2020 ನೇ ಇಸವಿಯಲ್ಲಿ ಭಾರತ ಹೇಗಿರುತ್ತದೆ..?!

0
200

2020 ನೇ ಇಸವಿಯಲ್ಲಿ ಭಾರತ ಹೇಗಿರುತ್ತದೆ ಎಂದು ಹೇಳಲು ಸಾಧ್ಯವಿಲ್ಲ, ನಾಯಕರು ಮಾತ್ರ ಭಾರತ ಸೂಪರ್ ಪವರ್ ಆಗಲಿದೆ ಅಂತಿದ್ದಾರೆ ಆದರೆ ನಿಜಕ್ಕೂ ಭಾರತ ಸೂಪರ್ ಪವರ್ ಆಗುತ್ತಾ..? ಈ ಪ್ರಶ್ನೆ ಎಲ್ಲರನ್ನೂ ಕಾಡಲು ಆರಂಭಿಸಿದೆ ಇದಕ್ಕೆ ಕಾರಣ 2020 ಎಂಬ ಆಪತ್ಕಾಲ.

ಭಾರತದ ಆಟೋಮೊಬೈಲ್, ರಿಯಲ್‍ಎಸ್ಟೇಟ್ ಮತ್ತು ಹಣಕಾಸು ವ್ಯವಹಾರಗಳ ಬ್ಯಾಂಕಿಂಗ್ ಕ್ಷೇತ್ರ ಹಿನ್ನಡೆ ಅನುಭವಿಸುತ್ತಿದ್ದು, ಆರ್ಥಿಕ ಹಿಂಜರಿತದ ಸೂಚನೆಗಳು ಈಗಲೇ ಗೋಚರಿಸುತ್ತಿವೆ ಅಂದಿದ್ದಾರೆ. ಇನ್ನೊಂದೆಡೆ ವಿಶ್ವದ ವಿವಿಧ ದೇಶಗಳು ಆರ್ಥಿಕ ಹಿಂಜರಿತ ಕಾಡುತ್ತಿದೆ. ಇದರ ಪರಿಣಾಮ ಎಂಬಂತೆ ಅಮೆರಿಕ ಮತ್ತು ಇತರ ಪ್ರಮುಖ ರಾಷ್ಟ್ರದಲ್ಲಿ ಷೇರುಪೇಟೆ ಸೂಚ್ಯಂಕಗಳು ದಾಖಲೆಯ ಮಟ್ಟದಲ್ಲಿ ಪಾತಾಳಕ್ಕಿಳಿದಿವೆ. ಇದೇ ಈಗ ಆತಂಕ ಹುಟ್ಟಿಸಿರುವ ಬೆಳವಣಿಗೆ. ಮುಂದಿನ ವರ್ಷದಲ್ಲಿ ವಿಶ್ವ ಅದರಲ್ಲಿಯೂ ಭಾರತ ಆರ್ಥಿಕವಾಗಿ ಕುಗ್ಗಿಹೋಗಲಿದೆಯಾ ಎಂಬ ಆತಂಕ ಮನೆ ಮಾಡಿದೆ.

ಕೆಲ ದಿನಗಳಿಂದ ಇಳಿಮುಖವಾಗಿರುವ ಷೇರು ಸೂಚ್ಯಂಕ ಮೇಲೆಳುವ ಲಕ್ಷಣಗಳೇ ಕಾಣುತ್ತಿಲ್ಲ. ಇದು ಆರ್ಥಿಕ ತಜ್ಞರ ನಿದ್ದೆಗೆಡಿಸಿದ್ದು, ಭವಿಷ್ಯದ ಚಿಂತೆ ಕಠೋರವಾಗಿರಲಿದೆ ಎಂದೇ ಭಾಸವಾಗುತ್ತಿದೆ. 2020ರ ಸಮಯಕ್ಕೆ ಅಮೆರಿಕ, ಚೀನಾ ಮತ್ತು ಕೆಲವು ರಾಷ್ಟ್ರಗಳನ್ನು ಆರ್ಥಿಕ ಹೊಡೆತ ಬಾದಿಸಬಹುದು ಎಂದು ಅಂದಾಜಿಸಲಾಗಿದೆ. ಕೆಲ ದಿನಗಳ ಹಿಂದೆ ಕಂಡ ಷೇರು ಸೂಚ್ಯಂಕ ಚೀನಾ ಮತು ್ತಜರ್ಮನಿ ದೇಶಗಳ ಕೈಗಾರಿಕಾ ಉತ್ಪಾದಕತೆಗೆ ಹೊಡೆತ ನೀಡಿವೆ. ಚೀನಾದ ಕೈಗಾರಿಕಾ ಕ್ಷೇತ್ರದ ಉತ್ಪಾದಕತೆ 17 ವರ್ಷ ಹಿಂದಿನ ಅಲ್ಪ ಮಟ್ಟಕ್ಕೆ ಕುಸಿದಿದೆ. ಇನ್ನು ಬಲಾಡ್ಯ ಜರ್ಮನಿ ಉತ್ಪಾದಕ ಕ್ಷೇತ್ರ ಸತತ ದ್ವಿತೀಯ ತ್ರೈಮಾಸಿಕದಲ್ಲೂ ಪಾತಳಕಂಡಿದೆ. ವಿಶ್ವದ ಪ್ರಮುಖ ರಾಷ್ಟ್ರಗಳ ಸಂವೇದಿ ಸೂಚ್ಯಂಕ ಗಮನಿಸಿದ್ರೆ ಪ್ರತಿ ತಿಂಗಳು ಕುಸಿಯುತ್ತಿರುವ ಅಂಶ ಆತಂಕಕ್ಕೀಡು ಮಾಡಿದೆ. ಇದು ಹೆಚ್ಚಾಗುವ ಸಂಭವ ತಳ್ಳಿಹಾಕುವಂತಿಲ್ಲ.

ಇಂತಹ ಆರ್ಥಿಕ ಹಿಂಜರಿಕೆ ಹೊಸದೇನಲ್ಲ ಈ ಹಿಂದೆ 1975, 1982, 1991 ಮತ್ತು 1999ರಲ್ಲಿ ಕಾಣಿಸಿಕೊಂಡು ಆತಂಕ ಹೆಚ್ಚಿಸಿತ್ತು. 1991ರಲ್ಲಿನ ಆರ್ಥಿಕ ಹಿಂಜರಿಕೆಗೆ ನಲುಗಿದ್ದ ಭಾರತದಲ್ಲಿ ಅನೇಕ ರೀತಿಯ ಸಮಸ್ಯೆಗಳು ಮೇಲಿದ್ದಿದ್ದವು, ಇದರ ಪರಿಣಾಮವೇ ಹೊಸ ಆರ್ಥಿಕ ನೀತಿ ಉದಾರೀಕರಣ ತೆರೆದುಕೊಂಡು ಭಾರತದಲ್ಲಿ ಹೊಸ ಆರ್ಥಿಕ ಪರ್ವಕ್ಕೆ ನಾಂದಿಯಾಗಿತ್ತು. ಈಗ ಮತ್ತೊಮ್ಮೆ ಇಂತಹ ಆರ್ಥಿಕ ನೀತಿ ನಿರೂಪಣೆಯ ಬದಲಾವಣೆ ಬಂದೊದಗಲಿದೆಯಾ ಎಂಬುದೇ ಬಹುದೊಡ್ಡ ಪ್ರಶ್ನೆ. ಆರ್ಥಿಕ ಹೊಡೆತಗಳು ಸರ್ಕಾರಗಳನ್ನು ಕೆಡವಿದೆ, ಕಾಯಕ ಕಿತ್ತುಕೊಂಡಿದೆ ಸಾವನ್ನು ಹೊತ್ತು ಮೆರೆದಿದೆ. ಹಾಗಾದ್ರೆ ಬರಲಿರುವ 2020 ಇಂತಹ ಅದೆಷ್ಟೋ ಆಪತ್ತಿನ ಆರಂಭವೇ ಎಂದು ಎನಿಸುತ್ತಿದೆ.

LEAVE A REPLY

Please enter your comment!
Please enter your name here