ಛೇ ಇಂದೆಂಥಾ ಅಸಹ್ಯ ! ಯಶ್ ಫ್ಯಾನ್ಸ್ ರಿಂದ ಸ್ಟಾರ್ ನಟಿಗೆ ಅದುದ್ದಾದರು ಏನು..?

0
187

ನಟ ಯಶ್ ಅಂದ್ರೆ ಸಾಕು ಕೇವಲ ಸ್ಯಾಂಡಲ್ ವುಡ್ ಅಲ್ಲ. ಇಡೀ ಭಾರತ ಚಿತ್ರರಂಗವೇ ತಿರುಗಿ ನೋಡುತ್ತದೆ. ಅಂತಹ ಯಶ್ಗೆ ರಾಜ್ಯದಲ್ಲಿ ಮಾತ್ರವಲ್ಲ ದೇಶಾದ್ಯಂತ ಸಾವಿರಾರು ಅಭಿಮಾನಿಗಳಿದ್ದಾರೆ. ಅದರಲ್ಲೂ ಕೆಜಿಎಫ್ ಮೂವಿ ಹಿಟ್ ಆಗಿ ಬಹು ಭಾಷೆಯಲ್ಲಿ ಪ್ರದರ್ಶನಗೊಂಡ ಬಳಿಕವಂತೂ ಯಶ್ಗೆ ಟಾಲಿವುಡ್, ಬಾಲಿವುಡ್, ಕಾಲಿವುಡ್, ಮಾಲಿವುಡ್ನಲ್ಲೂ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಸದ್ಯಕ್ಕೆ ಕೆಜಿಎಫ್ ಚಾಪ್ಟರ್-2 ಚಿತ್ರೀಕರಣದಲ್ಲಿ ತೊಡಗಿಕೊಂಡಿರುವ ಯಶ್ ಅವರ ಅಭಿಮಾನಿಗಳ ಆರ್ಭಟ ಹೆಚ್ಚಾಗಿದೆ.

ಅವರ ಆರ್ಭಟಕ್ಕೆ ಸಿಲುಕಿರುವುದು ಕನ್ನಡದ ನಟಿಯೋರ್ವರ ಹೆಸರಿನಿಂದ. ಸ್ಟಾರ್ ನಟ ಯಶ್ ಅಭಿಮಾನಿಗಳು ಕನ್ನಡದ ನಟಿ ಸಂಗೀತಾ ಭಟ್ ಹಾಗೂ ಅವರ ಪತಿ ಸುದರ್ಶನ್ ವಿರುದ್ಧ ಸದ್ಯ ಏಕಾಏಕಿ ತಿರುಗಿಬಿದ್ದಿದ್ದಾರೆ. ಅಲ್ಲದೇ ತಮ್ಮ ಕುರಿತಾಗಿ ಅಶ್ಲೀಲ ಮೆಸೇಜ್ಗಳನ್ನು ಕಳುಹಿಸಿ ಮಾನಸಿಕವಾಗಿ ಹಿಂಸಿಸುತ್ತಿದ್ದಾರೆ ಎಂದು ನಟಿ ದೂರಿದ್ದಾರೆ. ಅಲ್ಲದೇ ಈ ಯಶ್ ಅಭಿಮಾನಿಗಳ ವಿರುದ್ಧ ಇನ್ಸ್ಟಾಗ್ರಾಂನಲ್ಲಿ ಸಂಗೀತಾ ಭಟ್ ನೇರವಾಗಿ ಯಶ್ ಅವರಿಗೇ ದೂರು ನೀಡಿದ್ದಾರೆ. ಹೆಣ್ಣಿನ ಬಗ್ಗೆ ಈ ರೀತಿ ಅಶ್ಲೀಲವಾಗಿ ಮೆಸೇಜ್ ಮಾಡುವುದು ಎಷ್ಟರ ಮಟ್ಟಿಗೆ ಸರಿ? ಎಂದು ರಾಧಿಕಾ ಪಂಡಿತ್ರನ್ನೂ ಟ್ಯಾಗ್ ಮಾಡಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಅಷ್ಟಕ್ಕೂ ನಟಿ ಸಂಗೀತಾ ಭಟ್ ರವರು ಎರಡನೇ ಸಲ, ದಯವಿಟ್ಟು ಗಮನಿಸಿ ಸಿನಿಮಾದಲ್ಲಿ ಅಭಿನಯಿಸಿದ್ದು, ಅವರ ಪತಿ ಸುದರ್ಶನ್ ಲೋಲ್ಬಾಗ್ನಲ್ಲಿ ಸ್ಟಾಂಡ್ಅಪ್ ಕಾಮೆಡಿಯನ್ ಆಗಿ ಕಾರ್ಯಕ್ರಮ ನೀಡುತ್ತಿರುತ್ತಾರೆ. ಕಳೆದ ಎರಡು ವರ್ಷದ ಹಿಂದೆ ಸುದರ್ಶನ್ ಲೋಲ್ಬಾಗ್ ಶೋನಲ್ಲಿ ಕಾಮೆಡಿ ಮಾಡುವಾಗ ನಟ ಯಶ್ ಕಾಲೆಳೆದು ಕಾಮಿಡಿ ಮಾಡಿದ್ದರು. ಸದ್ಯ ಅದೇ ವಿಡಿಯೋ ಈಗ ಯೂಟ್ಯೂಬ್ನಲ್ಲಿ ಹರಿದಾಡುತ್ತಿದೆ.

ಸ್ಟಾಂಡ್ಅಪ್ ಕಾಮಿಡಿಯಲ್ಲಿ ನಟ ಯಶ್ ಹೆಸರು ಪ್ರಸ್ತಾಪಿಸಿದ್ದ ಸುದರ್ಶನ್ ನಮ್ಮ ರಾಕಿಂಗ್ ಸ್ಟಾರ್ ಯಶ್ ಸಿನಿಮಾಗಳಲ್ಲಿ ಇರುತ್ತದಲ್ಲ ಹಾಗೆ ಕೆಲವರು ಸುಮ್ಮನೆ ಬಿಲ್ಡಪ್ ಕೊಟ್ಟುಕೊಳ್ಳುತ್ತಾ ಇರುತ್ತಾರೆ ಎಂದು ಹೇಳಿದ್ದು ಈಗ ವಿವಾದಕ್ಕೆ ಕಾರಣವಾಗಿದೆ. ಯಶ್ ಡೈಲಾಗ್ ಪ್ರಸ್ತಾಪಿಸಿ ಕಾಮಿಡಿ ಮಾಡಿದ್ದ ಸುದರ್ಶನ್ ಅಣ್ತಮ್ಮಾಸ್ ಎಂದು ಯಶ್ ಕಾಲೆಳೆದಿದ್ದರು. ಇದನ್ನು ಈಗ ಕೆದಕುತ್ತಿರುವ ಯಶ್ ಅಭಿಮಾನಿಗಳು ಸುದರ್ಶನ್ ಮತ್ತು ಅವರ ಪತ್ನಿ ಸಂಗೀತಾ ಭಟ್ ಬಗ್ಗೆ ಅಶ್ಲೀಲವಾ ಮಾತನಾಡುತ್ತಿದ್ದಾರೆ.

ಈ ಬಗ್ಗೆ ಪ್ರಕ್ರಿಯಿಸಿರುವ ಸುದರ್ಶನ್ ನಾನು ಕಾಲೇಜು ಹುಡುಗರ ಬಗ್ಗೆ ಕಾಮಿಡಿ ಮಾಡುತ್ತಾ ಆ ಡೈಲಾಗ್ ಬಳಸಿಕೊಂಡಿದ್ದೆ. ನಾನು ಕೂಡ ಯಶ್ ಜೊತೆಗೆ ಕೆಲಸ ಮಾಡಿದ್ದೇನೆ. ಅವರ ಬಗ್ಗೆ ನನಗೆ ಅಪಾರ ಅಭಿಮಾನವಿದೆ. ನಾನು ಏನೆಂಬುದು ಅವರಿಗೂ ಗೊತ್ತಿದೆ. ಇದರಲ್ಲಿ ಅವಮಾನ ಮಾಡುವ ಉದ್ದೇಶ ಯಾವುದೂ ಇರಲಿಲ್ಲ ಎಂದಿರುವುದಲ್ಲದೇ ತಮ್ಮ ಫೇಸ್ಬುಕ್ನಲ್ಲಿಅವಹೇಳನಕಾರಿ ಪೋಸ್ಟ್ ಹಾಕಿದ್ದವರ ವಿರುದ್ಧ ಸೈಬರ್ ಕ್ರೈಮ್ಗೆ ದೂರು ನೀಡಿದ್ದರು.

ಈ ಹಿಂದೆ ಸುದರ್ಶನ್ ಅವರ ವಿರುದ್ಧ ಕಿಡಿಕಾರಿದ್ದ ಯಶ್ ಅಭಿಮಾನಿಗಳು ಇದೀಗ ಸಂಗೀತಾ ಭಟ್ ಅವರನ್ನೂ ಟಾರ್ಗೆಟ್ ಮಾಡಿದ್ದಾರೆ. ತೀರಾ ಅಶ್ಲೀಲವಾಗಿ ಸಂಗೀತಾ ಭಟ್ಗೆ ಮೆಸೇಜ್ ಮಾಡಿರುವ ಅಪರಿಚಿತರು ತಮ್ಮ ಬಾಸ್ ಯಶ್ ಸುದ್ದಿಗೆ ಬಂದರೆ ನಿನ್ನನ್ನೂ, ನಿನ್ನ ಗಂಡನನ್ನೂ ಬಿಡೋದಿಲ್ಲ ಎಂದು ಬೆದರಿಕೆಯನ್ನೂ ಹಾಕಿದ್ದಾರೆ.

LEAVE A REPLY

Please enter your comment!
Please enter your name here