅಪರಾಧಗಳಲ್ಲದೇ ಇನ್ನಿತ್ತರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೂಡ ತನಿಖೆ ನಡೆಸಬಹುದು ಎಂದು ನ್ಯಾಯಾಪೀಠ ಅಭಿಪ್ರಾಯ ಪಟ್ಟಿದೆ. ಇನ್ನು ಡಿ.ಕೆ.ಶಿವಕುಮಾರ್ ಅವರ ಪರವಾಗಿ ಹಿರಿಯ ವಕೀಲ ಕಪಿಲ್ ಸಿಬಾಲ್ ವಾದ ಮಂಡಿಸಿದರು.

ಸದ್ಯದ ಮಾಹಿತಿಯ ಪ್ರಕಾರ ಡಿಕೆಶಿ ಅವರನ್ನು ವಶಕ್ಕೆ ಪಡೆಯಲು ಇಡಿ ಎಲ್ಲ ಸಿದ್ದತೆ ನಡೆಸಿದೆ. ಆದರೆ ಎಷ್ಟು ದಿನಗಳವರೆಗೆ ವಶಕ್ಕೆ ಪಡೆಯಬಹುದು ಎಂಬ ಬಗ್ಗೆ ನಿಖರ ಮಾಹಿತಿಯಿಲ್ಲ. ಒಂದು ವೇಳೆ ಡಿ.ಕೆ. ಶಿವಕುಮಾರ್ ಅವರ ಬಂಧನವಾದ್ರೆ ರಾಜ್ಯ ರಾಜಕೀಯದಲ್ಲಿ ಭಾರೀ ಕೋಲಾಹಲ ಉಂಟಾಗಲಿದೆ. ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿರುವ ಡಿಕೆಶಿ ಭವಿಷ್ಯಕ್ಕೆ ಹಿನ್ನಡೆಯಾಗಲಿದೆ. ಮುಂದಿನ ದಿನಗಳಲ್ಲಿ ಡಿಕೆಶಿ ಅವರನ್ನು ಉನ್ನತ ಮಟ್ಟದ ತನಿಖೆಗಾಗಿ ದೆಹಲಿಗೂ ಕರೆದುಕೊಂಡು ಹೋಗಬಹುದು. ಇಲ್ಲವೇ ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸಬಹುದು. ಒಟ್ಟಾರೆಯಾಗಿ ಕನಕಪುರದ ಬಂಡೆ ಇದೀಗ ಸಂಕಷ್ಟದ ಸುಳಿಗೆ ಸಿಲುಕಿದೆ.

LEAVE A REPLY

Please enter your comment!
Please enter your name here